ಧಾರವಾಡ 24: ಮಕ್ಕಳು , ಶಿಕ್ಷಕರು ಹಾಗೂ ಪಾಲಕರಲ್ಲಿ ಶಿಕ್ಷಣ ಮತ್ತು ಅಧ್ಯಯನದ ಪ್ರೀತಿ ಹೆಚ್ಚಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಎಲ್ಲಾ ಜಿಲ್ಲೆಗಳ ಉಪನಿರ್ದೇ ಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ವಾರದಲ್ಲಿ ಕನಿಷ್ಠ ಐದು ಶಾಲೆಗಳಿಗೆ ಭೇಟಿ ನೀಡಿ ಸಂವಾದ ನಡೆಸಿ, ಆತ್ಮವಿಶ್ವಾಸ ಹೆಚ್ಚಿಸಬೇಕು.ಪರೀಕ್ಷಾ ನಕಲು ಹಾಗೂ ಪ್ರಶ್ನೆಪತ್ರಿಕೆ ಸೋರಿಕೆಗೆ ಕಡಿವಾಣ ಹಾಕಲು ಇಲಾಖೆ ಕಠಿಣ ಕ್ರಮಕೈಗೊಳ್ಳಲಿದೆ.ಶಿಕ್ಷಕರು ಮೌಲ್ಯಮಾಪನ ಕಾರ್ಯಕ್ಕೆ ಯಾವುದೇ ಕಾರಣಕ್ಕೂ ಬಹಿಷ್ಕಾರಮೌಲ್ಯಮಾಪನದ ಹಾಕಬಾರದು .ಶಿಕ್ಷಣದ ಗುಣಮಟ್ಟ ಅರಿಯಲು ವಿಷಯವಾರು ಮೌಲ್ಯಮಾಪನ ಕಾರ್ಯ ರಾಜ್ಯ ಮಟ್ಟದಲ್ಲಿ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ,ಪ್ರೌಢಶಿಕ್ಷಣ ,ಸಕಾಲ ಮತ್ತು ಕಾರ್ಮಿ ಕ ಸಚಿವರಾದ ಎಸ್.ಸುರೇಶಕುಮಾರ್ ಹೇಳಿದರು.
ನಗರದ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಇಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಳಗಾವಿ ವಿಭಾಗದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು,
ಮಕ್ಕಳಲ್ಲಿ ಬಾಲ್ಯ ವಿವಾಹ, ಲೈಂಗಿಕ ಕಿರುಕುಳ ತಡೆ ಮೊದಲಾದ ವಿಷಯಗಳ ಜಾಗೃತಿ ಮೂಡಿಸಲು ಮೀನಾ ತಂಡಗಳನ್ನು ಕ್ರಿಯಾಶೀಲಗೊಳಿಸಬೇಕು .ತಾವು ಇದುವರೆಗೆ ಸುಮಾರು 150 ಕ್ಕೂ ಹೆಚ್ಚು ಶಾಲೆಗಳಿಗೆ ಭೇಟಿ ನೀಡಿ, ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳೊಂದಿಗೆ ಸಂವಾದ ನಡೆಸಿದ್ದೇನೆ ರಾಜ್ಯದ ಎಲ್ಲಾ ಜಿಲ್ಲೆಗಳ ಡಿಡಿಪಿಐ,ಬಿಇಓ ಹಾಗೂ ಇಲಾಖೆಯ ಇತರ ಅಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡಿ ಅವರ ಆತ್ಮವಿಶ್ವಾಸ ಹೆಚ್ಚಿಸುವ ಚಟುವಟಿಕೆಗಳನ್ನು ಕೈಗೊಳ್ಳಬೇಕು. ಶೈಕ್ಷಣಿಕ ಪ್ರಗತಿ ಚುರುಕುಗೊಳಿಸಲು ಎಲ್ಲಾ ಮಕ್ಕಳ ಪಾಲಕರಿಗೂ ಪತ್ರ ಬರೆದು ಪಾಲಕರ ಸಹಭಾಗಿತ್ವ ಪಡೆಯಬೇಕು ಎಂದರು.
