ದೇವನಹಳ್ಳಿ ವಿಚಾರ ಮುಂದಿಟ್ಟುಕೊಂಡು ರೈತ ಹಿತಾಸಕ್ತಿಗೆ ವಿರುದ್ಧವಾದದ್ದು

ದೇವನಹಳ್ಳಿ ವಿಚಾರ ಮುಂದಿಟ್ಟುಕೊಂಡು ರೈತ ಹಿತಾಸಕ್ತಿಗೆ ವಿರುದ್ಧವಾದದ್ದು Taking the Devanahalli issue forward is against the interests of the farmers.

ದೇವನಹಳ್ಳಿ ವಿಚಾರ ಮುಂದಿಟ್ಟುಕೊಂಡು ರೈತ ಹಿತಾಸಕ್ತಿಗೆ ವಿರುದ್ಧವಾದದ್ದು 

ದೇವನಹಳ್ಳಿ 14: ರಾಜ್ಯದಜನತೆಕಾಂಗ್ರೆಸ್ ಪಕ್ಷದ ಮೇಲೆ ವಿಶ್ವಾಸವಿಟ್ಟುಅಧಿಕಾರಕ್ಕೆತಂದಿತು. ಆದರೆ ಅಧಿಕಾರಕ್ಕೆ ಬಂದ ಮೇಲೆ ಆ ವಿಶ್ವಾಸ ಉಳಿಸಿಕೊಳ್ಳುವುದರಲ್ಲಿ ಕಾಂಗ್ರೆಸ್ ವಿಫಲಗೊಂಡಿದ್ದುದುರಂತ. ನಾಳೆ ಈ ವಿಶ್ವಾಸದ ಕೊನೆ ತಂತುವಿನ ಅಗ್ನಿ ಪರೀಕ್ಷೆ.ದೇವನಹಳ್ಳಿ ವಿಚಾರದಲ್ಲಿ ಕಂಪನಿ ಹಿತಾಸಕ್ತಿಯನ್ನೇ ಮುಂದಿಟ್ಟುಕೊಂಡುರೈತ ಹಿತಾಸಕ್ತಿಗೆ ವಿರುದ್ಧವಾದ ನಿಲುವನ್ನು ಸರ್ಕಾರತೆಗೆದುಕೊಂಡಿದ್ದೇಆದಲ್ಲಿಅದುಅತಿದೊಡ್ಡ ವಿಶ್ವಾಸಘಾತವಾಗುತ್ತದೆ.ಇದಕ್ಕೆಕಾಂಗ್ರೆಸ್ ಪಕ್ಷ ಬಹುದೊಡ್ಡ ಬೆಲೆ ತೆರಬೇಕಾಗಿ ಬರುತ್ತದೆ.ಇದರಲ್ಲಿಯಾವುದೇಅನುಮಾನವಿಲ್ಲ.ಬಿಜೆಪಿಯಜನವಿರೋಧಿ ದುರಾಡಳಿತದಿಂದ ಬೇಸತ್ತಿದ್ದರಾಜ್ಯದಜನತೆಕಾಂಗ್ರೆಸ್ ಪಕ್ಷವನ್ನು ಸ್ಪಷ್ಟ ಬಹುಮತದಜೊತೆ ಗೆಲ್ಲಿಸಿದರು.ಈ ಗೆಲುವಿನಲ್ಲಿ ಎದ್ದೇಳು ಕರ್ನಾಟಕ, ದಸಂಸಒಕ್ಕೂಟ, ಸಂಯುಕ್ತ ಹೋರಾಟಕರ್ನಾಟಕ, ಬಹುತ್ವಕರ್ನಾಟಕ ಮುಂತಾದ ಅನೇಕ ನಾಗರೀಕ ವೇದಿಕೆಗಳ ಹಾಗೂ ಜನಚಳವಳಿಗಳ ಬಹುದೊಡ್ಡ ಪಾತ್ರವಿತ್ತುಎಂಬುದುಕಾಂಗ್ರೆಸ್ ಪಕ್ಷ ಅಲ್ಲಗಳೆಯಲಾಗದಂತಹ ಸತ್ಯ.ಆದರೆಇಂದು ಈ ಎಲ್ಲಾಜನಪರ ಶಕ್ತಿಗಳು ಒಂದೆಡೆ, ಕಾಂಗ್ರೆಸ್ ಸರ್ಕಾರ ಮಾತ್ರ ಮತ್ತೊಂದೆಡೆಎಂಬಂತಾಗಿದೆ.ನಿಜ ಹೇಳಬೇಕೆಂದರೆ ರಾಜ್ಯದಾದ್ಯಂತ ವ್ಯಕ್ತವಾಗಿರುವ ಈ ಜನಾಕ್ರೋಶ ಕೇವಲ ದೇವನಹಳ್ಳಿ ವಿಚಾರಕ್ಕೆ ಮೂಡಿರುವುದಲ್ಲ. ಕಾಂಗ್ರೆಸ್ ವಿರುದ್ಧ ಬೆಳೆಯುತ್ತಿದ್ದ ಅಸಮಧಾನ ಮತ್ತುಆಕ್ರೋಶಕ್ಕೆ ದೇವನಹಳ್ಳಿ ಹೋರಾಟ ಸಂಘಟಿತ ಸ್ವರೂಪ ನೀಡಿದೆ.ಈ ಜನಾಕ್ರೋಶ ಬೆಳೆಯಲು ಸಕಾರಣಗಳು ಇವೆ. 

ಕಾಂಗ್ರೆಸ್‌ಅಧಿಕಾರಕ್ಕೆ ಬಂದ ನಂತರಆಶ್ವಾಸನೆಕೊಟ್ಟಂತೆಐದು ಗ್ಯಾರಂಟಿಗಳನ್ನು ಕಾರ್ಯರೂಪಕ್ಕೆತರಲುಒಂದುರೀತಿಯ ಬದ್ಧತೆ ಪ್ರದರ್ಶಿಸಿದ್ದು ನಿಜ. ಆದರೆಅದುಅಷ್ಟರಲ್ಲೇತೃಪ್ತಿಗೊಂಡುಜನತೆಗೆಕೊಟ್ಟಿದ್ದಇತರೆ ಆಶ್ವಾಸನೆಗಳನ್ನು ಸಂಪೂರ್ಣವಾಗಿ ಮರೆತು ಮುನ್ನಡೆಯಿತು.ಮಾತ್ರವಲ್ಲ, ಗಮನಕ್ಕೆ ತಂದರೂ ನಿರ್ಲಕ್ಷಿಸಿ ತನ್ನಗುಂಗಿನಲ್ಲಿ ಮುಂದೆ ಸಾಗಿತು.ಬಿಜೆಪಿ ಸರ್ಕಾರತಂದಿದ್ದ, ವಿರೋಧ ಪಕ್ಷದಲ್ಲಿದ್ದಾಗತಾನೇ ವಿರೋಧಿಸಿದ್ದ, ಭೂತಿದ್ದುಪಡಿಕಾಯ್ದೆ, ಎಪಿಎಂಸಿ ತಿದ್ದುಪಡಿಕಾಯ್ದೆ, ಜಾನುವಾರು ಹತ್ಯೆತಿದ್ದುಪಡಿಕಾಯ್ದೆ, ಎಲ್ಲವನ್ನೂ ರದ್ದುಗೊಳಿಸದೆ ತಾನೇ ಮುಂದುವರೆಸುತ್ತಾ ಬಂದಿತು.ಕೇಂದ್ರ ಸರ್ಕಾರತಂದು ನಾಲ್ಕು ಕಾರ್ಮಿಕಕೋಡ್ ಗಳ ವಿರುದ್ಧವಾಗಿಯೂತೀರ್ಮಾನ ತೆಗೆದುಕೊಳ್ಳಲಿಲ್ಲ. ಕಾರ್ಮಿಕರದುಡಿಮೆಯನ್ನು ದಿನಕ್ಕೆ 8 ಗಂಟೆಯಿಂದ12  ಗಂಟೆಗೆಏರಿಸುವ ಶ್ರಮಿಕ ವಿರೋಧಿತೀರ್ಮಾನವನ್ನೂತಾನೇಜಾರಿಮಾಡಲು ಹೊರಟಿತು. ಬಗರ್ ಹುಕುಂ ರೈತರ ಬಗ್ಗೆ ಬರಿ ಬಾಯಪುಚಾರ ಬಿಟ್ಟರೆಅವರ ಹಕ್ಕು ನೀಡಲು ಮುಂದಾಗಲಿಲ್ಲ. ಅರಣ್ಯವಾಸಿಗಳು ಎತ್ತಂಗಡಿಯಅಪಾದಲ್ಲಿದ್ದರೂಅವರರಕ್ಷಣೆಗೆ ದಿಟ್ಟ ಹೆಜ್ಜೆಇಡಲಿಲ್ಲ. ದಲಿತರ ಭೂಮಿರಕ್ಷಣೆಗೆ ಪಿಟಿಸಿಎಲ್ ಕಾಯ್ದೆತಿದ್ದುಪಡಿಯಾದರೂಅದನ್ನುಜಾರಿ ಮಾಡಲಿಲ್ಲ. ಖಅಕಖ/ಖಿಕಖ ಹಣ ದುರ್ಬಳಕೆಯಾಗುತ್ತಿದ್ದರೂ ಜಾಣಕುರುಡು. ಮಹಿಳೆಯರ ಮೇಲಿನ ಅತ್ಯಾಚಾರ ಹಾಗೂ ಕೊಲೆಗಳು ಏರುಗತಿಯಲ್ಲಿದ್ದರೂ ಸರ್ಕಾರದ ನಿದ್ರೆಯಿಂದಎದ್ದಿಲ್ಲ. ಅಲ್ಪಸಂಖ್ಯಾತರ ಮೇಲೆ ಅವ್ಯಾಹಿತ ದಾಳಿಗಳು ನಡೆದರೂ ಸಕಾಲದಲ್ಲಿರಕ್ಷಣೆಗೆ ಬೇಕಾದ ದಿಟ್ಟ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ. ಕೇಂದ್ರ ಸರ್ಕಾರ ವಕ್ಫ್‌ಕಾಯ್ದೆತಂದುಅವರ ಸಾಮುದಾಯಿಕ ವಿಚಾರದಲ್ಲಿರಾಜಕೀಯ ಮಾಡಲು ಮುಂದಾದರೂಅದನ್ನು ವಿರೋಧಿಸಿ ಅಲ್ಪಸಂಖ್ಯಾತರ ಪರ ನಿಲ್ಲಲಿಲ್ಲ. ಬಿಜೆಪಿ ತಂದಿದ್ದ ಮತಾಂತರ ನಿಶೇಧಕಾಯ್ದೆಯನ್ನುಅಧಿಕಾರಕ್ಕೆ ಬಂದುಎರಡು ವರ್ಷವಾದರೂ ರದ್ದುಗೊಳಿಸಿಲ್ಲ. ಒಳ ಮೀಸಲಾತಿ ಹಾಗೂ ಜಾತಿಜನಗಣತಿಗಾಗಿ ತಳಸಮುದಾಯಗಳು ಹಪಹಪಿಸುತ್ತಿದ್ದರೂ ದಿಟ್ಟ ನಿಲುವನ್ನು ತೆಗೆದುಕೊಳ್ಳಲಿಲ್ಲ. ಸಾರಾಂಶದಲ್ಲಿ ಬಿಜೆಪಿ ಆಡಳಿತ ಹೋಗಿ ಕಾಂಗ್ರೆಸ್ ಆಡಳಿತ ಬಂದಿದೆಯೋಅಥವಾಅದೇ ಆಡಳಿತ ಮುಂದುವರೆಯುತ್ತಿದೆಯೋ ಎಂಬ ಅನುಮಾನ ಬರುವಂತೆಕಾಂಗ್ರೆಸ್ ನಡೆದುಕೊಳ್ಳುತ್ತಾ ಬಂದಿದೆ.   

ಮಡುಗಟ್ಟಿದ್ದ ಈ ಅಸಮಧಾನ ದೇವನಹಳ್ಳಿ ಹೋರಾಟದ ಮೂಲಕ ಹೊರಸಿಡಿದಿದೆ.ಏಕೆಂದರೆ ದೇವನಹಳ್ಳಿ ಬಳಿಯ ಚನ್ನರಾಯಪಟ್ಟಣ ಮತ್ತು ಸುತ್ತಮುತ್ತಲ 13 ಗ್ರಾಮಗಳ ಭೂಮಿಯನ್ನು ವಶಪಡಿಸಿಕೊಳ್ಳುವ ಮೊದಲ ನೋಟೀಸ್ ನೀಡಿದ್ದು ಬಿಜೆಪಿ ಸರ್ಕಾರ.ಆಗ ಅದನ್ನು ವಿರೋಧಿಸಿದ್ದು ಕಾಂಗ್ರೆಸ್‌. ಖುದ್ದು ಹೋಗಿ ಭರವಸೆ ನೀಡಿದ್ದು ಸಿದ್ದರಾಮಯ್ಯನವರು.ಆದರೆಅಧಿಕಾರಕ್ಕೆ ಬಂದ ನಂತರ ಬಿಜೆಪಿಯ ವರಸೆಯನ್ನೇಕಾಂಗ್ರೆಸ್ ಬಳಸುತ್ತಿದೆ.ಕಂಪನಿಗಳ ಪರ ವಕಾಲತ್ತು ವಹಿಸಲಾಗುತ್ತಿದೆ.ಒಡೆದಾಳುವ ತಂತ್ರವನ್ನೂ ಬಳಸಲಾಗುತ್ತಿದೆ.ಜನ 

