ಕನ್ನಡ ವಿಷಯದಲ್ಲಿ 100 ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ

ಕನ್ನಡ ವಿಷಯದಲ್ಲಿ 100 ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ  Students who scored 100 marks in Kannada honored

ಬ್ಯಾಡಗಿ   25: ಸರಕಾರ. ಶಿಕ್ಷಣ ಇಲಾಖೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಮತ್ತು ಇತರ ಕನ್ನಡ ಪರ ಸಂಘಟನೆಗಳು ಕನ್ನಡ ಭಾಷೆಯ ಅಭಿವೃದ್ಧಿ ಹಾಗೂ ಅದನ್ನು ಉಳಿಸಲು ಶ್ರಮ ಮಾಡುತ್ತಿದ್ದಾರೆ. ಆದರೆ ಇತ್ತೀಚಿಗೆ ನಡೆದ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ತಾಲೂಕಿನ 40 ವಿದ್ಯಾರ್ಥಿಗಳು ಮಾತೃ ಭಾಷೆಯಾದ ಕನ್ನಡ ಭಾಷೆಯ ಪರೀಕ್ಷೆಯಲ್ಲಿ ಅನುತಿರ್ಣರಾಗಿರುವದು ಎಲ್ಲರಿಗೂ ಬೇಸರ ತಂದಿದೆ ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಸ್ ಜಿ ಕೋಟಿ ಹೇಳಿದರು.ಪಟ್ಟಣದ ಕನ್ನಡದ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಏರಿ​‍್ಡಸಿದ್ದ 2025--26 ನೇ ಸಾಲಿನ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ 100 ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದರು.

ಗಣಿತ ವಿಜ್ಞಾನ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಇಷ್ಟು ಅನುತಿರ್ಣ ಆದ ವಿದ್ಯಾರ್ಥಿಗಳು ಇಲ್ಲ. ಆದರೆ ಮಾತೃ ಮನೆಯ ಭಾಷೆ ಕನ್ನಡದಲ್ಲಿಯೇ ಹೆಚ್ಚು ಅನುತಿರ್ಣ ಆಗಿರುವದು ನಮಗೆಲ್ಲ ಬೇಸರ ತಂದಿದೆ . ಮಕ್ಕಳಲ್ಲಿ ಓದುವ ಬೆರೆಯುವ ಆಸಕ್ತಿ ಕಡಿಮೆ ಆಗುತ್ತಿರುವದು ಕಾರಣ ಇರಬಹುದು. ಆದರೆ ಇದೂ ಕನ್ನಡ ಭಾಷೆಗೆ ಅಪಾಯಕಾರಿ ಹಾಗೂ ಕೆಟ್ಟ ಸಂಗತಿಯಾಗಿದೆ. ಸರಕಾರ ಈ ಬಗ್ಗೆ ರಾಜ್ಯದಲ್ಲಿ ಕನ್ನಡ ಭಾಷೆ ಅನುತಿರ್ಣ ಆದ ಬಗ್ಗೆ ಸಮಿತಿ ಮಾಡಿದೆಜಿಲ್ಲೆಯಲ್ಲಿ ಬ್ಯಾಡಗಿ ತಾಲೂಕ ಸಾಹಿತ್ಯ ಪರಿಷತ್ ಕನ್ನಡ ಭಾಷೆ ಉಳಿಯಲು ಹಾಗೂ ಬೆಳೆಯಲು ಬಹಳ ಪ್ರಯತ್ನ ಮಾಡುತ್ತಿದೆ.  

ಜಿಲ್ಲೆಯಲ್ಲಿ ಕನ್ನಡ ಭಾಷೆಯಲ್ಲಿ ನೂರಕ್ಕೆ ನೂರು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡುತ್ತಿರುವದು ಇವರೇ ಆಗಿದ್ದು ಜಿಲ್ಲೆಯಲ್ಲಿ ಎಲ್ಲಿಯೂ ನಡೆದಿಲ್ಲ ಎಂದು ಶ್ಲಾಘನೆ ಮಾಡಿದರು. ತಾಲೂಕಿನ 40 ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಸನ್ಮಾನ ಮಾಡಲಾಯಿತು. ಕಸಾಪ ತಾಲೂಕ ಅಧ್ಯಕ್ಷ ಬಿ. ಎಂ ಜಗಾಪುರ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು.ಸಾಹಿತಿಗಳಾದ ಜೀವರಾಜ ಛತ್ರದ ಹಾಗೂ ಮಾಲತೇಶ ಚಳಗೇರಿ ಮಾತನಾಡಿದರು. ರೋಟರಿ ಕ್ಲಬ್ ಅಧ್ಯಕ್ಷ ಅನಿಲಕುಮಾರ ಬೊಡ್ಡಪಾಟಿ. ಇನ್ನರ್ವೀಲ್ ಅಧ್ಯಕ್ಷೆ ಪ್ರತಿಭಾ ಮೇಲಗಿರಿ. ಕಸಾಪ ಗೌರವ ಕಾರ್ಯದರ್ಶಿ ಎಸ್ ಬಿ. ಇಮ್ಮಡಿ.

ನಿಕಟ ಪೂರ್ವ ಅಧ್ಯಕ್ಷ ಮಾಲತೇಶ ಅರಳಿಮಟ್ಟಿ. ಕೋಶಾಧ್ಯಕ್ಷ ವಿರೇಂದ್ರ ಶೆಟ್ಟರ. ನಿವೃತ್ತ ಪ್ರಾಚಾರ್ಯ ಆನಂದ ಮುದುಕಮ್ಮನವರ. ಎಂ ಎ. ಪಠಾಣ. ರಾಜಶೇಖರ ಹೊಸಳ್ಳಿ. ಪರಶುರಾಮ ಮೇಲಗಿರಿ.ಮಂಜುನಾಥ ಉಪ್ಪಾರ. ಪವಾಡೆಪ್ಪ ಆಚನೂರ ಜಿತೇಂದ್ರ ಸುಣಗಾರ. ಕವಿತಾ ಬನ್ನಿಹಟ್ಟಿ. ಶ್ವೇತಾ ಲಿಂಬಿಕಾಯಿ. ಲಕ್ಷ್ಮೀ ಉಪ್ಪಾರ ಹಾಗೂ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಆನಂದ ಮುದುಕಮ್ಮನವರ ಸ್ವಾಗತಿಸಿದರು. ಎಸ್‌. ಬಿ ಇಮ್ಮಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕವಿತಾ ಬನ್ನಿಹಟ್ಟಿ ವಂದಿಸಿದರು