ಈಗಾಗಲೇ ಕಳೆದ ಅಕ್ಟೋಬರ್ ನಲ್ಲಿ ಕಲಬುರ್ಗಿ ವಿಭಾಗದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಜಿಪಂ ಸಿಇಓಗಳ ಸಭೆ ನಡೆಸಲಾಗಿದೆ. ಎಲ್ಲಾ ಜಿಲ್ಲೆಗಳ ಡಿಡಿಪಿಐ, ಜಿಪಂ ಸಿಇಓಗಳೊಂದಿಗೆ ವಿಡಿಯೋ ಸಂವಾದ , ಮಕ್ಕಳೊಂದಿಗೆ ನೇರಫೋನ್ ಇನ್ ಕಾರ್ಯಕ್ರಮ , ಪಾವಗಡ ತಾಲೂಕಿನ ಅಚ್ಚಮ್ಮನಹಳ್ಳಿ,ಚಾಮರಾಜನಗರ ಜಿಲ್ಲೆಯ ಗೋಪಿನಾಥಂ ನಲ್ಲಿ ಶಾಲಾವಾಸ್ತವ್ಯ ಮಾಡಿದ್ದೇನೆ.ಇದುವರೆಗೂ ಸುಮಾರು 15 ಜಿಲ್ಲೆಗಳಿಗೆ ಭೇಟಿ ನೀಡಿ ಶಿಕ್ಷಣ ಇಲಾಖೆಯ ವಾಸ್ತವ ಅಧ್ಯಯನ ಮಾಡಿದ್ದೇನೆ.ಇಂದಿನ ಸಭೆಯಲ್ಲಿ ಅಧಿಕಾರಿಗಳ ವಿಚಾರಗಳನ್ನು ಕೇಳಿದಾಗ ಜಿಲ್ಲೆಗಳ ನಡುವೆ ಎಸ್ ಎಸ್ ಎಲ್ ಸಿ ಫಲಿತಾಂಶ ಸುಧಾರಣೆಗೆ ಆರೋಗ್ಯಕರ ಸ್ಪರ್ಧೆ ಏರ್ಪಟ್ಟಿರುವುದು.ಭವಿಷ್ಯದ ಬಗ್ಗೆ ಭರವಸೆ ಮೂಡಿಸಿದೆ. ಬೆಳಗಾವಿ ಡಯಟ್ ಈಗಾಗಲೇ ಮಾಡಿರುವ ವಿಷಯವಾರು ಮೌಲ್ಯಮಾಪನ ಮಾಡಿ ವರದಿ ನೀಡಿರುವುದು ಮಾದರಿಯಾಗಿದೆ.ಬರುವ ಶೈಕ್ಷಣಿಕ ವರ್ಷದಿಂದ ರಾಜ್ಯದೆಲ್ಲೆಡೆ ಇದನ್ನು ಜಾರಿಗೊಳಿಸಲಾಗುವುದು ಎಂದರು.
ಪರೀಕ್ಷೆಗಳೆಂದರೆ ಭಯವಿರಬಾರದು.ಪರೀಕ್ಷೆ ಎಂದರೆ ಅದು ರಣರಂಗವಲ್ಲ, ಅದು ಕ್ರೀಡಾರಂಗವಾಗಬೇಕು.ಆರೋಗ್ಯಕರ ಸ್ಪಧರ್ೆ ಇರಬೇಕು. ಸರ್ಕಾ ರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿ ಐಐಟಿ,ವೈದ್ಯಕೀಯ, ಐಎಎಸ್, ಐಪಿಎಸ್ ಸಾಧನೆಗೈದವರು, ಉನ್ನತ ಹಂತಕ್ಕೇರಿದವರ ಸಾಕಷ್ಟು ಉದಾಹರಣೆಗಳಿವೆ. ಅವುಗಳನ್ನು ತಿಳಿಹೇಳಿ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಬೇಕು.ಅಗತ್ಯವಿರುವ ಮಕ್ಕಳಿಗೆ ಶಿಕ್ಷಕರು ತಮ್ಮ ಸಹಾಯ ಹಸ್ತ ಚಾಚಬೇಕು. ಪಿಕ್ ನಿಕ್ ಪಜಲ್, ಗುರೂಜಿ ಬಂದರು ಗುರುವಾರ, ಧನಾತ್ಮಕ ಅಂಶ, ಬೇಸಿಗೆ ಸಂಭ್ರಮ ,ವಾರದಲ್ಲಿ ಎರಡು ದಿನ ಬ್ಯಾಗು ರಹಿತ ದಿನ ಸೇರಿ ಮೊದಲಾದ 20 ಅಂಶಗಳ ಕಾರ್ಯಕ್ರಮ ಸಮರ್ಪಕ ಅನುಷ್ಠಾನ ಮಾಡುತ್ತಿದ್ದೇವೆ.ಕೇರಳ ಮಾದರಿಯಲ್ಲಿ ರಾಜ್ಯದ ಸರ್ಕಾ ರಿ ಶಾಲೆಗಳಲ್ಲಿನ ಮಕ್ಕಳಲ್ಲಿ ಕುಡಿಯುವ ನೀರಿನ ಪ್ರವೃತ್ತಿ ಹೆಚ್ಚಿಸಲು ವಾಟರ್ ಬೆಲ್ ಪ್ರಾರಂಭಿಸಲು ಆದೇಶ ಹೊರಡಿಸಲಾಗಿದೆ.ಏಳನೇ ತರಗತಿಗೆ ಪಬ್ಲಿಕ್ ಪರೀಕ್ಷೆ ಆಯೋಜಿಸುವ ಕುರಿತು ಇನ್ನೊಂದು ವಾರದಲ್ಲಿ ಅಂತಿಮ ನಿರ್ಧಾ ರ ಕೈಗೊಳ್ಳಲಾಗುವುದು ಎಂದು ಸಚಿವರಾದ ಸುರೇಶಕುಮಾರ್ ಹೇಳಿದರು.