ದಡ್ಡರಲ್ಲ. ಎಲ್ಲವನ್ನೂ ಗಮನಿಸುತ್ತಿದ್ದಾರೆ. “ಮುಖ್ಯಮಂತ್ರಿ ಸಿದ್ದರಾಮಯ್ಯನವರು ರೈತರಿಗೆ ಮೋಸ ಮಾಡುವುದಿಲ್ಲ”.“ಏನೇ ಒತ್ತಡಗಳಿದ್ದರೂ ಅಂತಿಮವಾಗಿರೈತ ಪರ ನಿಲುವು ತೆಗೆದುಕೊಳ್ಳುತ್ತಾರೆ”, “ಕರ್ನಾಟಕದ ಜನಚಳವಳಿಗಳೆಲ್ಲದರ ಸಂಯುಕ್ತದನಿಗೆ ಬೆಲೆ ಕೊಡುತ್ತಾರೆ” ಎಂಬ ನೀರೀಕ್ಷೆಯ ಮೇಲೆ ಇದುವರೆಗಿನ ಹೋರಾಟ ನಡೆದಿದೆ.ಒಂದು ವೇಳೆ ನಾಳೆ ಸಿದ್ದರಾಮಯ್ಯನವರು ಕಂಪನಿ ಲಾಬಿಗೆ ತಲೆಬಾಗಿರೈತರಿಗೆ ನ್ಯಾಯ ನೀಡುವುದರಲ್ಲಿ ಹಿಂದೇಟು ಹಾಕಿದರೆ, ವಿಶ್ವಾಸದ ಈ ಕೊನೆ ತಂತು ಮುರಿದು ಬೀಳುತ್ತದೆ.ಮುಖ್ಯಮಂತ್ರಿ ಸಿದ್ದರಾಮಯ್ಯವವರ ಜನಪರಇಮೇಜು ನುಚ್ಚುನೂರಾಗುತ್ತದೆ.ಕಾಂಗ್ರೆಸ್ ವಿರೋದಿ ಹೋರಾಟದತೀಕ್ಷ್ಣ ಅಲೆ ರಾಜ್ಯವ್ಯಾಪಿ ಆವರಿಸುತ್ತದೆ.ರಾಷ್ಟ್ರಮಟ್ಟಕ್ಕೂ ವ್ಯಾಪಿಸುತ್ತದೆ.ಇದರ ಬಿಸಿ ರಾಹುಲ್‌ಗಾಂಧಿ ಮತ್ತು ಮಲ್ಲಿಕಾರ್ಜುನಖರ್ಗೆಅವರಿಗೂತಟ್ಟುತ್ತದೆ. 

ಮಾಡುತ್ತಾ ಬರುತ್ತಿರುವತಪ್ಪನ್ನು ನಾಳೆಯೂ ಕಾಂಗ್ರೆಸ್ ಪಕ್ಷ ಮಾಡದಿರಲಿ.ತನ್ನ ವಿರುದ್ಧದಜನಾಸ್ಫೋಟಕ್ಕೆತಾನೇಆಹ್ವಾನ ನೀಡದಿರಲಿ. ವಿಶ್ವಾಸವಿಟ್ಟುಕೊಂಡಿರುವರೈತರಿಗೆ ನಿರಾಶೆತಾರದಿರಲಿ.ಮುಖ್ಯಮಂತ್ರಿಗಳು ತಮ್ಮ ಹಳೆ ದಿಟ್ಟ ನಡತೆಯತ್ತ ಮರುಳಲಿ.ಗಟ್ಟಿತೀರ್ಮಾನತೆಗೆದುಕೊಂಡು ದೇವನಹಳ್ಳಿಯ ರೈತರಿಗೆ ಮತ್ತುರಾಜ್ಯದಜನತೆಗೆ ನಾಳೆ ಸಿಹಿ ಸುದ್ದಿ ನೀಡಲಿ.