ಕಂಪ್ಲಿ ಪೊಲೀಸರ ಯಶಸ್ವಿ ಕಾರ್ಯಾಚರಣೆ : ಇಬ್ಬರು ಆರೋಪಿಗಳ ಬಂಧನ

ಕಂಪ್ಲಿ ಪೊಲೀಸರ ಯಶಸ್ವಿ ಕಾರ್ಯಾಚರಣೆ : ಇಬ್ಬರು ಆರೋಪಿಗಳ ಬಂಧನ Successful operation by the Comply Police: Two accused arrested

ಕಂಪ್ಲಿ ಪೊಲೀಸರ ಯಶಸ್ವಿ ಕಾರ್ಯಾಚರಣೆ : ಇಬ್ಬರು ಆರೋಪಿಗಳ ಬಂಧನ 

ಕಂಪ್ಲಿ 31 : ಕಂಪ್ಲಿ ಪೊಲೀಸರು ಯಶಸ್ವಿ ಕಾರ್ಯಾಚರಣೆಯನ್ನು ನಡೆಸಿ ಇತ್ತೀಚೆಗೆ ಪಟ್ಟಣವೂ ಸೇರಿದಂತೆ ವಿವಿಧೆಡೆಗಳಲ್ಲಿ ಕಳ್ಳತನವಾಗಿರುವ 9 ಲಕ್ಷರೂ ಮೌಲ್ಯದ 11 ಮೋಟಾರು ಸೈಕಲ್‌ಗಳನ್ನು ವಶಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. 2025ರ ಮಾರ್ಚ್‌ 1ರಂದು ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ರಾತ್ರಿ 10 ಗಂಟೆಯ ಸಮಯದಲ್ಲಿ ಕೆಎ35/ಇಕೆ 6014 ಬೂದು ಬಣ್ಣದ ಹಿರೋ ಹೆಚ್‌ಎಫ್ ಡಿಲೆಕ್ಸ್‌ ಮೋಟಾರು ಸೈಕಲ್ ಕಳ್ಳತನವಾಗಿರುವ ಬಗ್ಗೆ ವೆಂಕಟಾಪುರದ ಮಾರತೇಶ್ ಅಡ್ಡೆ ಎನ್ನುವವರು  ದೂರನ್ನು ನೀಡಿದ್ದರು.  ಕಂಪ್ಲಿ ಪಿಐ ವಾಸುಕುಮಾರ ಕೆ.ಬಿ. ಪಿಎಸ್‌ಐ ಅವಿನಾಶ್ ಕಾಂಬಳೆ ಹಾಗೂ ಸಿಬ್ಬಂದಿಗಳು ಕಳುವಾದ ಮೋಟಾರು ಸೈಕಲ್‌ಗಳ ಪತ್ತೆಗಾಗಿ ನಿರಂತರವಾಗಿ ಪ್ರಯತ್ನಗಳನ್ನು ನೆಡೆಸಿದ್ದರು. ಇಂದು ಬೆಳಿಗ್ಗೆ 11-30ರ ಸುಮಾರಿನಲ್ಲಿ ಕಂಪ್ಲಿ ಕುರುಗೋಡು ರಸ್ತೆಯ ಕಮ್ಮ ಭವನದ ಮುಂದೆ ವಾಹನಗಳ ತಪಾಸಣೆ ಮಾಡುತ್ತಿರುವಾಗ ಈ ಪ್ರಕರಣದಲ್ಲಿ ಕಳ್ಳತನವಾದ ಮೋಟಾರು ಸೈಕಲ್ ಮತ್ತು ಕಳ್ಳತನ ಮಾಡಿದ ಆರೋಪಿತರಾದ ದಿನೇಶ್ ಮತ್ತು ಯಶ್ವಂತ ಅಲಿಯಾಸ್ ಬಂಟಿ ಎನ್ನುವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ  ಈ ಇಬ್ಬರು ಆರೋಪಿತರೊಂದಿಗೆ ಕಂಪ್ಲಿ ಪಟ್ಟಣದ ಎಲ್‌.ಜಿ.ಕಾರ್ತಿಕ್, ಕೃಷ್ಣ, ಮೆಟ್ರಿ ಬಾಷಾ ಸೇರಿ ಈಗ್ಗೆ ಸೂಮಾರು 1 ವರ್ಷದಿಂದ ಕಂಪ್ಲಿ ಪಟ್ಟಣ, ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟ, ತುಮಕೂರು ಬಸ್ ನಿಲ್ದಾಣ,ಚಿತ್ರದುರ್ಗ ಬಸ್ ನಿಲ್ದಾಣ, ದಮ್ಮೂರು ಗ್ರಾಮ, ಸಿಂಧನೂರು ಅಂಬಾಮಠ ಹಾಗೂ ಆಂದ್ರಪದೇಶದ ವಿಡುಪನಕಲ್ಲು,ತೋರಣಗಲ್ಲು, ಮುನಿರಾಬಾದ್ ರೈಲ್ವೇ ಸ್ಟೇಷನ್‌ಗಳಲ್ಲಿ ಕಳ್ಳತನ ಮಾಡಿರುವ 9 ಲಕ್ಷ ರೂ ಮೌಲ್ಯದ 11 ಮೋಟಾರು ಸೈಕಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಕಳ್ಳತನವಾಗಿರುವ ಮೋಟಾರು ಸೈಕಲ್‌ಗಳು ಮತ್ತು ಆರೋಪಿಗಳಿಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ.ಶೋಭಾರಾಣಿ ವಿ.ಜೆ. ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನವೀನ್‌ಕುಮಾರ್ ಮುಂದಾಳತ್ವದಲ್ಲಿ ಹಾಗೂ ತೋರಣಗಲ್ಲು ಉಪವಿಭಾಗದ ಡಿಎಸ್ಪಿ ಪ್ರಸಾದ್ ಗೋಖಲೆ ನೇತೃತ್ವದಲ್ಲಿ  ಕಂಪ್ಲಿ ಪಿಐ ವಾಸುಕುಮಾರ್‌.ಪಿಎಸ್‌ಐ ಅವಿನಾಶ್ ಕಾಂಬಳೆ,ಎಎಸ್‌ಐ ಬಸವರಾಜ ಹಾಗೂ ಸಿಬ್ಬಂದಿಗಳಾದ ಮುಖ್ಯಪೇದೆ ಬಸವರಾಜ ಹಿರೇಮಠ, ಪೇದೆಗಳಾದ ಸತ್ಯನಾರಾಯಣ, ಮಲ್ಲೇಶ್ ರಾಥೋಡ್, ಮುತ್ತುರಾಜ್, ಸುರೇಶ್, ಶರಣಪ್ಪ, ಟಿ.ಪ್ರಭಾಕರ್, ತಿಮ್ಮಯ್ಯ, ಗಾದಿಲಿಂಗಪ್ಪ, ವಿಶ್ವನಾಥ್, ಸುದರ್ಶನ ಇವರುಗಳು ಮೋಟಾರು ಸೈಕಲ್ಲುಗಳು ಹಾಗೂ ಆರೋಪಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೃಹತ್ ದ್ವಿಚಕ್ರ ವಾಹನಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕಾರ್ಯವೈಖರಿಯನ್ನು ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ.ಶೋಭಾರಾಣಿ ವಿ.ಜೆ. ಅಭಿನಂದಿಸಿದ್ದು, ಬಹುಮಾನವನ್ನು ಘೋಷಣೆ ಮಾಡಿದ್ದಾರೆ.