ವಿದ್ಯಾರ್ಥಿಗಳು ಓದಿನ ಜೊತೆಗೆ ಸಾಂಸ್ಕೃತಿಕ ತರಬೇತಿಗಳಲ್ಲಿ ಭಾಗವಹಿಸಿ

ವಿದ್ಯಾರ್ಥಿಗಳು ಓದಿನ ಜೊತೆಗೆ ಸಾಂಸ್ಕೃತಿಕ ತರಬೇತಿಗಳಲ್ಲಿ ಭಾಗವಹಿಸಿ Students participate in cultural training along with their studies.

ವಿದ್ಯಾರ್ಥಿಗಳು ಓದಿನ ಜೊತೆಗೆ ಸಾಂಸ್ಕೃತಿಕ ತರಬೇತಿಗಳಲ್ಲಿ ಭಾಗವಹಿಸಿ 

ಬಳ್ಳಾರಿ 02: ಶಾಸ್ತ್ರೀಯ ನೃತ್ಯಕಲೆಯು ಕ್ರಿಯಾತ್ಮಕದಿಂದಲೇ ಹುಟ್ಟುತ್ತದೆ. ಈ ಕ್ರಿಯೆ ಸಕ್ರಿಯವಾಗಿ ನಡೆದುಕೊಂಡು ಹೋದರೆ ಈ ಕಲೆಯು ನಿರಂತರವಾಗಿರುತ್ತದೆ. ವಿದ್ಯಾರ್ಥಿಗಳು ಓದಿನ ಜೊತೆಗೆ ಸಾಂಸ್ಕೃತಿಕ ತರಬೇತಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಎಂದು ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಗಾದಿಲಿಂಗಪ್ಪಅವರು ಹೇಳಿದರು. 

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಬಳ್ಳಾರಿ ಇವರ ಸಂಯುಕ್ತಾಶ್ರಯದಲ್ಲಿ ನಗರದಕೌಲ್ ಬಜಾರ್ ನ ಪರಿಶಿಷ್ಟ ವರ್ಗಗಳ ಸರ್ಕಾರಿ ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯದಲ್ಲಿ ಶುಕ್ರವಾರಆಯೋಜಿಸಲಾಗಿದ್ದ ಪರಿಶಿಷ್ಟ ಪಂಗಡದ ವಿದ್ಯಾರ್ಥಿನಿಯರಿಗೆ “ಶಾಸ್ತ್ರೀಯ ನೃತ್ಯ” ಕಲಿಕಾ ತರಬೇತಿಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ಪ್ರೋತ್ಸಾಹದಾಯಕ ಕಲೆಗಳಲ್ಲಿ ಒಂದಾದ ಶಾಸ್ತ್ರೀಯ ನೃತ್ಯವುಜೀವನಕ್ಕೆಉತ್ಸಾಹತುಂಬುತ್ತದೆ. ವಿದ್ಯಾರ್ಥಿಗಳುಇಂತಹ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ವಿವಿಧ ಕಲೆಗಳಲ್ಲಿ ಯಾವುದೇ ಭಯವಿಲ್ಲದೆ ಭಾಗವಹಿಸಿ ತಮ್ಮದೇಆದಛಾಪು ಮೂಡಿಸಬೇಕುಎಂದರು.ಕನ್ನಡ ಮತ್ತು ಸಂಸ್ಕೃತಿಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳ ಪ್ರತಿಭೆಗಳನ್ನು ಹೊರಹಾಕಲುಇಂತಹ ಕಲಿಕಾ ತರಬೇತಿಯನ್ನುಆಯೋಜಿಸಲಾಗಿದೆ. ಇಂತಹ ಅವಕಾಶಗಳನ್ನು ಉಪಯೋಗಿಸಿಕೊಂಡು ವಿದ್ಯಾರ್ಥಿಗಳು ಮುಖ್ಯ ವಾಹಿನಿಗೆ ಬರಬೇಕು.ಈ ತರಬೇತಿಯು 6 ತಿಂಗಳು ಕಾಲ ನಡೆಯಲಿದ್ದು, ವಾರಕ್ಕೆ ಮೂರು ದಿನದಂತೆ 2 ಗಂಟೆಗಳ ಅವಧಿತರಬೇತಿ ನೀಡಲಾಗುತ್ತದೆ. ಆಸಕ್ತಿ ಹೊಂದಿದಎಲ್ಲ ವಿದ್ಯಾರ್ಥಿಗಳು ತರಬೇತಿಯಲ್ಲಿ  ಪಾಲ್ಗೊಂಡುತಮ್ಮಲ್ಲಿರುವಕಲೆಯನ್ನು ಪ್ರದರ್ಶಿಸಬಹುದುಎಂದು ವಿದ್ಯಾರ್ಥಿಗಳಿಗೆ ಹೇಳಿದರು. 

ಬಳಿಕ ವಿದ್ಯಾರ್ಥಿನಿಯರಿಗೆ “ಶಾಸ್ತ್ರೀಯ ನೃತ್ಯ” ಕಲಿಕಾ ತರಬೇತಿ ನಡೆಸಲಾಯಿತು.ಈ ಸಂದರ್ಭದಲ್ಲಿ ವಿದ್ಯಾರ್ಥಿ ನಿಲಯದ ಮೇಲ್ವಿಚಾರಕರಾದ ಲಕ್ಷ್ಮಿ ಪ್ರಸನ್ನ, ನೃತ್ಯತರಬೇತಿಕಲಾವಿದರಾದಡಿ.ಇಂದ್ರಾಣಿ ಸೇರಿದಂತೆಇಲಾಖೆಯ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು