ತಾಳಿಕೋಟೆ ಪ್ರಜಾಸೌಧ ವಿವಾದ: 37ನೇ ದಿನಕ್ಕೆ ಕಾಲಿಟ್ಟ ಧರಣಿ ಹಿ ಬಾವೂರ ಗ್ರಾಮಸ್ಥರು ಹಾಗೂ ರೈತ ಸಂಘದ ಭರ್ಜರಿ ಬೆಂಬಲ

ತಾಳಿಕೋಟೆ ಪ್ರಜಾಸೌಧ ವಿವಾದ: 37ನೇ ದಿನಕ್ಕೆ ಕಾಲಿಟ್ಟ ಧರಣಿ ಹಿ ಬಾವೂರ ಗ್ರಾಮಸ್ಥರು ಹಾಗೂ ರೈತ ಸಂಘದ ಭರ್ಜರಿ ಬೆಂಬಲ Talikote Praja Soudha controversy: Dharani enters 37th day, receives overwhelming support from Bavo

ತಾಳಿಕೋಟೆ  01: "ಪ್ರಜಾಸೌಧ ಜನರಿಗಾಗಿ ಇರಬೇಕೇ ಹೊರತು, ನಿರ್ಜನ ಪ್ರದೇಶದ ಪಾಲಿಗಲ್ಲ" ಎಂದು ಆಗ್ರಹಿಸಿ ತಾಳಿಕೋಟೆಯ ಬಸವೇಶ್ವರ ವೃತ್ತದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವು ಬುಧವಾರ 37ನೇ ದಿನಕ್ಕೆ ಯಶಸ್ವಿಯಾಗಿ ಮುಂದುವರಿಯಿತು. ಈ ಹೋರಾಟಕ್ಕೆ ಬಾವೂರ ಗ್ರಾಮದ ಸರ್ವ ಸಮಾಜದ ಹಿರಿಯರು ಹಾಗೂ ಅಖಂಡ ಕರ್ನಾಟಕ ರೈತ ಸಂಘ ಭಾರಿ ಬೆಂಬಲ ವ್ಯಕ್ತಪಡಿಸುವ ಮೂಲಕ ಚಳುವಳಿಗೆ ಹೊಸ ಚೈತನ್ಯ ನೀಡಿದರು.

ಜನವಿರೋಧಿ ಸ್ಥಳ ಆಯ್ಕೆ ವಿರುದ್ಧ ಆಕ್ರೋಶ:ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಹಾಗೂ ಬಾವೂರ ಗ್ರಾಮದ ಮುಖಂಡ ಎಚ್‌.ಎಸ್‌. ಪಾಟೀಲ, "ತಾಲೂಕು ಆಡಳಿತ ಕೇಂದ್ರವು ಸಾರ್ವಜನಿಕರಿಗೆ ಸುಲಭವಾಗಿ ಎಟುಕುವಂತಿರಬೇಕು. ಆದರೆ ಈಗ ಗುರುತಿಸಲಾಗಿರುವ ಮೈಲೇಶ್ವರ ಗ್ರಾಮದ ಹತ್ತಿರದ ಜಾಗವು ಪಟ್ಟಣದಿಂದ ಬಹಳ ದೂರವಿದ್ದು, ನಿರ್ಜನ ಪ್ರದೇಶದಲ್ಲಿದೆ.

ಇದು ಮಹಿಳೆಯರ, ವಿದ್ಯಾರ್ಥಿನಿಯರ ಮತ್ತು ವೃದ್ಧರ ಸುರಕ್ಷತೆಯ ದೃಷ್ಟಿಯಿಂದ ಅಪಾಯಕಾರಿ" ಎಂದು ಎಚ್ಚರಿಸಿದರು.ಸ್ಥಳಾಂತರಕ್ಕೆ ಪಟ್ಟು: ಈಗಾಗಲೇ ನಿಗದಿಪಡಿಸಿರುವ ಸ್ಥಳವನ್ನು ಕೂಡಲೇ ರದ್ದುಪಡಿಸಿ, ಪಟ್ಟಣದ ವ್ಯಾಪ್ತಿಯಲ್ಲಿ ಲಭ್ಯವಿರುವ ಸರ್ಕಾರಿ ಜಾಗದಲ್ಲಿಯೇ ಪ್ರಜಾಸೌಧ ನಿರ್ಮಿಸಬೇಕು.ಆಡಳಿತದ ಮೌನ: ಶಾಸಕರಿಗೆ ಹಾಗೂ ಜಿಲ್ಲಾಡಳಿತಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಸ್ವಹಿತಾಸಕ್ತಿಯ ಸಂಚು: ಜಾಗ ನೀಡಿದವರ ಹಿಂದೆ ವೈಯಕ್ತಿಕ ಲಾಭ ಹಾಗೂ ಸ್ವಹಿತಾಸಕ್ತಿ ಅಡಗಿದೆ ಎಂದು ಹೋರಾಟಗಾರರು ಗಂಭೀರವಾಗಿ ಆರೋಪಿಸಿದರು.ಈ ಸಂದರ್ಭದಲ್ಲಿ ಬಾಳಪ್ಪ ಗೌಡ ಲಿಂಗದಳ್ಳಿ, ಸಿದ್ದನಗೌಡ ಪಾಟೀಲ, ಸೈಯದ ಪಟೇಲ ಬಿರಾದಾರ, ಶಂಕರಲಿಂಗ ಆಸ್ಕಿ, ಶಂಕರಲಿಂಗ ಅರವಿ, ಬಸಣ್ಣ ಕುಂಬಾರ, ಬಮ್ಮು ಕೈರುಡಗಿ, ಬಸವರಾಜ ಅರವಿ, ಹನುಮಂತ ಚಲವಾದಿ ಸೇರಿದಂತೆ ನೂರಾರು ರೈತರು ಹಾಗೂ ಯುವಕರು ಭಾಗವಹಿಸಿದ್ದರು.

ಹೋರಾಟ ಸಮಿತಿಯ ಅಧ್ಯಕ್ಷ ದಶರತಸಿಂಗ್ ಮನಗೂಳಿ, ಎಸ್‌.ಬಿ. ಕಟ್ಟಿಮನಿ, ಆರ್ ಎಸ್ ಪಾಟೀಲ (ಕೂಚಬಾಳ) ಮುತ್ತಪ್ಪ ಚಮಲಾಪುರ, , ಕಾಶೀನಾಥ ಮುರಾಳ, ಮುರಿಗೆಪ್ಪ ಸರಶೆಟ್ಟಿ, ದತ್ತು ಹೆಬಸೂರ, ಪರಶುರಾಮ ತಂಗಡಗಿ, ನಾಗೇಶ ಕಟ್ಟಿಮನಿ, ದೇವೇಂದ್ರ ಹಾದಿಮನಿ, ವಿಜಯಸಿಂಗ್ ಹಜೇರಿ, ಮಹೇಶ ಛಲವಾದಿ, ಪ್ರಕಾಶ್ ಹಜೇರಿ ಮುದಕಪ್ಪ ಬಡಿಗೇರ, ಸಿರಸಕುಮಾರ ಹಜೇರಿ, ಮಲ್ಲು ಮೇಟಿ, ಸೇರಿದಂತೆ ಅನೇಕರು ಮತ್ತು ಪಟ್ಟಣದ ಗಣ್ಯರು ಭಾಗವಹಿಸಿದ್ದರು.