ಮುಗಳಿಹಾಳ ಪ್ರೀಮಿಯರ್ ಲೀಗ್ ಟ್ರೋಪಿಯನ್ನು ಎತ್ತಿ ಹಿಡಿದ ಸೂಪರ್ ಕಿಂಗ್ಸ್ ತಂಡ
Super Kings team lifts Mughal Premier League trophy
ಯರಗಟ್ಟಿ 02: ಸಮೀಪದ ಮುಗಳಿಹಾಳ ಗ್ರಾಮದಲ್ಲಿ ಪ್ರೀಮಿಯರ್ ಲೀಗ್-4ಟ್ರೋಪಿಯನ್ನು ಎತ್ತಿ ಹಿಡಿದ ಮಂಜು ದಳವಾಯಿ ಹಾಗೂ ಸಿದ್ದು ಬಡಿಗೇರ ಅವರ ಮಾಲಿಕತ್ವ ಸೂಪರ್ ಕಿಂಗ್ಸ್ ತಂಡ.ಸುಮಾರು ದಿನಗಳಿಂದ ನಡೆದ ಮುಗಳಿಹಾಳ ಪ್ರೀಮಿಯರ್ ಲೀಗ್ ಪಂದ್ಯಾವಳಿಗಳ ಫೈನಲ್ ಪಂದ್ಯದಲ್ಲಿ ರವಿವಾರ ನಡೆದ ವಿ ಎಮ್ ಟೈಗರ್ಸ್ ತಂಡದ ವಿರುದ್ಧ ಟ್ರೋಪಿಯನ್ನು ಸೂಪರ್ ಕಿಂಗ್ಸ್ ತಂಡ ಗೆದ್ದುಕೊಂಡಿದೆ. ಮೂರನೆಯ ಬಹುಮಾನ ಜಿಮ್ ಆಂಡ್ ಎಸ್ ಎಸ್ ವಿ ಬಾಯ್ಸ್ , ನಾಲ್ಕನೆಯ ಬಹುಮಾನ ವಿ ಐ ಪಿ ಪ್ಯಾಂಥರ್ಸ್ ತಂಡಗಳು ಪಡೆದುಕೊಂಡಿವೆ.ಈ ಟೂರ್ನಮೆಂಟ್ನಲ್ಲಿ ಅದ್ಭುತ ಪ್ರದರ್ಶನ ತೋರಿದ ಆಟಗಾರ ನವೀನ ಪಾಟೀಲಗೆ ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದುಕೊಂಡರು.ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ರಾಜ್ಯ ಎ???ಸ್ ಯು ಐ ಉಪಾಧ್ಯಕ್ಷ ಪ್ರಜ್ವಲ್ ಗೌಡರ ಮಾತನಾಡಿ "ಟ್ರೋಪಿ ಗೆದ್ದ ತಂಡದ ಸಾಧನೆಗೆ ಅಭಿನಂದನೆ ಸಲ್ಲಿಸಿ, “ಈ ಟ್ರೋಪಿ ಎಲ್ಲ ಗ್ರಾಮ ನಿವಾಸಿಗಳಿಗೂ ಪ್ರೇರಣೆಯಾಗಿತು. ನಮ್ಮ ಮಕ್ಕಳ ಶ್ರಮ ಮತ್ತು ಸಾಧನೆ ಇನ್ನು ಮುಂದೆ ಹೆಚ್ಚು ಉನ್ನತ ಸಾಧನೆಗಳಿಗೆ ದಾರಿ ತೆರೆಯಲಿ,” ಎಂದು ಹೇಳಿದರು.
ಈ ಟ್ರೋಪಿ ಗೆಲುವಿನ ಸುದ್ದಿ ಗ್ರಾಮದವರಿಗಷ್ಟೇ ಅಲ್ಲ, ಇತರರಿಗೂ ಹೆಮ್ಮೆಯಾಗಿರುವುದು ಸ್ಪಷ್ಟವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕ್ರೀಡಾ ಕಾರ್ಯಕ್ರಮಗಳು ನೆರವೇರಲಿ ಎಂದು ಹೇಳಿದರು.ಈ ಸಂದರ್ಭದಲ್ಲಿ ಯರಗಟ್ಟಿ ಎಪಿಎಂಸಿ ಸದಸ್ಯರಾದ ಲಕ್ಷ್ಮಣ ದಳವಾಯಿ, ಕೆಎಂಎಫ್ ಸದಸ್ಯರಾದ ಗೋಪಾಲ ದಳವಾಯಿ, ಪಿಕೆಪಿಎಸ್ ಸದಸ್ಯರಾದ ಬಸವರಾಜ ದಳವಾಯಿ, ಬೆಂಗಳೂರು ಜಲ ಮಂಡಳಿಯ ಸಿಬ್ಬಂದಿ ಬಸವರಾಜ ದಳವಾಯಿ, ಬಸವರಾಜ ಇಟಗೌಡ್ರ, ಕೃಷಿ ಇಲಾಖೆಯ ಅನುವುಗಾರ ಬಸವರಾಜ ಮು. ದಳವಾಯಿ, ಸಿದ್ದು ಸರ್ ದಳವಾಯಿ, ಸಿದ್ದು ಮು ದಳವಾಯಿ, ಬೀರ್ಪ ದಳವಾಯಿ, ವಿನೋದ ಕೆಸರೆಡ್ಡಿ, ಹಾಗೂ ವಿಠ್ಠಲ ಮಾಲದಿನ್ನಿ ಹಾಗೂ ಮುಗಳಿಹಾಳ ಕ್ರಿಕೆಟ್ ಟೀಮ್ ಆಟಗಾರರು ಉಪಸ್ತಿತರಿದ್ದರು.ಪೋಟೋ ಶೀರ್ಷಿಕೆ:ಮುಗಳಿಹಾಳ ಪ್ರೀಮಿಯರ್ ಲೀಗ್ ಟ್ರೋಪಿಯನ್ನು ಪ್ರಜ್ವಲ್ ಗೌಡರ, ಸಿದ್ದು ದಳವಾಯಿ, ಗೋಪಾಲ್ ದಳವಾಯಿ, ಬಸವರಾಜ ಇಟಗೌಡ್ರ, ಬಸವರಾಜ ದಳವಾಯಿಬಹುಮಾನ ವಿತರಣೆ ಮಾಡಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 