ವಿದ್ಯಾರ್ಥಿ ಜೀವನ ಸಾಧನೆ ಮಾಡುವ ಸುವರ್ಣ ಅವಕಾಶ ಸದುಪಯೋಗ ಪಡೆದುಕೊಳ್ಳಬೇಕು: ಜಾಧವ

ವಿದ್ಯಾರ್ಥಿ ಜೀವನ ಸಾಧನೆ ಮಾಡುವ ಸುವರ್ಣ ಅವಕಾಶ ಸದುಪಯೋಗ ಪಡೆದುಕೊಳ್ಳಬೇಕು: ಜಾಧವ Students should make the most of the golden opportunity to achieve success in life: Jadhav

  ಆಲಮೇಲ 13: ಸಾಧನೆ ಮಾಡುವ ಯೋಗ್ಯ ಸಮಯ ಅದು ವಿದ್ಯಾರ್ಥಿ ಜೀವನ ಅತ್ಯಂತ ಉತ್ತಮ ಸಮಯವಾಗಿದೆ ಈ ಸಮಯ ವಿದ್ಯಾರ್ಥಿಗಳು ಸರಿಯಾಗಿ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮಲಘಾಣದ ಶರಣ ಬಸವೇಶ್ವರ ಕಾಲೇಜಿನ ಪ್ರಾಚಾರ್ಯ ಸುನೀಲ ಜಾಧವ ಹೆಳಿದರು. ಶುಕ್ರವಾರ ತಾಲೂಕಿನ ದೇವರನಾವದಗಿ ಗ್ರಾಮದ ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆಯ ಶಾಲಾ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಎಸ್‌.ಎಸ್‌.ಎಲ್‌.ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಶುಭಕೋರುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಾಧನೆ ಮಾಡಿದವರನ್ನು ಪ್ರೇರಣರಯಾಗಿಟ್ಟುಕೊಂಡು ಉತ್ತಮ ಸಾಧನೆ ಮಾಡುವ ಆಲೋಚನೆ ಬೆಳೆಸಿಕೊಳ್ಳಬೇಕು.

ಇಂದಿನ ಸ್ಪರ್ದಾಯುಗದಲ್ಲಿ ಶಿಕ್ಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತರುವದು ಸಂತೋಷವಾದರೆ ಇನ್ನೊಂದೆಡೆ ಮಕ್ಕಳಲ್ಲಿ ಸಂಸ್ಕಾರ ಕಡಿಮೆಯಾಗುತ್ತಿರುವದು ವಿಸಾದ ವೆನಿಸುತ್ತದೆ. ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಸಿಗುವದು ಅದು ಗ್ರಾಮೀಣ ಭಾಗದ ಶಾಲೆಗಳಲ್ಲಿ ಮಾತ್ರ ಎಂದರು. ಮಕ್ಕಳ ಸಾಹಿತ್ಯೆ ಸಂಗಮದ ಅಧ್ಯಕ್ಷ ಲಕ್ಷ್ಮೀ ಪುತ್ರ ಕಿರನಳ್ಳಿ ಮಾತನಾಡಿ ವಿದ್ಯಾರ್ಥಿಗಳು ನಿರಂತರ ಓದಿನಕಡೆ ಹೆಚ್ಚು ಗಮನಹರಿಸಿ ಮತ್ತು ವಿಶ್ರಾಂತಿ ಸಮಯದಲ್ಲಿ ಮೋಬೈ, ಟಿವಿಯಿಂದ ದೂರವಿದ್ದು ದಿನಪತ್ರಿಕೆಗಳು, ಪುಸ್ತಕಗಳು ಒದುವ ಹವ್ಯಾಸ ಬೆಳೆಸಿಕೊಳ್ಳಿ ಹಾಗೂ. ಈ ವರ್ಷ ಸರ್ಕಾರ ತಾಲೂಕು ಜಿಲ್ಲಾ ಮಟ್ಟದಲ್ಲಿ ಅತಿ ಹೆಚ್ಚು ಅಂಕ ಪಡೆದ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಲಿದ್ದಾರೆ ಅದನ್ನು ಪಡೆದುಕೊಳ್ಳಬೇಕು ಎಂದು ಹೆಳಿದರು.

ಮಕ್ಕಳಿಂದ ಸಂಸ್ಕೃತಿ ಕಾರ್ಯಕ್ರಮ ಜರುಗಿದವು. ಸಂಸ್ಥೆಯ ಅಧ್ಯಕ್ಷ ಮಾಂತೇಶ ಗುಗ್ಗರಿ ಅಧ್ಯಕ್ಷತೆ ವಹಿಸಿದರು. ಸಂಸ್ಥೆಯ ಉಪಾಧ್ಯಕ್ಷ ಮಹೇಂದ್ರ ಗುಗ್ಗರಿ, ಗ್ರಾಮದ ಹಿರಿಯರಾದ ಸುಲಬಾಯಿ ಕುಲಕರ್ಣಿ, ನಿವೃತ್ತ ಶಿಕ್ಷಕ ಸಿ.ಎಸ್‌. ವಾಲಿಕಾರ, ವಿಶೇಷ ಸನಾನಿತರಾದ ಕಾನಿಪ ಅಧ್ಯಕ್ಷ ಅವಧೂತ ಬಂಡಗಾರ, ಆಡಳಿತಾಧಿಕಾರಿ ಪ್ರಕಾಶ ಗುಗ್ಗರಿ, ಮುಖ್ಯ ಶಿಕ್ಷಕ ಎಂ.ಜಿ. ಉಪ್ಪಾರ, ಆರಿ​‍್ಬ. ಹಿರೇಮಠ, ವಿದ್ಯಾರ್ಥಿ ಪ್ರತಿನಿಧಿಗಳಾದ ಪೂಜಾ ಬಿರಾದಾರ, ಸಾಕ್ಷಿ ಪ್ಯಾಟಿ, ಸಾವಿತ್ರಿ ಮಣೂರ, ಚಂದ್ರಕಾಂತ ಹೊನಳ್ಳಿ, ಈರಣಗೌಡ ಬಿರದಾರ, ಪೀರ​‍್ಪ ತಳವಾರ ಮುಂತಾದವರು ಇದ್ದಾರು.  


Annual Friendship Meeting SSLC and PUC Students Achievement and Motivation Importance of Education