ಶಾಸಕ ಅರವಿಂದ ಬೆಲ್ಲದ ಮಾತನಾಡಿ,ಸಚಿವ ಸುರೇಶಕುಮಾರ್ ಅವರು ಬಹಳ ಸಂಯಮ, ಸಮಾಧಾನಗಳಿಂದ ಇಂದು ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿರುವುದು ಮಾದರಿಯಾಗಿದೆ.ಪರೀಕ್ಷೆಗಳಲ್ಲಿ ನಕಲು ತಡೆಯಲು ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಮುಂದಾಗಿರುವುದು. ಸಮೃದ್ಧ ಹಾಗೂ ಗುಣಮಟ್ಟದ ಪೀಳಿಗೆಯನ್ನು ರೂಪಿಸಲು ಸಹಕಾರಿಯಾಗಲಿದೆ.ಸಕರ್ಾರ ಶಿಕ್ಷಣಕ್ಕೆ ಆದ್ಯತೆಯಡಿ ಬಜೆಟ್ ಒದಗಿಸುತ್ತಿದೆ.ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಸರ್ಕಾ ರಿ ಶಾಲೆಗಳಲ್ಲಿ 1.5 ಲಕ್ಷ ವಿದ್ಯಾರ್ಥಿ ಗಳ ಕೊರತೆ ಯಾಗಿರುವುದು ಆತಂಕದ ಸಂಗತಿಯಾಗಿದೆ.ಸಕರ್ಾರಿ ಶಾಲೆಗಳಲ್ಲಿ ಓದಿವ ಪ್ರತಿಯೋರ್ವ ವಿದ್ಯಾರ್ಥಿ ಗೆ ತಲಾ ಸುಮಾರು 65 ಸಾವಿರ ರೂ.ಖಚರ್ು ಮಾಡುತ್ತಿದೆ. ಆದರೂ ಕೂಡ ಅಲ್ಲಿನ ಶಿಕ್ಷಣದ ಗುಣಮಟ್ಟ ಹೆಚ್ಚಾಗದಿರುವ ಬಗ್ಗೆ ಗಂಭೀರವಾಗಿ ಚಿಂತಿಸಬೇಕಾಗಿದೆ ಎಂದರು.
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಸತತವಾಗಿ ಉತ್ತಮ ಸಾಧನೆ ತೋರುತ್ತಿರುವ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಬೆಟಗೇರಿಯ ಸಕರ್ಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ರಮೇಶ ಅಳಗುಂಡಿ ಮಾತನಾಡಿ, ತಮ್ಮ ಶಾಲೆಯಲ್ಲಿ ಅನುಸರಿಸುತ್ತಿರುವ ಕ್ರಮಗಳನ್ನು ವಿವರಿಸಿದರು.ವಿಭಾಗದ ಎಲ್ಲಾ ಶೈಕ್ಷಣಿಕ ಜಿಲ್ಲೆಗಳ ಡಿಡಿಪಿಐಗಳು ಎಸ್ಎಸ್ಎಲ್ಸಿ ಫಲಿತಾಂಶ ಸುಧಾರಣೆಗೆ ಕೈಗೊಂಡ ಕ್ರಮಗಳನ್ನು ಸಭೆಗೆ ವಿವರಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಡಾ.ಬಿ.ಸಿ.ಸತೀಶ, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ,ನಿದರ್ೇಶಕ ಡಾ.ಬಿ.ಕೆ.ಎಸ್.ವರ್ಧನ್, ಸಿಸ್ಲೆಪ್ ನಿರ್ದೇ ಶಕ ಬಿ.ಎಸ್.ರಘುವೀರ, ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇ ಶಕ ಡಾ.ಕೆ.ಬಿ.ಗುಡಸಿ ಮತ್ತಿತರರು ವೇದಿಕೆಯಲ್ಲಿ ಇದ್ದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇ ಶಕ ಗಜಾನನ ಮನ್ನಿಕೇರಿ ಹಾಗೂ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಚಿವ ಸುರೇಶಕುಮಾರ್ ಅವರನ್ನು ಸನ್ಮಾನಿಸಿ,ಗೌರವಿಸಿದರು.ಬೆಳಗಾವಿ ವಿಭಾಗದ ಎಲ್ಲಾ ಶೈಕ್ಷಣಿಕ ಜಿಲ್ಲೆಗಳ ಡಿಡಿಪಿಐ,ಬಿಇಓ, ಡಯಟ್ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಬಾಕ್ಸ್
ಜ.16 ರಂದು ಪರೀಕ್ಷಾ ಪೆ ಚರ್ಚೆ
ಬರುವ ಜನವರಿ 16 ರಂದು ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಮಕ್ಕಳಲ್ಲಿ ಪರೀಕ್ಷಾ ಭಯ ಹೋಗಲಾಡಿಸಲು ಪರೀಕ್ಷಾ ಪೆ ಚಚರ್ಾ ಕರ್ಯಕ್ರಮ ನಡೆಸಲಿದ್ದಾರೆ.ಪ್ರತಿ ಜಿಲ್ಲೆಗಳಿಂದಲೂ ಆಯ್ದ ಮಕ್ಕಳನ್ನು ಕಾರ್ಯಕ್ರಮಕ್ಕೆ ಶಿಫಾರಸ್ಸು ಮಾಡಬೇಕು.ಆಯ್ಕೆಯಾದ ಮಕ್ಕಳು ನವದೆಹಲಿಯಲ್ಲಿ ಪ್ರಧಾನಮಂತ್ರಿಗಳೊಂದಿಗೆ ಭಾಗವಹಿಸುವ ಅವಕಾಶ ಪಡೆಯಲಿದ್ದಾರೆ.
ಅದೇ ದಿನ ಎಲ್ಲಾ ಶಾಲೆಗಳಲ್ಲಿ ಪರೀಕ್ಷಾ ಪೆ ಚಚರ್ಾ ಕಾರ್ಯಕ್ರಮ ವೀಕ್ಷಿಸಲು ಏರ್ಪಡುಗಳನ್ನು ಮಾಡಬೇಕು. ಪರೀಕ್ಷಾ ಪೆ ಚರ್ಚೆ ಪುಸ್ತಕ ಎಲ್ಲಾ ಭಾಷೆಗಳಲ್ಲಿ ಲಭ್ಯವಿದೆ.ಆ ಪುಸ್ತಕ ಮಕ್ಕಳಿಗೆ ಸಿಗುವಂತಾಗಬೇಕು ಎಂದು ಸಚಿವರು ಹೇಳಿದರು.
ಪಾಲಕರಿಂದ ಪ್ರತಿಜ್ಞೆ:
ಮಕ್ಕಳ ಪರೀಕ್ಷಾ ಸಮೀಪಿಸುತ್ತಿರುವುದರಿಂದ ಕೇರಳದ ಅಲೆಪ್ಪಿ ಜಿಲ್ಲೆಯಲ್ಲಿ ಈಗಾಗಲೇ ಸಂಜೆಯ ಸಮಯದಲ್ಲಿ ಟಿವಿ ನೋಡದೇ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸುವುದಾಗಿ ಘೋಷಿಸಿ ಪಾಲಕರಿಂದ ಪ್ರತಿಜ್ಞೆ ಮಾಡಿಸಲಾಗಿದೆ.ಈ ಪ್ರತಿಜ್ಞಾ ಸ್ವೀಕಾರ ಕಾರ್ಯ ನಮ್ಮ ರಾಜ್ಯದಲ್ಲಿಯೂ ನಡೆಯಬೇಕು ಎಂದರು.