ಲಲಿತ ಕಲಾ ಸಂಸ್ಥೆಯ ವತಿಯಿಂದ ಸ್ವರ ಕೌಸ್ತುಭ

ಲಲಿತ ಕಲಾ ಸಂಸ್ಥೆಯ ವತಿಯಿಂದ  ಸ್ವರ ಕೌಸ್ತುಭ Swara Kaustubha by the Institute of Fine Arts


ಭಾಗ್ಯನಗರ  24: ಸ್ವರ ಸೌರಭ ಸಂಗೀತ ಮತ್ತು ಲಲಿತಕಲಾ ಸಂಸ್ಥೆಯವತಿಯಿಂದ ಭಾಗ್ಯನಗರದ ಸರಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಸ್ವರ ಕೌಸ್ತುಭ ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ಉದ್ಘಾಟಿಸಿ ಮಾತನಾಡಿದ ಪ್ರಾಂಶುಪಾಲರಾದ ರಾಚಪ್ಪ ಕೆಸರಬಾವಿಯವರು ಡಿವಿಜಿಯವರ ಕವಿಚಿತ್ರ ಕೋವಿಧರು ಪರತತ್ವ ಶೋಧಕರು ವಿವಿಧ ವಾದನ ಗೀತ ನೃತ್ಯ ಕುಶಲಿಗಳು ಕರಕುಶಲ ಕಲೆಗಾರರಿಂದ ಬಾಳು ಸುಂದರತೆ ಮಂಕುತಿಮ್ಮ ಎಂಬ ಕಗ್ಗ ನೆನೆದು ವಿಶೇಷ ಕಲೆಗಳ ಬಗ್ಗೆ ಬಹು ಸುಂದರವಾಗಿ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಅರ್ಥೈಸಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಹ ಶಿಕ್ಷಕರಾದ ಮಂಜುನಾಥರವರು ಸಂಗೀತದಿಂದ ಮನುಷ್ಯನ ಮಾನಸಿಕ ವಿವೇದನೆಗಳ ಹಿಡಿತ ಸಾಧ್ಯವಾಗುತ್ತದೆ ವಾಸಿಯಾಗದ ಎಷ್ಟೋ ರೋಗಗಳಿಗೆ ರಾಗಗಳಿಂದ ವಾಸಿ ಸಾಧ್ಯವಾಗಿದೆ ಅಂತಹ ವಿಶೇಷ ಕಾರ್ಯಕ್ರಮಗಳನ್ನು ಶಾಲೆಗೆ ತಂದು ಮಕ್ಕಳ ವ್ಯಕ್ತಿತ್ವ ವಿಕಾಸನಕ್ಕೆ ವಿಶೇಷ ಮೆರುಗು ನೀಡುತ್ತಿರುವ ಸಂಸ್ಥೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಮುಖ್ಯ ಅತಿಥಿಗಳಾಗಿ ಉಪನ್ಯಾಸಕರಾದ ನಾಗಲಿಂಗಪ್ಪ, ಸಂಗೀತ ಶಿಕ್ಷಕರಾದ ಮಾರುತೇಶ ಮೆನೆದಾಳ ಉಪಸ್ಥಿತರಿದ್ದರು. 

ರಂಜಿತಾ ನಂದ್ಯಾಲರ ಭರತನಾಟ್ಯದೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ವಿಜಯಲಕ್ಷ್ಮಿ ನಾಗರಾಜರವರಿಂದ ಸುಗಮ ಸಂಗೀತ, ಕೀರ್ತಿ ಮೇಟಿಯವರಿಂದ ಭಕ್ತಿಗೀತೆಗಳು, ಆರತಿ ಮೆಟಿಯವರಿಂದ ವಚನ ಸಂಗೀತ, ಅಲ್ಲಾಭಕ್ಷಿ ಅಭಿಷೇಕ ಚಿತ್ರಗಾರವರಿಂದ ಬಾನ್ಸೂರಿ ವಾದನ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಮನಸೊರೆಗೊಂಡವು ವಾದ್ಯ ವೃಂದದ ಕೀಬೋರ್ಡನಲ್ಲಿ ರಾಮಚಂದ್ರ​‍್ಪ ಉಪ್ಪಾರ, ಕೊಳಲಿನಲ್ಲಿ ನಾಗರಾಜ ಶ್ಯಾವಿ, ತಬಲಾದಲ್ಲಿ ಮಾರುತಿ ಬಿನ್ನಾಳ, ರಿಧಮ ಪ್ಯಾಡನಲ್ಲಿ ಸಂಜನ ಬೆಲ್ಲದ ಉಪಸ್ಥಿತರಿದ್ದರು.