ಶಿವಶಕ್ತಿ ಶುಗರ್ ಸಕ್ಕರೆ ಕಾರ್ಖಾನೆಯ ಕಬ್ಬು ಬೆಳೆಯುವ ಹಂಗಾಮಿಗೆ ಚಾಲನೆ

ಶಿವಶಕ್ತಿ ಶುಗರ್ ಸಕ್ಕರೆ ಕಾರ್ಖಾನೆಯ  ಕಬ್ಬು ಬೆಳೆಯುವ ಹಂಗಾಮಿಗೆ ಚಾಲನೆ Sugarcane growing season of Shivshakti Sugar Factory kicks off

ಶಿವಶಕ್ತಿ ಶುಗರ್ ಸಕ್ಕರೆ ಕಾರ್ಖಾನೆಯ  ಕಬ್ಬು ಬೆಳೆಯುವ ಹಂಗಾಮಿಗೆ ಚಾಲನೆ 

ಮಾಂಜರಿ 15 :  ರಾಜ್ಯಸಭೆಯ ಮಾಜಿ ಸದಸ್ಯ ಕೆಎಲ್‌ಇ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ್ ಕೋರೆ ಹಾಗೂ ರಾಷ್ಟ್ರೀಯ ಸಕ್ಕರೆ ಕಾರ್ಖಾನೆ ಮಹಾಮಂಡಲ ಹೊಸದೇಲಿಯ ನಿರ್ದೇಶಕರಾದ ಅಮಿತ್ ಕೋರೆ ಇವರ ಕುಶಲ ಮಾರ್ಗದರ್ಶನಲಿ ಕಾರ್ಯನಿರ್ವ ರಾಯಬಾಗ್ ತಾಲೂಕಿನ ಭವನ ಸೌದತ್ತಿ ಗ್ರಾಮದ ಶಿವಶಕ್ತಿ ಶುಗರ್ ಸಕ್ಕರೆ ಕಾರ್ಖಾನೆಯ ಪ್ರಸಕ್ತ ಸಾಲಿನ ಕಬ್ಬು ಅರಿಯುವ ಹಂಗಾಮಿಗೆ ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಕೋರೆ ಹಾಗೂ ಇನ್ನುಳಿದ ಗಣ್ಯ ನಾಗರಿಕರಿಂದ ಎಂದು ಚಾಲನೆ ನೀಡಲಾಯಿತು  ಈ ವೇಳೆ ಮಲ್ಲಿಕಾರ್ಜುನ ಕೋರೆ ಮಾತನಾಡಿ ನಮ್ಮ ಮಾರ್ಗದರ್ಶಕರಾದ ರಾಜ್ಯಸಭೆಯ ಮಾಜಿ ಸದಸ್ಯ ಡಾ ಪ್ರಭಾಕರ್ ಕೋರೆ ಹಾಗೂ ಯುವ ಮುಖಂಡ ಅಮಿತ್ ಕೋರೆ ಇವರ ಮುಂದಾಳತ್ವದಲ್ಲಿ ಶಿವಶಕ್ತಿ ಸಕ್ಕರೆ ಕಾರ್ಖಾನೆ ಈ ವರ್ಷ ಕಡಿಮೆ ದಿನಗಳಲ್ಲಿ ಹೆಚ್ಚು ಕಬ್ಬು ಅರೆಯಲಿದ್ದು, ದಾಖಲೆಯ ಸಕ್ಕರೆ ಉತ್ಪಾದಿಸಲಿದೆ. "ಶಿವಶಕ್ತಿ ಸಕ್ಕರೆ ಕಾರ್ಖಾನೆ ಪ್ರತಿ ವರ್ಷ ಗರಿಷ್ಠ ಕಬ್ಬು ಅರೆದು ದಾಖಲೆಯ ಸಕ್ಕರೆ ಉತ್ಪಾದಿಸುವ ಸಂಪ್ರದಾಯವನ್ನು ಉಳಿಸಿಕೊಂಡಿದೆ. ಪ್ರತಿ ವರ್ಷ ಶಿವಶಕ್ತಿ ಶುಗರ್ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸುವ ರೈತರ ಕಬ್ಬಿಗೆ ತೃಪ್ತಿದಾಯಕ ಬೆಲೆ ನೀಡಲಾಗಿದೆ. ಮುಂಬರುವ ಸಮಯದಲ್ಲೂ ಸಹ, ಸಕ್ಕರೆ ಕಾರ್ಖಾನೆ ಕಡಿಮೆ ಅವಧಿಯಲ್ಲಿ ಹೆಚ್ಚು  ಕಬ್ಬು ಅರೆಯಲಿದೆ" ಎಂದು ಮಲ್ಲಿಕಾರ್ಜುನ  ಕೋರೆ ಹೇಳಿದರು ಪ್ರಸಕ್ತ ಸಾಲಿನಲ್ಲಿ ಕೂಡ ದಾಖಲೆಯ ಸಕ್ಕರೆ ಉತ್ಪಾದಿಸುವುದು  ಗುರಿಯಾಗಿದೆ. ಈ ಪ್ರದೇಶದ ಎಲ್ಲಾ ಕಬ್ಬು ರೈತರು ತಮ್ಮ ಕಬ್ಬನ್ನು ಶಿವಶಕ್ತಿ ಸಕ್ಕರೆಗೆ ಕಳುಹಿಸುವ ಮೂಲಕ ಸಹಕರಿಸಬೇಕು. ಕಾರ್ಖಾನೆಯು ಎಥೆನಾಲ್ ಉತ್ಪಾದನೆ, ಮಧ್ಯಸಾರ ಇಥಿನಾಲ್  ಮತ್ತು ವಿದ್ಯುತ್ ಉತ್ಪಾದನೆ ಕೂಡ   ಯೋಜನೆಗಳನ್ನು ಹೊಂದಿರುತ್ತದೆ  ಹೆಚ್ಚಿನ ಉತ್ಪಾದನೆಯನ್ನು ಸಾಧಿಸಲು ಪ್ರಯತ್ನಗಳು ನಡೆದಿವೆ. ಆರಂಭದಲ್ಲಿ, ಮಲ್ಲಿಕಾರ್ಜುನ್ ಕೋರೆ ಇವರ ಹಸ್ತದಿಂದ   ಪೂಜೆ ಸಲ್ಲಿಸಿದರು ತದನಂತರ ಪ್ರಸಕ್ತ ಸಾಲಿನ ಕಬ್ಬು ಅರಿಯುವ ಹಂಗಾಮಿಗೆ  ಚಿದಾನಂದ ಕೋರೆ ಕಾರ್ಖಾನೆಯ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ ಮತ್ತು ಗಣ್ಯರು ಹತ್ತದಿಂದ ಚಾಲನೆ  ಮಾಡಲಾಯಿತು  ಈ ಕಾರ್ಯಕ್ರಮದಲ್ಲಿ ಚಿದಾನಂದ ಕೋರೆ ಕಾರ್ಖಾನೆ ಉಪಾಧ್ಯಕ್ಷ ತಾತ್ಯಾಸಾಹೇಬ ಕಾಟೆ, ನಿರ್ದೇಶಕ ಭರತೇಶ ಬನವಣೆ, ಅಜಿತರಾವ್ ದೇಸಾಯಿ, ಮಲ್ಲಪ್ಪ ಮಲ್ಲಪ್ಪ ಮೈಶಾಲೆ  ಭರಮಗೌಡ ಪಾಟೀಲ, ಚೇತನ ಪಾಟೀಲ, ಸಂದೀಪ ಪಾಟೀಲ, ಮಹಾವೀರ ಕಾತ್ರಾಳೆ, ಅಣ್ಣಾಸಾಹೇಬ ಇಂಗಳೆ, ಮಾಜಿ ನಿರ್ದೇಶಕ ರಾಮಚಂದ್ರ ನಿಶಾನದಾರ, ಅಂಕಲಿ  ಗ್ರಾ.ಪಂ. ಸದಸ್ಯ ಸುರೇಶ ಪಾಟೀಲ, ತುಕಾರಾಮ ಪಾಟೀಲ, ಪಿಂಟು ಹಿರೇಕುರಬರ, ಸಿದ್ದಗೌಡ ಮಗದುಮ ಅಪ್ಪಾಸಾಹೇಬ ಪೋಳ, ಶಿವಶಕ್ತಿ ಕಾರ್ಖಾನೆ ಮುಖ್ಯಸ್ಥ ಬಿ.ಎ.ಪಾಟೀಲ, ಎನ.ಎಸ್‌.ಮುಲ್ಲಾ, ಮುರಳಿ ರಾಜಾನುಗಮ, ಪಾಂಡು ಬಡಗನವರ, ಕೇಶವ ಪ್ರಸಾದ್, ಸಂಜಯ ಯಾದವ, ಬಿ ಎಸ್ ಮುಧೋಳ  ವಿಜಯ ಪಾಟೀಲ, ಸತೀಶ್ ಪಾಟೀಲ್  ಜಿಎಸ್ ಬೆಳೆಶೇ  ಗಿರಿಧರ್ ಗಲಾಂಡೇ ಎಸ್ ಪಿ ನಿಪ್ಪಾಣಿ ಮತ್ತು ಚಿಕ್ಕೋಡಿ ಕಾಗವಾಡ ರಾಯಬಾಗ್ ತಾಲೂಕಿನ ವಿವಿಧ ಸಹಕಾರಿ ಸಂಸ್ಥೆಯ ಪದಾಧಿಕಾರಿಗಳು ಗಣ್ಯರು ಮತ್ತು ಕಬ್ಬು ಬೆಳೆಯುವ  ರೈತರು ಹಾಜರಿದ್ದರು