ಕೋಮು ಸೌಹಾರ್ದತೆಗೆ ಧಕ್ಕೆ ತಂದರೆ ಕಠಿಣ ಕ್ರಮ: ಡಿವೈಎಸ್‌ಪಿ ಸೈಯದ್ ರೋಷನ್ ಜಮೀರ

ಕೋಮು ಸೌಹಾರ್ದತೆಗೆ ಧಕ್ಕೆ ತಂದರೆ ಕಠಿಣ ಕ್ರಮ: ಡಿವೈಎಸ್‌ಪಿ ಸೈಯದ್ ರೋಷನ್ ಜಮೀರ  Strict action will be taken if communal harmony is disturbed: DySP Syed Roshan Zamira

ಕೋಮು ಸೌಹಾರ್ದತೆಗೆ ಧಕ್ಕೆ ತಂದರೆ ಕಠಿಣ ಕ್ರಮ: ಡಿವೈಎಸ್‌ಪಿ ಸೈಯದ್ ರೋಷನ್ ಜಮೀರ  

ಜಮಖಂಡಿ 29: ಈದ್ ಮಿಲಾದ್ ಹಬ್ಬದ ಮೆರವಣಿಗೆ ಸಂದರ್ಭದಲ್ಲಾಗಲಿ, ಸೋಷಿಯಲ್ ಮೀಡಿಯಾಗಳ ಮುಖಾಂತರ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಕೆಲಸ ಮಾಡಿದರೆ ಕಠಿಣ ಕ್ರಮ ಜರುಗಿಸಲಾಗುವದು ಎಂದು ಡಿವೈಎಸ್‌ಪಿ ಸೈಯದ್ ರೋಷನ್ ಜಮೀರ ಹೇಳಿದರು.  

ನಗರ ಶಹರ ಪೋಲಿಸ್ ಠಾಣೆಯ ಸಭಾಭವನದಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಏರಿ​‍್ಡಸಿದ್ದ ಶಾಂತಿಪಾಲನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಗಣೇಶಹಬ್ಬ ಜೊತೆಗೆ ಮುಸ್ಲಿಂ ಬಾಂಧವರ ಈದ್ ಮಿಲಾದ್ ಎರಡೂ ಹಬ್ಬಗಳು ಬಂದಿರುವದರಿಂದ ಅತ್ಯಂತ ಶಿಸ್ತಿನಿಂದ ಹಬ್ಬವನ್ನು ಆಚರಿಸಬೇಕು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸಭೆಗೆ ಹಾಜರಾಗಿರುವ ಹಿರಿಯರು ಕ್ರಮ ಜಗುಗಿಸಬೇಕು. ತಮ್ಮ ಸಮಾಜದ ಯುವಕರನ್ನು ವಾಲಂಟಿಯರ್‌ಗಳನ್ನಾಗಿ ನಿಯಮಿಸಿ ಶಾಂತಿಯುತವಾಗಿ ಹಬ್ಬ ಆಚರಿಸಬೇಕು. ಈ ಕುರಿತು ಪ್ರಾರ್ಥನಾ ಸ್ಥಳಗಳಲ್ಲಿ ಮಾಹಿತಿ ನೀಡಬೇಕು ಎಂದರು. 

ಸಿಪಿಐ ಮಲ್ಲಪ್ಪ ಮಡ್ಡಿ ಮಾತನಾಡಿ ಕಳೆದ ಎರಡು ವರ್ಷಗಳಿಂದ ಬಳಸುವ ಮಾರ್ಗದಲ್ಲೇ ಮೆರವಣಿಗೆಗೆ ಅನುಮತಿ ನೀಡಲಾಗಿದೆ. ಬೈಕ್‌ಗಳನ್ನು ಬೇಕಾಬಿಟ್ಟಿಯಾಗಿ ಚಲಾಯಿಸುವದು, ಶಾಂತತೆ ಕದಡುವಂತೆ ವರ್ತಿಸದಂತೆ ಯುವಕರಿಗೆ ತಿಳಿ ಹೇಳಬೇಕು ಎಂದರು. 

ರಫೀಕ್ ಬಾರಿಗಡ್ಡಿ, ಅಬುಬಕರ್ ಕುಡಚಿ, ರಾಕೇಶ್‌ಲಾಡ, ಪ್ರದೀಪ ಮೆಟಗುಡ, ಮಲ್ಲು ಮಠ, ಗಣೇಶ ಶಿರಗಣ್ಣವರ, ನಗರಸಭೆ ಸದಸ್ಯರಾದ ಕುಶಾಲ ವಾಘಮೊರೆ, ಸುನೀಲ ಸಿಂಧೆ ಮಾತನಾಡಿದರು.  

ಜಮಖಂಡಿಯಲ್ಲಿ ಕಾಡಸಿದ್ದೇಶ್ವರ ದೇವಸ್ಥಾನ, ಅಬುಬಕರ್ ದರ್ಗಾಗಳು ಇದ್ದು ಇಲ್ಲಿ ಯಾವಾಗಲೂ ಕೋಮುಗಲಭೆಗಳಾದ ಇತಿಹಾಸ ಇಲ್ಲ. ಆದ್ದರಿಂದ ಎಲ್ಲರೂ ಸೇರಿ ಹಬ್ಬಗಳನ್ನು ಶಾಂತಿಯಿಂದ ಆಚರಿಸುವದಾಗಿ ತಿಳಿಸಿದರು. ಕ್ರೈಂವಿಭಾಗದ ಪಿಎಸ್‌ಐ ನಾಗರಾಜ ಕಾಜಗಾರ, ಶಹರ ಠಾಣೆ ಪಿಎಸ್‌ಐ ಅನೀಲ ಕುಂಬಾರ ಇದ್ದರು.