ಸುರೇಶ ನಾಶಿ, ವೆಂಕಪ್ಪ ಬಾಲರಡ್ಡಿಗೆ ಸನ್ಮಾನ
Suresh Nashi, Venkappa Balaraddi honored
ಸುರೇಶ ನಾಶಿ, ವೆಂಕಪ್ಪ ಬಾಲರಡ್ಡಿಗೆ ಸನ್ಮಾನ
ಗುರ್ಲಾಪೂರ 04: ಸಹಕಾರಿ ಸಂಘದಿಂದ ಗ್ರಾಮದ ಜನತೆಗೆ ಆದ ಪ್ರಯೋಜನೆಗಳು ಹಾಗೂ ಸಂಘವು ನಡೆದ ಬಂದ ದಾರಿ ಬಗ್ಗೆ ಗುರ್ಲಾಪೂರ ಶಾಖೆಯ ನಿರ್ದೇಶಕ ಬಿ ಸಿ ಮುಗಳೋಡ ತಿಳಿಸಿದರು. ಅವರು ಗ್ರಾಮದ ಶಿವಬೋಧರಂಗ ಅರ್ಬನ್ ಕೋ -ಆಪ್ ಕ್ರೆಡಿಟ್ ಸೊಸಾಯಿಟಿ ಮೂಡಲಗಿ ಗುರ್ಲಾಪೂರ ಶಾಖಾ ಕಚೇರಿಯಲ್ಲಿ ಶಾಖೆ ಗುರ್ಲಾಪೂರ ವತಿಯಿಂದ ಪ್ರಧಾನ ಕಚೇರಿಯ ಪ್ರಧಾನ ಕಾರ್ಯದರ್ಶಿ ಸುರೇಶ ಬಾ ನಾಶಿ ಅವರು ನಿವೃತ್ತಿ ಹೊಂದಿದ ಕಾರಣ ಅವರನ್ನು ಸತ್ಕರಿಸಿ ಮಾತನಾಡಿದರು.
ಸುರೇಶ ಬಾ ನಾಶಿ ಅವರು ಸತ್ಕಾರ ಸ್ವೀಕರಿಸಿ ಮಾತನಾಡುತ್ತಾ ನಾನು ಪ್ರಧಾನ ಕಚೇರಿಯ ಕಾರ್ಯದರ್ಶಿಯಾಗಿ ನಿಮ್ಮೆಲ್ಲರ ಸಹಾಯದಿಂದ ಸಂಘದಲ್ಲಿ ಕಾರ್ಯವನ್ನು ಮಾಡಿದ್ದೇನೆ ಇದಕ್ಕೆ ನಾನು ನಮ್ಮ ಸಂಸ್ಥೆಯ ಎಲ್ಲರಿಗೂ ತುಂಬಾ ಆಭಾರಿಯಾಗಿದ್ದೇನೆ ಹಾಗೂ ನಮ್ಮ ಸಂಘವು ಇನ್ನೂ ಹೆಚ್ಚಿಗೆ ಪ್ರಗತಿ ಪಥದತ್ತ ಸಾಗಲೂ ಎಲ್ಲರೂ ಸಹಕಾರ ನಿಡೋಣ ಎಂದು ತಿಳಿಸಿದರು.
ಗುರ್ಲಾಪುರ ಶಾಖಾ ಕಾರ್ಯದರ್ಶಿಯಾಗಿದ್ದ ವೆಂಕಪ್ಪ ಹ. ಬಾಲರಡ್ಡಿ ಅವರನ್ನು ಪ್ರಧಾನ ಕಚೇರಿಯ ಪ್ರಧಾನ ಕಾರ್ಯದರ್ಶಿಯಾಗಿ ವರ್ಗಾವಣೆಯಾದ ಪ್ರಯುಕ್ತ ಗುರ್ಲಾಪೂರ ಶಾಖಾ ಕಚೇರಿಯಲ್ಲಿ ಶಾಖೆಯ ಅಧ್ಯಕ್ಷ ಟಿ ಡಿ ಗಾಣಿಗೇರ ಅಧ್ಯಕ್ಷತೆಯಲ್ಲಿ ಸತ್ಕರಿಸಿ ಬೀಳ್ಕೊಡಲಾಯಿತು.
