ಕಬ್ಬು ಬೆಳೆಯುವ ರೈತರು ಕಡಿಮೆ ರಸಗೊಬ್ಬರ ನೀರು ಬಳಕೆ ಮಾಡಿ
Sugarcane farmers use less fertilizer and water
ಕಬ್ಬು ಬೆಳೆಯುವ ರೈತರು ಕಡಿಮೆ ರಸಗೊಬ್ಬರ ನೀರು ಬಳಕೆ ಮಾಡಿ
ಮಾಂಜರಿ 16: ಕಬ್ಬು ಬೆಳೆಯುವ ರೈತರು ಕಡಿಮೆ ರಸಗೊಬ್ಬರ ನೀರು ಬಳಕೆ ಮಾಡಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಕಬ್ಬು ಬೆಳೆಸಿ ಅಧಿಕ ಇಳುವರಿ ತೆಗೆದುಕೊಳ್ಳಲು ಕೆಲವೊಂದು ಸೂತ್ರಗಳನ್ನು ಪಾಲಿಸಬೇಕಾಗುತ್ತದೆ ಅದರಲ್ಲಿ ಆಧುನಿಕ ಪದ್ಧತಿಯಲ್ಲಿ ಕೃಷಿ ಮಾಡುವುದು ಬಹಳ ಮಹತ್ವದಾಗಿದೆ. ಮಣ್ಣಿನ ಪರೀಕ್ಷೆ, ಭೂಮಿ ತಯಾರಿ, ಹಸಿರೆಲೆ ಗೊಬ್ಬರ ಮಹತ್ವ, ಅಗಲು ಸಾಲು ಪದ್ಧತಿ ಬೀಜದ ಆಯ್ಕೆ, ಲಾವಣಿ ಪದ್ಧತಿ, ಗೊಬ್ಬರ ಮತ್ತು ನೀರಿನ ನಿರ್ವಹಣೆ, ಕಬ್ಬಿನ ಮರಿಗಳ ಸಂಖ್ಯಾ ನಿರ್ವಹಣೆ ಮಾಡಿ ರೈತರು ಕಬ್ಬು ಬೆಳೆಯಬೇಕೆಂದು ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ವಕ್ಕಲತನ ವಿಭಾಗದ ಕಬ್ಬು ಅಭಿವೃದ್ಧಿ ಅಧಿಕಾರಿ ಮತ್ತು ಮೇಲ್ವಿಚಾರಕರಾದ ಸಚಿನ್ ಮೊಪಗಾರ್ ಹೇಳಿದರು
ಅವರು ಎಂದು ಸಮೀಪದ ನಸಲಾಪುರ್ ಗ್ರಾಮದಲ್ಲಿ ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಹಾಗೂ ಐಪಿಎಲ್ ಕಂಪನಿಯ ಸಹಯೋಗದಲ್ಲಿ ಆಯೋಜಿಸಲಾದ ಕಬ್ಬು ಬೆಳೆಯುವ ರೈತರಿಗೆ ಕಡಿಮೆ ಖರ್ಚಿನಲ್ಲಿ ಆಧುನಿಕ ಪದ್ಧತಿಯನ್ನು ಅಳವಡಿಸಿ ಹೆಚ್ಚಿನ ಕಬ್ಬು ಇಳುವರಿ ವಿಚಾರ ಸಂಕೀರ್ಣದಲ್ಲಿ ಮಾತನಾಡುತ್ತಿದ್ದರು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಐಪಿಎಲ್ ಕಂಪನಿಯ ಕರಣ್ ಬಿರಾದಾರ್ ಆಕಾಶ್ ಮುಳ್ಳುರ್ ಸಿ ಬಿ ಕೋರೆ ಸಕ್ಕರೆ ಕಾರ್ಖಾನೆಯ ಕಿಸಾನ್ ಬಜಾರ್ ಅಧಿಕಾರಿಗಳಾದ ರಾಹುಲ್ ಇಚಲಕರಂಜಿ ಹಾಜರಿದ್ದರು
ಈ ವೇಳೆ ಐಪಿಎಲ್ ಕಂಪನಿಯ ಅಧಿಕಾರಿಗಳಾದ ಕರಣ್ ಬಿರಾದಾರ್ ಮತ್ತು ಆಕಾಶ್ ಮಳ್ಳೂರ ಮಾತನಾಡಿ ಇಂದು ಕೃಷಿ ಪದ್ಧತಿಯಲ್ಲಿ ಹಲವಾರು ತಂತ್ರಜ್ಞಾನ ಮತ್ತು ಆಧುನಿಕತೆಯ ಲಭ್ಯವಿದ್ದು ಇದರ ಸ್ವರೂಪ ಯೋಗ ಪಡೆದುಕೊಂಡು ಕಡಿಮೆ ವೆಚ್ಚದಲ್ಲಿ ಹೆಚ್ಚು ಕಬ್ಬು ಬೆಳೆಸುವ ಜೊತೆಗೆ ರೈತರು ಆರ್ಥಿಕ ಸುಭತ್ಯವನ್ನು ಹೊಂದಿರಬೇಕೆಂದು ಅವರು ಹೇಳಿದರು ಈ ಕಾರ್ಯಕ್ರಮಕ್ಕೆ ಸಕ್ಕರೆ ಕಾರ್ಖಾನೆಯ ಅಧಿಕಾರಿಗಳಾದ ಈರಗೌಡ ಪಾಟೀಲ್ ರೈತರದ ಜೈಪಾಲ್ ಬನವನೆ ವೆಂಕಟೇಶ್ ಬನವನೆ ವರ್ಧಮಾನ ಬನವನೆ ವಸಂತ ಸಮಾಜೆ ಸುರೇಂದ್ರ ಸಮಾಜೆ ಹಲವಾರು ರೈತರು ಹಾಜರಿದ್ದರು ಈರಗೌಡ ಪಾಟೀಲ್ ಸ್ವಾಗತಿಸಿ ನಿರೂಪಿಸಿ ವಂದಿಸಿದರು
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 