ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಾದ ಕ್ರೀಡೆ ಸಾಹಿತ್ಯ ಸಂಗೀತ ಕಲೆಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಬೇಕು : ವಂಟಗೂಡಿ

ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಾದ ಕ್ರೀಡೆ ಸಾಹಿತ್ಯ ಸಂಗೀತ ಕಲೆಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಬೇಕು : ವಂಟಗೂಡಿ Students should take special interest in extracurricular activities such as sports, literature, mus

ರಾಯಬಾಗ  03 : ವಿದ್ಯಾರ್ಥಿಗಳಿಗೆ ಬರೀ ಕಲಿಕೆಯೊಂದಿದ್ದರೆ ಸಾಲದು ಕಲಿಕೆಯ ಜೊತೆಗೆ ಸಂಸ್ಕಾರ ಸಂಸ್ಕೃತಿ ಬಹಳ ಮಹತ್ವದ್ದಾಗಿದೆ. ಎಂದುರು ಮುಖ್ಯ ಅತಿಥಿಗಳಾಗಿ ಹಾರೂಗೇರಿಯ ಸಿದ್ದೇಶ್ವರ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಹಾಗೂ ಸಾಹಿತಿಗಳಾದ ಟಿಎಸ್ ಒಂಟಗೂಡಿ ಸಸಿಗೆ ನೀರು ಉಣಿಸುವುದರ ಮೂಲಕ ಉದ್ಘಾಟನೆಗೊಳಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಂತರ ಮಾತನಾಡಿದ ಅವರು  ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಾದ ಕ್ರೀಡೆ ಸಾಹಿತ್ಯ ಸಂಗೀತ ಕಲೆ ಇವುಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿರಬೇಕು ಸತತ ಪ್ರಯತ್ನದಿಂದ ನಿರಂತರ ಕಾಯಕ ಮಾಡುವುದರೊಂದಿಗೆ ಸದಾ ಕ್ರಿಯಾಶೀಲರಾಗಿರಬೇಕು ಹೆತ್ತ ತಂದೆ ತಾಯಿಯರಿಗೆ ಕಲಿಸಿದ ಗುರುಗಳಿಗೆ ಕಲಿತ ಶಾಲೆಗೆ ಕೀರ್ತಿ ತರುವಂತವರಾಗಬೇಕು ವಿದ್ಯಾರ್ಥಿಗಳು ಜ್ಞಾನ ಬೆಳಗುವ ನಂದಾದೀಪಗಳಾಗಬೇಕು ಎಂದು ಸಾಹಿತಿ ಟಿ ಎಸ್ ವಂಟಗೂಡಿ ಅಭಿಮತ ವ್ಯಕ್ತಪಡಿಸಿದರು.

ತಾಲ್ಲೂಕಿನ ನಾಗರಾಳ  ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ  ಸನ್ 2025 26 ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಏಳನೇ ತರಗತಿಯ ವಿಧ್ಯಾರ್ಥಿಗಳ ಬೀಳ್ಕೋಡುವ ಸಮಾರಂಭ ಜರುಗಿತು.  ಸಮಾರಂಭದ ಅಧ್ಯಕ್ಷತೆಯನ್ನು ಶಾಲೆಯ ಪ್ರಧಾನ ಗುರುಗಳಾದ ಟಿ ಎಲ್ ಸುತಾರ ವಹಿಸಿಕೊಂಡಿದ್ದರು ವೇದಿಕೆಯ ಮೇಲೆ ಎಸ್ ಡಿ ಎಂ ಸಿ ಅಧ್ಯಕ್ಷರಾದ ಬಸವರಾಜ ಚೌಗಲಾ , ಈರ ಗೌಡ ಪಾಟೀಲ , ಸಿಆರ್‌ಸಿ ನಿಂಗಪ್ಪ ಕಾಂಬಳೆ , ಮಾಜಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಪರಶುರಾಮ ಮಗದುಮ್,  ಚಿದಾನಂದ ಪಾಟೀಲ ,  ಕುತುಬುದ್ದೀನ್ ಜಮಾದಾರ,  ಪರಶುರಾಮ ತರಾಳ , ಲಕ್ಷ್ಮಣ ಮಗದುಮ್ಮ , ಗಣೇಶ ಮುಧೋಳ , ಭೀಮಪ್ಪ ಮುಧೋಳ ,  ಸಂಜೀವ ಕಾಂಬಳೆ,  ಬಸ ಗೌಡ ಪಾಟೀಲ ಚಿದಾನಂದ ಮುಧೋಳ ,ಅಪ್ಪಣ್ಣ ದಾವಣಿ ,  ಡಿ ಎನ್ ನಂದರಗಿ ,ವಿ ಆರ್ ಮೇಖಳಿ ,  ಸಂಗೀತಾ ಮಹೇಂದ್ರಕರ , ಸಂಧ್ಯಾ ನಿಂಗನೂರೆ , ಸೇರಿದಂತೆ ಎಲ್ಲ ವಿದ್ಯಾರ್ಥಿಗಳ ವೃಂದ ಹಾಗೂ ಶಿಕ್ಷಕ ವೃಂದ ಉಪಸ್ಥಿತರಿದ್ದರು ಕಾರ್ಯಕ್ರಮವನ್ನು ಆರ್ ಎಚ್ ಕಡಿಯಾಗೋಳ ಸ್ವಾಗತಿಸಿದರು , ಎ ಎಂ ನದಾಫ ನಿರೂಪಿಸಿ ವಂದಿಸಿದರು.