ಬಾಲರಡ್ಡಿಯವರು ಮಾತನಾಡುತ್ತಾ ಮೊದಲು ಗುರ್ಲಾಪೂರ ಶಾಖಾ ಕಾರ್ಯದರ್ಶಿಯಾಗಿ ಆಗಮಿಸಿದಾಗ ಆಡಳಿತ ಮಂಡಳಿಯವರ ಸಹಕಾರದಿಂದ ಗ್ರಾಮದ ಒಳ್ಳೆಯ ಸಹಕಾರ ಸಂಘವಾಗಿ ನಡೆದಿತ್ತು. ಅದರ ನಂತರ ನಾನು ವಿವಿಧ ಗ್ರಾಮಗಳಲ್ಲಿ ಶಾಖಾ ಕಾರ್ಯದರ್ಶಿಯಾಗಿ ಸೇವೆಸಲ್ಲಿಸುತ್ತಾ ಮರಳಿ ನಾನು ಗುರ್ಲಾಪೂರ ಶಾಖಾಗೆ ಬಂದಾಗ ನನಗೆ ಪ್ರಧಾನ ಕಚೇರಿಯ ವ್ಯವಸ್ಥಾಪಕನಾಗಿ ಸರ್ವೇಮಾಡುವ ಅವಕಾಶ ಬಂದಿದೆ. ಇದ್ದಕ್ಕೆ ಪ್ರಧಾನ ಕಚೇರಿಯ ಹಾಗೂ ಶಾಖಾ ಕಚೇರಿಯ ಆಡಳಿತ ಮಂಡಳಿ ಹಾಗೂ ನನ್ನ ಎಲ್ಲ ಸಿಬ್ಬಂದಿಯವರ ಸಹಕಾರ ಅತಿಮುಖ್ಯವಾಗಿದೆ. ಇನ್ನು ನಾನು ಈ ಸಂಸ್ಥೆ ಪ್ರಗತಿ ಪಥದತ್ತ ಸಾಗಲೂ ತಾವೆಲ್ಲರೂ ಸಹಕಾರ ನೀಡಬೇಕು ಎಂದು ಕೇಳಿಕೊಳ್ಳುತ್ತಾ ನನ್ನನ್ನು ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡುತ್ತಿರುವುದಕ್ಕೆ ಧನ್ಯವಾದಗಳನ್ನು ತಿಳಿಸಿದರು.
ಅದೇ ರೀತಿಯಾಗಿ ಗುರ್ಲಾಪುರ ಶಾಖಾ ಕಾರ್ಯದರ್ಶಿಯಾಗಿ ಆಗಮಿಸಿದ ಹೊಳೆಪ್ಪ ಬಾಡದ ಅವರನ್ನು ಸ್ವಾಗತಿಸಲಾಯಿತು. ಮಹಾಲಿಂಗಪುರ ಶಾಖೆಯಿಂದ ಆಗಮಿಸಿದ ಅಶೋಕ ಪಾಟೀಲ್ ಅವರನ್ನು ಕೂಡಾ ಸ್ವಾಗತಿಸಲಾಯಿತು.
ಗುರ್ಲಾಪುರ ಶಾಖೆಯ ಸಲಾ ಸಮಿತಿಯ ಸದಸ್ಯರಾದ ರೇವಪ್ಪ ನೇಮಗೌಡರ, ಮಲ್ಲಪ್ಪ ನೇಮಗೌಡರ, ಸತ್ಯಪ್ಪ ಮುಗಳಖೋಡ, ಮಾರುತಿ ಹೊಸೂರ ಹಾಗೂ ಸಿಬ್ಬಂದಿ ವರ್ಗದವರು ಮತ್ತು ಎ.ಜಿ ಶರಣಾರ್ಥಿ ರಾಚಯ್ಯಾ ಹಿರೇಮಠ, ಮಲ್ಲಪ್ಪ ಮುಗಳಖೋಡ, ಲಕ್ಷ್ಮಣ ಮುಗಳಖೋಡ, ಈಶ್ವರ ಗಾಣಿಗೇರ, ದುಂಡಪ್ಪ ಗೌಡರ, ಶಿವಬಸು ಮರಾಠೆ, ಶಿವಬೋಧ ಯರಜರವಿ ಹಾಗೂ ಊರಿನ ಗ್ರಾಹಕರು ಉಪಸ್ಥಿತರಿದ್ದರು. ಗುರ್ಲಾಪೂರ ಶಾಖಾ ಕಾರ್ಯದರ್ಶಿ ಹೊಳೆಪ್ಪ ಬಾಡದ ಸ್ವಾಗತಿಸಿದರು. ಬಸವರಾಜ ಗೋಲನ್ನವರ ನಿರೂಪಿಸಿ, ವಂದಿಸಿದರು.
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ 