ವಿದ್ಯಾರ್ಥಿಗಳು ಜೀವನದ ಸವಾಲು ಎದುರಿಸಿ ಮುನ್ನಡೆದಾಗ ಯಶಸ್ಸು ಸಾಧ್ಯ - ಚನ್ನವೀರ ಸ್ವಾಮಿಗಳು

ವಿದ್ಯಾರ್ಥಿಗಳು ಜೀವನದ ಸವಾಲು ಎದುರಿಸಿ ಮುನ್ನಡೆದಾಗ ಯಶಸ್ಸು ಸಾಧ್ಯ - ಚನ್ನವೀರ ಸ್ವಾಮಿಗಳು Success is possible when students face life's challenges and move forward - Channaveera Swamy

  ಲಕ್ಷ್ಮೇಶ್ವರ" 20 :  ವಿದ್ಯಾರ್ಥಿಗಳು ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಬರುವ ಎಲ್ಲಾ ಸವಾಲುಗಳನ್ನು ಎದುರಿಸಿ ಮುನ್ನಡೆದಾಗ ಮಾತ್ರ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಶ್ರೀ ಚನ್ನವೀರ ಮಹಾಸ್ವಾಮಿಗಳು ವಿರಕ್ತಮಠ ಹೂವಿನಶಿಗ್ಲಿ ಹೇಳಿದರುಅವರು ಭಾನುವಾರ ಶಿಗ್ಲಿ ಗ್ರಾಮದ ಶಾಖಾಂಬರಿ ಸಮುದಾಯ ಭವನದಲ್ಲಿ ನಡೆದ ವೀರರಾಣಿ ಕಿತ್ತೂರು ಚನ್ನಮ್ಮ ವಿವಿಧೋದ್ದೇಶಗಳ ಸಂಘ ರಿ. ಇವರ ಸಹಯೋಗದಲ್ಲಿ ನಡೆದ 2025-26- ನೇ ಸಾಲಿನ ಎಲ್ಲಾ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿವಿಧ ರಂಗದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಪಂಚಮಸಾಲಿ ಶಿಗ್ಲಿ ಗ್ರಾಮ ಘಟಕ ಪಂಚಮಸಾಲಿ ಸಮಾಜದ ನೌಕರರ ಸಂಘದ ಉದ್ಘಾಟನಾ ಸಮಾರಂಭದದಿವ್ಯ ಸಾನಿಧ್ಯವನ್ನು ವಹಿಸಿ ಅವರು ಮಾತನಾಡುತ್ತಿದ್ದರು.

ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಈರಣ್ಣ ಕರಿಬಿಸ್ಟಿ ಅವರು ಮಾತನಾಡಿ ವಿದ್ಯಾರ್ಥಿಗಳು ಏನನ್ನಾದರೂ ಸಾಧಿಸಬೇಕಾದರೆ ಅದು ಉತ್ತಮ ವಿದ್ಯಾಭ್ಯಾಸದಿಂದಲೇ ಮಾತ್ರ ಸಾಧ್ಯ ಅದಕ್ಕಾಗಿ ಶಿಗ್ಲಿ ಗ್ರಾಮ ವಿದ್ಯಾಭ್ಯಾಸಕ್ಕೆ ಹೆಚ್ಚು ಪ್ರಸಿದ್ಧಿಯನ್ನು ಪಡೆದಿದೆ ಎಂದರು ಅಧ್ಯಕ್ಷತೆಯನ್ನು ವಹಿಸಿದ್ದ ಪಂಚಮಸಾಲಿ ಶಿಗ್ಲಿ ಗ್ರಾಮ ಘಟಕದ ಅಧ್ಯಕ್ಷರಾದ ಶಂಕರ ರಾಗಿ ನಿವೃತ್ತಿ ಪೋಲಿಸ್ ಅಧಿಕಾರಿ ಅವರು ಮಾತನಾಡಿ ಒಂದು ಸಮಾಜ ಬಲಿಷ್ಠವಾಗಬೇಕಾದರೆ ಸಮಾಜದ ಎಲ್ಲ ಯುವಕರು ಪಾತ್ರ ಮಹತ್ವದ್ದಾಗಿದೆ ಎಲ್ಲರೂ ಒಕ್ಕಟ್ಟಾಗಿ ಹೋರಾಟ ಮಾಡಿದಾಗ ಮಾತ್ರ ಸಮಾಜಕ್ಕೆ ಒಂದು ಅರ್ಥ ಬರುತ್ತದೆ ಎಂದರು.

  ಸಮಾಜದ ಹಿರಿಯ ಮುಖಂಡರಾದ ಸೋಮಣ್ಣ ಡಾಣಗಲ್ ಅವರು ಮಾತನಾಡಿ  ವೀರರಾಣಿ ಕಿತ್ತೂರು ಚನ್ನಮ್ಮನ ಶೌರ್ಯ ಪರಾಕ್ರಮಿಯನ್ನು ಇಂದಿನ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಮುಂದೆ ಬರಬೇಕು ಎಂದರು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿಯ ಮಾಜಿ ಅಧ್ಯಕ್ಷರಾದ ಎಸ್ ಪಿ ಬಳಿಗಾರ ಪಂಚಮಸಾಲಿ ಸಮಾಜದ ಶಿರಹಟ್ಟಿ ಲಕ್ಷ್ಮೇಶ್ವರ ತಾಲೂಕು ಅಧ್ಯಕ್ಷರಾದ ಬಸವರಾಜ ತುಳಿ ಮಂಜುನಾಥ ಮಾಗಡಿ ನಿಂಗಪ್ಪ ಹುನುಗುಂದ ಶಿವಪ್ಪ ಕೆಸರಳ್ಳಿ ನಿಂಗಪ್ಪ ಹತ್ತಿಕಾಳ ಚನ್ನಬಸಪ್ಪ ಬಾಳಿಕಾಯಿ ಎಸ್ ಕೆ ಹೆಬ್ಬಳ್ಳಿ ಬಾಲಚಂದ್ರ​‍್ಪ ಜನಿವಾರದ ಶುಭಾಸ ಹುಲಗೂರ ನಿಜಲಿಂಗಯ್ಯ ಮುಳುಗುಂದಮಠ ಹನುಮಂತಪ್ಪ ತಳವಾರ ಮಾದೇವಪ್ಪ ಬೆಳವಗಿ ಬಸಣ್ಣ ಕರ್ಜಗಿ ರಾಮಣ್ಣ ಲಮಾಣಿ ಸಿಆರ್ ಗೋಕಾವಿ ಈರಣ್ಣ ಅಕ್ಕೂರು ಸೋಮಣ್ಣ ಹರ್ತಿ ಸೇರಿದಂತೆ ಸಮಸ್ತ ಪಂಚಮಸಾಲಿ ಸಮಾಜದ ಗುರುಹಿರಿಯರು ಮುಖಂಡರು ಯುವಕರು ಮಹಿಳೆಯರು ಸಮಾಜದ ವಿದ್ಯಾರ್ಥಿಗಳು ಮಕ್ಕಳು ಇದ್ದರು.