ಸಮೀ-ಉಲ್ ಹಕ್ನನ್ನು ಮನೆಯಲ್ಲಿಯೇ ಚಾಕು ಇರಿದು ಹತ್ಯೆ
ಇಸ್ಲಾಮಾಬಾದ್ 03: ತಾಲಿಬಾನ್ ಎಂಬ ಉಗ್ರ ಸಂಘಟನೆಯನ್ನು ಹುಟ್ಟುಹಾಕಿ ಸಾವಿರಾರು ಅಮಾಯಕರ ಸಾವಿಗೆ ಕಾರಣನಾಗಿದ್ದ ಪಾಕಿಸ್ತಾನ ಮೂಲದ ಉಗ್ರ ಮೌಲಾನಾ ಸಮೀ-ಉಲ್ ಹಕ್ ಅಪರಿಚಿತರು ಅವನದೇ ಮನೆಯಲ್ಲಿ ಚಾಕು ಇರಿದು ಕೊಂದು ಹಾಕಿದ್ದಾರೆ.
ತಾಲಿಬಾನ್ ಉಗ್ರ ಸಂಘಟನೆ ಪಿತಾಮಹ ಎಂದೇ ಕರೆಯಲ್ಪಡುತ್ತಿದ್ದ ಪಾಕಿಸ್ತಾನದ ಧಾಮರ್ಿಕ ಗುರು ಹಾಗೂ ಮಾಜಿ ಸೆನೇಟರ್ ಮೌಲಾನಾ ಸಮೀ-ಉಲ್ ಹಕ್ನನ್ನು ಮನೆಯಲ್ಲೇ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಸಮೀ ಉಲ್ ಹಕ್ ಪುತ್ರ ಹಮೀದ್-ಉಲ್-ಹಕ್ ತಂದೆಯ ಕೊಲೆಯ ಬಗ್ಗೆ ದೃಢಪಡಿಸಿದ್ದು, ರಾವಲ್ಪಿಂಡಿಯಲ್ಲಿರುವ ಸಮೀ ಉಲ್-ಹಕ್ ಮನೆಯಲ್ಲಿ ಈ ಘಟನೆ ನಡೆದಿದೆ ಎಂದು ಪಾಕಿಸ್ತಾನ ಸುದ್ದಿ ಸಂಸ್ಥೆ ಅಲ್ ಜಜೀರಾ ವರದಿ ಮಾಡಿದೆ.
ಈ ಬಗ್ಗೆ ಮಾತನಾಡಿರುವ ಸಮೀ ಉಲ್-ಹಕ್ ಪುತ್ರ, ನನ್ನ ತಂದೆ ರೂಮಿನಲ್ಲಿ ಒಬ್ಬರೇ ಇದ್ದಾಗ ದುಷ್ಕಮರ್ಿಯೊಬ್ಬ ನನ್ನ ತಂದೆ ಮೇಲೆ ಚಾಕುವಿನಿಂದ ದಾಳಿ ಮಾಡಿ, ಪರಾರಿಯಾದ. ಈ ವೇಳೆ ಗಾಡರ್್ಗಳು ಹೊರಗೆ ಹೋಗಿದ್ದರು. ಅವರು ವಾಪಸ್ ಬಂದು ನೋಡಿದಾಗ ನನ್ನ ತಂದೆ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ಕಂಡಿದ್ದಾರೆ ಎಂದು ಹೇಳಿದ್ದಾನೆ.
81 ವರ್ಷದ ಸಮೀ-ಉಲ್-ಹಕ್ನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಮಾರ್ಗ ಮಧ್ಯೆ ಆತ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಇನ್ನು ಮತ್ತೊಂದು ಉಗ್ರ ಸಂಘಟನೆ ಸಿಮಿಯ ವಕ್ತಾರ ಯೂಸಫ್ ಶಾಹ್ ಘಟನೆ ಬಗ್ಗೆ ಹೇಳಿಕೆ ನೀಡಿದ್ದು, ದುಷ್ಕಮರ್ಿ ಯಾರು? ಕೊಲೆಯ ಹಿಂದಿನ ಕಾರಣವೇನು ಅನ್ನೋದು ಸ್ಪಷ್ಟವಾಗಿಲ್ಲ ಎಂದು ಹೇಳಿದ್ದಾನೆ. ಸಮೀ ಉಲ್ ಹಕ್ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿಲ್ಲ. ಇಂದು ಮಧ್ಯಾಹ್ನ ಅಕೋರಾ ಕಟ್ಟಕ್ನಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ. ಕೊಲೆ ಸಂಬಂಧ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.
ಸಮೀ ಉಲ್ ಹಕ್, ಪಾಕಿಸ್ತಾನದಲ್ಲಿ ಪ್ರಖ್ಯಾತ ಧಾಮರ್ಿಕ ಗುರುವಾಗಿದ್ದ. ಈತನಿಗೆ ಸಾಕಷ್ಟು ಮುಸಲ್ಮಾನ ಹಿಂಬಾಲಕರಿದ್ದರು. ಈತನ ಹಕ್ಕಾನಿ ಸೆಮಿನರಿ ಅಫ್ಘಾನಿಸ್ತಾನದ ತಾಲಿಬಾನ್ಗೆ ಹಾಗೂ ಇತರೆ ಸಾಕಷ್ಟು ವಿದ್ಯಾಥರ್ಿಗಳಿಗೆ ಕಟ್ಟುನಿಟ್ಟಾದ ಇಸ್ಲಾಂ ಧರ್ಮದ ವ್ಯಾಖ್ಯಾನದ ಬಗ್ಗೆ ಪಾಠ ಮಾಡಿತ್ತು. ಉಗ್ರ ಸಂಘಟನೆ ಹಕ್ಕಾನಿ ನೆಟ್ವಕರ್್ನ ಸಿರಾಜುದ್ದೀನ್ ಹಕ್ಕಾನಿ ಸೇರಿದಂತೆ ಸಾಕಷ್ಟು ತಾಲಿಬಾನ್ ಉಗ್ರರು ಇದೇ ಹಕ್ ಸೆಮಿನರಿಯಿಂದ ಪದವಿ ಪಡೆದವರಾಗಿದ್ದಾರೆ.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 