ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ
Talent award and felicitation ceremony for talented students
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ
ರಾಣಿಬೆನ್ನೂರು 15: ಭಾರತೀಯ ಸಂಸ್ಕೃತಿ ಪರಂಪರೆಯಲ್ಲಿ ವೇದ ಇತಿಹಾಸ ಕಾಲಗಳಿಂದಲೂ ಗುರುಗಳಿಗೆ ಪರಮ ಪವಿತ್ರ ದೇವರ ಸ್ಥಾನವಿದೆ. ತಂದೆ, ತಾಯಿ ಮತ್ತು ಗುರುಗಳು ಪ್ರತಿಯೊಬ್ಬರ ಬದುಕನ್ನು ರೂಪಿಸುವ ಪ್ರಮುಖ ಶಕ್ತಿಗಳು. ಪ್ರತಿಯೊಬ್ಬರ ಬಾಳಿನಲ್ಲೂ ಜ್ಞಾನದ ದೀವಿಗೆ ಹಚ್ಚುವವರು ಗುರುಗಳು. ತಂದೆ ಮತ್ತು ತಾಯಿ ಇಬ್ಬರನ್ನೂ ಶಿಕ್ಷಕರೊಬ್ಬರಲ್ಲೇ ಕಾಣಲು ಸಾಧ್ಯ ಎಂದು ಮಂಗಳೂರು ಅಲ್ ಹಿಕಮಿ ಡೈರೆಕ್ಟರ್ ಮಸ್ಟರ್ ಗ್ರೂಪ್ ಆಪ್ ಇನ್ಸಿಟ್ಯೂಷನ್ಸ್ ನ ಮೌಲ್ವಿ ಮೌಲಾನ ಹಾಫಿಝ ಸುಪ್ಯಾನ ಸಖಾಪಿ ಹೇಳಿದರು.
ಅವರು ರವಿವಾರ ಇಲ್ಲಿನ ಶಿಕ್ಷಕರ ಸಂಘದಲ್ಲಿ ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕ- ಶಿಕ್ಷಕಿಯರ ಪತ್ತಿನ ಸಹಕಾರಿ ಸಂಘ ಪ್ರಸಕ್ತ ಸಾಲಿನ ಶಿಕ್ಷಕ ಶಿಕ್ಷಕಿಯರ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಅಂಗವಾಗಿ ಎಸ್. ಎಸ್. ಎಲ್. ಸಿ. ಹಾಗು ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಹಕಾರಿ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭದಲ್ಲಿ ಉಪನ್ಯಾಸ ನೀಡಿ, ಮಾತನಾಡಿದರು.
ಶಿಕ್ಷಕ ವೃತ್ತಿ ಎಂಬುದು ಅತ್ಯಂತ ಕಠಿಣ ಮತ್ತು ಜವಾಬ್ದಾರಿಯುತ ವೃತ್ತಿ. ಎಲ್ಲರ ಬದುಕು ಸಮರ್ಥವಾಗಿ ರೂಪುಗೊಳ್ಳುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಪ್ರಮುಖ ಮತ್ತು ಹಿರಿಯದಾಗಿದೆ ಎಂದರು
ಒಬ್ಬ ಗುರುವಿನ ಸಾಮರ್ಥ್ಯದ ಪರಿಚಯ ಸಮಾಜಕ್ಕೆ ಶಿಷ್ಯ0ದಿರ ಮೂಲಕವೇ ಆಗಬೇಕು. ಅ0ದರೆ ಉತ್ತಮ ಶಿಷ್ಯರಿಲ್ಲದೇ ಒಬ್ಬ ಶಿಕ್ಷಕನ ಪರಿಚಯ ಸಮಾಜಕ್ಕೆ ಆಗುವುದು ಸಾಧ್ಯವಿಲ್ಲ. ಒಬ್ಬ ದಡ್ಡ. ಏಕವಚನದಲ್ಲಿ ಗುರುಗಳಿಗೆ ಮಾತಾಡಿದವ. ಲಾಸ್ಟ್ ಬೆಂಚಿನ ವಿದ್ಯಾರ್ಥಿ. ಓದುವ ಅಭ್ಯಾಸವನ್ನು ರೂಢಿಸಿಕೊಂಡು ಮಹಾನ್ ಸಾಧಕನಾಗಿ ಸಾಧನೆಯ ತುತ್ತ ತುದಿಯಲ್ಲಿ ಇರುವ ಸಾಧಕರನ್ನು ನಾವುಗಳು ದಿನನಿತ್ಯ ಓದುತ್ತೇವೆ, ಕೇಳುತ್ತೇವೆ. ನೋಡುತ್ತಾ ಇದ್ದೇವೆ. ವಿದ್ಯಾರ್ಥಿಗಳ ತಪ್ಪನ್ನು ತಿದ್ದುವ ಪೆನ್ಸಿಲ್ ಗಳಾಬೇಕು. ಅವರಿಗೆ ಓದಿನಲ್ಲಿ ಶ್ರದ್ದೆಯನ್ನು ಕೇರಳಿಸುವ ಗುರುಗಳಾಗಬೇಕು ಎಂದರು.
ಸ್ಥಳಿಯ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಪ್ರಕಾಶಾನಂದಜಿ ಮಹಾರಾಜ್ ಅವರು ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು.
ರಾ. ತಾ. ಪ್ರಾ. ಶಾ. ಶಿ, ಶಿ.ಪ. ಸಂಘ ನಿ ಎಂ.ಸಿ. ಬಲ್ಲೂರು. ಋ ಸರಕಾರಿ ನೌಕರರ ಸಂಘ ಜಿಲ್ಲಾ ಘಟಕ ಅಧ್ಯಕ್ಷ ಮಲ್ಲೇಶ ಕರಿಗಾರ. ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾ ಘಟಕ ಅಧ್ಯಕ್ಷ ಬಿ.ಪಿ. ಶಿಡೆನೂರ. ಎಚ್. ಎಮ್. ಸುತಾರ್. ಎ. ಎ. ಮುಲ್ಲಾ. ಬಿ.ಕೆ. ಕಿತ್ತೂರ. ಎನ್.ಎಸ್. ರಾಮನಗೌಡ. ಹೇಮಂತ್ ಎಸ್ ಕೆ. ಸುರೇಶ್ ಕೋಟಿಹಾಳ. ಎಸ್. ವಿ. ದೊಡ್ಡಮನಿ. ಇಸ್ಮಾಯಿಲ್ ಐರಣಿ. ಎಮ್.ಎನ್. ರೆಡ್ಡಿ. ಅಬ್ದುಲ್ ರೆಹಮಾನ್ ಹೊನ್ನಾಳಿ. ನಿರ್ಮಲಾ ಲಮಾಣಿ, ಸೇರಿದಂತೆ ಮತ್ತಿತರರು ಇದ್ದರು. ಅನುಸೂಯ ರಾಥೋಡ ಸಂಗಡಿಗರು ಪ್ರಾರ್ಥಿಸಿದರು. ವೀಣಾ ಭೋಸ್ಲೆ, ನಾಡಗೀತೆ ಹಾಡಿದರು.ಕೆ. ವಿ. ಕಾಟಣ್ಣನವರ ಸ್ವಾಗತಿಸಿ, ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 