ಸ್ವಾಮಿ ವಿವೇಕಾನಂದರು ಯುವಶಕ್ತಿಗೆ ಪ್ರೇರಕರು - ರುದ್ರ್ಪ ಲಮಾಣಿ
Swami Vivekananda is an inspiration to youth - Rudrapa Lamani
ರಾಣೆಬೆನ್ನೂರು 13: ಭಾರತ ದೇಶವು ವಿಶ್ವದ ಗುರುವಾಗಿ ಹೊರಹೊಮ್ಮತ್ತಿರುವುದು ಇತಿಹಾಸದ ನಮ್ಮ ದಾರ್ಶನಿಕರ ಪುಣ್ಯ ಪುರುಷರ, ಮತ್ತು ಸಾಧು ಸಂತರ ಆಧ್ಯಾತ್ಮ ಮತ್ತು ವಿವೇಚನಾ ಪರಂಪರೆಯ ಕಾರಣ ಅಂತವರ ಸಾಲಿನಲ್ಲಿ ವಿವೇಕ ಶಾಲಿ ಸ್ವಾಮಿ ವಿವೇಕಾನಂದರು ನಮಗೆ ಮೊದಲಿಗರಾಗುತ್ತಾರೆ ಎಂದು ಹಾವೇರಿ ಶಾಸಕ, ಕರ್ನಾಟಕ ಸರ್ಕಾರದ ಉಪ ಸಭಾಧ್ಯಕ್ಷ ರುದ್ರ್ಪ ಲಮಾಣಿ ಹೇಳಿದರು. ಅವರು ಸೋಮವಾರ ಇಲ್ಲಿನ ಬಿ. ಎ. ಜೆ.ಎಸ್. ಎಸ್. ಸಮಾವಾ ಶಿಕ್ಷಣ ಸಂಸ್ಥೆ ಆಯೋಜಿಸಿದ್ದ, ರಾಷ್ಟ್ರೀಯ ಯುವ ದಿನ ಹಾಗೂ ಯುವ ಸಪ್ತಾಹ ಉದ್ಘಾಟಿಸಿ ಮಾತನಾಡಿದರು. ಸ್ವಾಮಿ ವಿವೇಕಾನಂದರು ಈ ದೇಶದ ಭವಿಷ್ಯಕ್ಕಾಗಿ ಯುವ ಜನಾಂಗದ ಮೇಲೆ ಅಪಾರವಾದ ನಂಬಿಕೆ ಇಟ್ಟಿದ್ದರು. ಅಂಥವರನ್ನು ಪಡೆದ ಈ ದೇಶ ಪುಣ್ಯ ಪ್ರಧಾನವಾಗಿದೆ.
ಇಂದಿನ ಯುವಕರು ಭವಿಷ್ಯದ ನಾಗರಿಕರು. ಕೇವಲ ಯುವ ಸಪ್ತಹ ಆಚರಿಸಿದರೆ ಮುಗಿಯಲಿಲ್ಲ. ಅವರು ಅಂದು ಕಂಡ ಕನಸು ನನಸು ಮಾಡಿದರೆ ಮಾತ್ರ ಆಚರಣೆಗೆ ತುಂಬಾ ಮಹತ್ವ ಬರಲಿದೆ ಎಂದರು. ಸಂಸ್ಕೃತಿ ಮತ್ತು ಸಂಸ್ಕಾರ ಆಚಾರ ಮತ್ತು ವಿಚಾರ. ಜ್ಞಾನ ವಿಜ್ಞಾನ ಮತ್ತು ತತ್ವಜ್ಞಾನ ಇವುಗಳೆಲ್ಲವೂ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ದೇಶದ ರಾಯಭಾರಿಯಾಗಿದ್ದರು ಎಂದು ವಿವರಿಸಿ ಮಾತನಾಡಿದ ರುದ್ರ್ಪ ಲಮಾಣಿ. ಸಮಾಜದಲ್ಲಿ ಸಮಾನತೆಗಾಗಿ ಮತ್ತು ದೇಶದ ಶಾಂತಿ ಮತ್ತು ನೆಮ್ಮದಿಗಾಗಿ ಯುವ ಜನತೆ ಮುಂದಾಗಬೇಕಾದ ಅಗತ್ಯವಿದೆ ಎಂದರು. ಉಪನ್ಯಾಸ ನೀಡಿದ ಕಾಲೇಜು ಆಡಳಿತ ಮಂಡಳಿ ಮುಖ್ಯ ಸಲಹೆಗಾರ ಪ್ರೊ. ಎಚ್. ಎ. ಭಿಕ್ಷಾವರ್ತಿಮಠ ಅವರು ಭಾರತ ಕಂಡ ಸ್ವಾಮಿ ವಿವೇಕಾನಂದರು ವಿಷಯ ಕುರಿತು ಉಪನ್ಯಾಸ ನೀಡಿದರು.
ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಉಪ ನಿರ್ದೇಶಕಿ ಶ್ರೀಮತಿ ಲತಾ ಬಿ. ಎಚ್. ಅವರು ಇಂದಿನ ಯುವಕರು ಭವಿಷ್ಯದ ನಾಗರಿಕರು. ನಾಗರಿಕತ್ವ ಪ್ರಬುದ್ಧತೆಯಿಂದ ಅದಕ್ಕಾಗಿ ವೈಚಾರಿಕ ಚಿಂತನೆಯೊಂದಿಗೆ ಭವಿಷ್ಯವನ್ನು ದೇಶವನ್ನು ಕಟ್ಟಿ ರಕ್ಷಿಸಿಕೊಳ್ಳಬೇಕಾದ ಇಂದಿನ ಅಗತ್ಯವಿದೆ ಎಂದರು. ಇನ್ನೊರ್ವ ಅತಿಥಿಯಾಗಿದ್ದ, ಮಹಿಳಾ ಪ. ಪೋ. ಕಾಲೇಜಿನ ಪ್ರಾಚಾರ್ಯ ಎಚ್. ಬಿ. ಪಟ್ಟಣಶೆಟ್ಟಿ ಅವರು, ಸಾಮಾಜಿಕ, ಸಾಹಿತ್ಯಕ, ಸಾಂಸ್ಕೃತಿಕ ಜೊತೆಗೆ ಶೈಕ್ಷಣಿಕ ಪ್ರಗತಿಗೆ ಸ್ವಾಮಿ ವಿವೇಕಾನಂದರು ಅಂದು ನೀಡಿರುವ ಬೌದ್ಧಿಕ ಇಂದಿನ ಯುವ ಜನಾಂಗಕ್ಕೆ ಬಹುದೊಡ್ಡ ಆಸ್ತಿಯಾಗಿದೆ. ಅವರ ಕುರಿತು ರಚನೆಯ ಪುಸ್ತಕಗಳನ್ನು ಅಧ್ಯಯನ ಮಾಡಬೇಕಾದ ಇಂದಿನ ಅಗತ್ಯವಿದೆ ಎಂದರು.
ಕಾಲೇಜು ಬಿಇಡಿ ಶಿಕ್ಷಣ ವಿದ್ಯಾಲಯದ ಪ್ರಾಚಾರ್ಯ, ಡಾ. ಮೃತ್ಯುಂಜಯ ಎಂ.ಎಂ. ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಯುವ ಸ್ವಯಂ ಸೇವಕ ಹೇಮಗಿರಿ ಅಂಗಡಿ, ಜಿಲ್ಲಾ ಮೇರಾ ಭಾರತ್ ಉಪನ್ಯಾಸಕರಾದ, ಪ್ರೊ. ಶಿವಕುಮಾರ್ ಬಿಸಹಳ್ಳಿ, ಪ್ರೊಫೆಸರ್ ಎ. ಶಂಕರ ನಾಯ್ಕ, ಡಾ. ಎಚ್. ಐ. ಬ್ಯಾಡಗಿ, ಪ್ರೊ. ಶ್ರೀಕಾಂತ್ ಗೌಡಶಿವಣ್ಣನವರ, ಪ್ರೊ. ಅಶೋಕ ಬಣಕಾರ, ಜಿ.ಎಸ್. ಯರಿಸ್ವಾಮಿ, ಮುತ್ತುರಾಜ ಸಿದ್ದಣ್ಣನವರ, ಶ್ರೀಮತಿ ಚಂದನಾ ಕಿಚಡಿ ಸೇರಿದಂತೆ ಮತ್ತಿತರ ಉಪನ್ಯಾಸಕರು, ಕಾಲೇಜಿನ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು. ಶ್ವೇತಾ ಸಂಗಡಿಗರು ಪ್ರಾರ್ಥಿಸಿದರು, ಪದ್ಮ ಸುನಿತಾ ಸ್ವಾಗತಿಸಿ, ರಾಷ್ಟ್ರೀಯ ಸೇವಾ ಯೋಜನಾ ಕಾರ್ಯಕ್ರಮಾಧಿಕಾರಿ ಪರಶುರಾಮ ಪವಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಲಕ್ಷ್ಮಿ ಹಣಚಿಕ್ಕಿ ಮತ್ತು ಪೂಜಾ ಹೆಗಡೇರ ನಿರೂಪಿಸಿ, ನಿಕೇತನ ಕಮ್ಮಾರ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 