ತಡವಲಗಾ ಪಿಕೆಪಿಎಸ್ ಚುನಾವಣೆ ಫಲಿತಾಂಶ ಪ್ರಕಟ
Tadavalaga PKPS election results announced
ಇಂಡಿ 22: ಬಾರಿ ತ್ರೀವ ಕುತುಹಲ ಕೆರಳಿಸಿರುವ ತಡವಲಗಾ ಗ್ರಾಮದ ಪಿಕೆಪಿಎಸ್ ಚುನಾವಣೆ ಫಲಿತಾಂಶ ನಿನ್ನೆ ರಾತ್ರಿ ಪ್ರಕಟಿಸಲಾಯಿತು. ಒಟ್ಟು 12 ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 12 ಸ್ಥಾನಗಳಿಗಾಗಿ ಗೆದ್ದ ಅಭ್ಯರ್ಥಿಗಳ ವಿವರ ಹೀಗಿದೆ. 5 ಸಾಮಾನ್ಯ ಸ್ಥಾನಕ್ಕೆ ಭೀಮರಾಯ ಮಡ್ನಳಿ ಸಂಪತ್ತಕುಮಾರ ಹಿಳ್ಳಿ ಬಸವರಾಜ ಸಾರವಾಡ ಮಂಜುನಾಥ ಮದರಿ ರಾಮು ರೂಗಿ ಆಯ್ಕೆಯಾಗಿದ್ದಾರೆ. ಮಹಿಳಾ ಮೀಸಲು ಸ್ಥಾನದಲ್ಲಿ ವಿಮಲಾಬಾಯಿ ರೂಗಿ ಹಾಗೂ ಹಾಲಿ ತಡವಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುನಂದಾ ವಾಲಿಕಾರ ಆಯ್ಕೆಯಾಗಿದ್ದಾರೆ. ಹಿಂದುಳಿದ ಅ ವರ್ಗದಿಂದ ಹುಮಾಯನ ಕಸ್ಸಾಬ ಹಾಗೂ ಹಿಂದುಳಿದ ಬ ವರ್ಗದಿಂದ ಅಶೋಕ ಕುದರಿ ಆಯ್ಕೆಯಾಗಿದ್ದಾರೆ. ಪರಿಶಿಷ್ಟ ಜಾತಿ ಮೀಸಲು ಸ್ಥಾನದಲ್ಲಿ ಬೀಮು ಮೇಲಿನಕೇರಿ ಹಾಗೂ ಪರಿಶಿಷ್ಟ ಪಂಗಡದ ಮೀಸಲು ಸ್ಥಾನದಿಂದ ರಾಮಣ್ಣ ತಳವಾರ ಆಯ್ಕೆಯಾಗಿದ್ದಾರೆ. ಮತ್ತು ಬೀನ್ ಸಾಲಗಾರ ಕ್ಷೇತ್ರದಿಂದ ರಾಜು ಕ್ಷೇತ್ರಿ ಸೇರಿದಂತೆ ಒಟ್ಟು 12 ಸ್ಥಾನಗಳಿಗಾಗಿ 12 ಜನ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಗುರುತಿಸಲ್ಪಟ್ಟ ಚುನಾವಣಾ ರಿಟರ್ನಂಗ್ ಅಧಿಕಾರಿ ವಿಜಯಕುಮಾರ ಪಿ ನಾಯಕ ತಿಳಿಸಿದ್ದಾರೆ.
ಈ ಬಾರಿ ಒಟ್ಟು 1648 ಮತದಾರರು ಇದ್ದು. ಅದರಲ್ಲಿ 1181 ಜನ ಸದಸ್ಯರು ತಮ್ಮ ಹಕ್ಕನ್ನು ಚಲಾಯಿಸಿದರು. ತಡವಲಗಾ ಪಿಕೆಪಿಎಸ್ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿ ರಫಿಕ್ ತಾಂಬೂಳಿ ಹಾಗೂ ಸಿಬ್ಬಂದ ವರ್ಗ ಉಪಸ್ಥಿತರಿದ್ದರು. ಈ ಬಾರಿ ಚುನಾವಣೆ ಶಾಂತಿಯುತವಾಗಿ ನಡೆಯಲು ಹೋರ್ತಿ ಪಿಎಸ್‌ಐ ಮೀನಾಕ್ಷಿ ವಿ ಕುಲಕರ್ಣಿ ಹಾಗೂ ಎಎಸ್‌ಐ ವಿ ಪಿ ಕಂಬಾರ, ಬಿ ವಾಯ್ ಇಂಗಳೆ ಹಾಗೂ ಡಿ ಎಸ್ ಗಾಯಕವಾಡ, ಎಮ್ ಎನ್ ಹೊನ್ನಕಟ್ಟೆ, ಬಾಬು ಗಿರಿಸಾಗರ, ಎಸ್ ಡಿ ವಸ್ತ್ರದ, ಎಚ್ ಜಿ ಬಬಲಾದ, ಪ್ರಕಾಶ್ ಹಕ್ಕೆ, ಅಶೋಕ ನಾವದಗಿ, ಎಸ್ ಎಲ್ ತೆನ್ನಹಳ್ಳಿ, ಎಸ್ ಸಿ ಹದನೂರ, ಅಶ್ವಿನಿ ಅಂಜುಟಗಿ, ಪ್ರಶಾಂತ ರಾಠೋಡ ನೇತೃತ್ವದಲ್ಲಿ ಬಾರಿ ಪೋಲಿಸ್ ಬಂದೋಬಸ್ತ ಕೈಗೊಳ್ಳಲಾಯಿತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 