ತಡವಲಗಾ ಪಿಕೆಪಿಎಸ್ ಚುನಾವಣೆ: 12 ಸ್ಥಾನಕ್ಕಾಗಿ 52 ಜನ ನಾಮಪತ್ರಗಳು ಸಲ್ಲಿಕೆ

ತಡವಲಗಾ ಪಿಕೆಪಿಎಸ್ ಚುನಾವಣೆ: 12 ಸ್ಥಾನಕ್ಕಾಗಿ 52 ಜನ ನಾಮಪತ್ರಗಳು ಸಲ್ಲಿಕೆ Tadavalaga PKPS elections: 52 people file nominations for 12 seats

ಇಂಡಿ 13: ತಾಲೂಕಿನ ನಾಲ್ಕನೇ ಅತಿ ದೊಡ್ಡ ಗ್ರಾಮ ಅಂದರೆ ತಡವಲಗಾ ಗ್ರಾಮ.ಈ ಗ್ರಾಮ ಸದಾ ಒಂದಿಲ್ಲ ಒಂದು ಸುದ್ದಿಯಲ್ಲಿ ಇರುತ್ತದೆ. ಆದರೆ ತಡವಲಗಾ ಗ್ರಾಮದಲ್ಲಿ ಈಗ ಪಿಕೆಪಿಎಸ್ ಚುನಾವಣೆ ಸದ್ದು.ಎಲ್ಲಿ ಕುಂತರು ನಿಂತರು ಚುನಾವಣೆಯ ಮಾತು  ಬಾರಿ ಕುತೂಹಲ ಕೆರಳಿಸಿರುವ ತಡವಲಗಾ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿ ತಡವಲಗಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿತ್ತು. 

ಒಟ್ಟು 12 ಸ್ಥಾನಗಳಿಗಾಗಿ ಒಟ್ಟು 52 ಜನ ನಾಮಪತ್ರಗಳು ಸಲ್ಲಿಕೆಯಾಗಿವೆ. ಸಾಮನ್ಯ 5 ಸ್ಥಾನಗಳಿಗೆ 22 ಜನ ನಾಮಪತ್ರ ಸಲ್ಲಿಸಿದರು ಮತ್ತು 2 ಮಹಿಳಾ ಮೀಸಲು ಸ್ಥಾನಕ್ಕಾಗಿ 07 ಜನ ನಾಮಪತ್ರಗಳು ಸಲ್ಲಿಕೆ ಮಾಡಿದ್ದಾರೆ.1ಹಿಂದುಳಿದ ವರ್ಗ "ಅ" ಮೀಸಲು ಸ್ಥಾನಕ್ಕಾಗಿ 07 ಜನ ನಾಮಪತ್ರ ಸಲ್ಲಿಕೆ ಆಗಿವೆ.1ಹಿಂದುಳಿದ ವರ್ಗ "ಬ" ಮೀಸಲು ಸ್ಥಾನಕ್ಕೆ 05 ಜನ ನಾಮಪತ್ರಗಳು ಸಲ್ಲಿಕೆ ಆಗಿವೆ.1 ಪರಿಶಿಷ್ಠ ಜಾತಿಯ ಮೀಸಲು ಸ್ಥಾನಕ್ಕೆ 04 ಜನ ನಾಮಪತ್ರ ಸಲ್ಲಿಸಿದ್ದಾರೆ. 1 ಪರಿಶಿಷ್ಟ ಪಂಗಡದ ಮೀಸಲು ಸ್ಥಾನ 03 ಜನ ನಾಮಪತ್ರ ಸಲ್ಲಿಸಿದ್ದಾರೆ ಹಾಗೂ ಬಿನ್ ಸಾಲಗಾರರ 1 ಸ್ಥಾನಕ್ಕೆ 04 ಜನ ನಾಮಪತ್ರಗಳು ಸಲ್ಲಿಕೆ ಆಗಿವೆ.ಹೀಗೆ ಒಟ್ಟು 52 ಜನ ನಾಮಪತ್ರಗಳು ಸಲ್ಲಿಕೆ ಮಾಡಿದ್ದಾರೆ ಹಾಗೂ ನಾಳೆ ನಾಮಪತ್ರಗಳು ಪರೀಶೀಲನೆ ನಡಿಯಲ್ಲಿದ್ದು 15-12-2025 ರವರಿಗೆ ನಾಮಪತ್ರ ಹಿಂಪಡೆಯಲು ಅವಕಾಶ ಕಲ್ಪಿಸಲಾಗಿದೆ. 

ಅಗತ್ಯ ಬಿದ್ದರೆ 21-12-2025 ರಂದು ಬೆಳಿಗ್ಗೆ ಒಂಬತ್ತು ಯಿಂದ ನಾಲ್ಕು ಗಂಟೆ ವರಿಗೆ ಚುನಾವಣೆ ನಡಿಯಲಿದ್ದು ಅಂದೇ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಗುರುತಿಸಲಪ್ಪಟ್ಟ ರಿಟರ್ನಿಂಗ್ ಅಧಿಕಾರಿ ಹಾಗೂ ಚುನಾವಣಾ ಅಧಿಕಾರಿ ವ್ಹಿ ಸಿ ನಾಯಕ ಅವರು ತಿಳಿಸಿದ್ದಾರೆ. 

ತಡವಲಗಾ ಪಿಕೆಪಿಎಸ್ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿ ರಫಿಕ್ ತಾಂಬೂಳಿ ಹಾಗೂ ಸಿಬ್ಬಂದಿಗಳಾದ ವೀರೇಶ್ ಹೀರೆಮಠ ಅರುಣ್ ರೂಗಿ ಹಣಮಂತ ನಾದ ಅಂಬರೀಷ್ ತಾರಾಪೂರ ಪ್ರಕಾಶ ವಾಲಿಕಾರ ಉಪಸ್ಥಿತರಿದ್ದರು.