ಅವಕಾಶಗಳ ಸಮರ್ಕ ಬಳಕೆ ಅವಶ್ಯ: ಅನಿಲ್ ಹಜೇರಿ
Strategic use of opportunities is essential: Anil Hazeri
ಅವಕಾಶಗಳ ಸಮರ್ಕ ಬಳಕೆ ಅವಶ್ಯ: ಅನಿಲ್ ಹಜೇರಿ
ಬಾಗಲಕೋಟೆ 25: ಸೃಜನಾತ್ಮಕತೆಯು 21ನೇ ಶತಮಾನದ ಪ್ರಮುಖ ಕೌಶಲ್ಯವಾಗಿದ್ದು ಪ್ರತಿಯೊಬ್ಬರು ಅಳವಡಿಸಿಕೊಳ್ಳುವುದು ಅವಶ್ಯಕ. ತಂತ್ರಜ್ಞಾನ ಆಧಾರಿತ ಕೌಶಲ್ಯ ಕಲಿಕೆಯಿಂದ ಉತ್ತಮ ಜೀವನ ರೂಪಿಸಿಕೊಳ್ಳಲು ಸಾಧ್ಯ ಎಂದು ಅಗಸ್ತ್ಯ ಫೌಂಡೇಶನನ ಬಾಗಲಕೋಟೆಯ ಕೋರ್ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಅನಿಲ್ ಹಜೇರಿ ಹೇಳಿದರು. ನಗರದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಅಗಸ್ತ್ಯ ಫೌಂಡೇಶನ್, ಮಹಾವಿದ್ಯಾಲಯದ ಪ್ಲೇಸ್ ಮೆಂಟ್ ಸೆಲ್, ಪತ್ರಿಕೋದ್ಯಮ ಮತ್ತು ಕಂಪ್ಯೂಟರ್ ಅಪ್ಲಿಕೇಶನ್ ವಿಭಾಗಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮೂರು ದಿನಗಳ ಸೃಜನಾತ್ಮಕ ಕೌಶಲ್ಯ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಪ್ರತಿಯೊಂದು ಕೌಶಲ್ಯವೂ ಮೌಲ್ಯಯುತವಾಗಿದ್ದು ನಿರಂತರ ಅಧ್ಯಯನದಿಂದ ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳಲು ಸಾಧ್ಯ. ಪಲಿತಾಂಶಗಳು ಶ್ರಮದ ಗುಣಮಟ್ಟತೆಯನ್ನು ತೋರಿಸುತ್ತವೆ ಆದ್ದರಿಂದ ಹೊಸತನವನ್ನು ಅಳವಡಿಸಿಕೊಳ್ಳುವುದನ್ನು ಮತ್ತು ಅಧ್ಯಯನದ ನಿರಂತತೆಯನ್ನು ಬೆಳಸಿಕೊಳ್ಳಬೇಕು. ಸಿಕ್ಕ ಅವಕಾಶಗಳನ್ನು ಸಮರ್ಕವಾಗಿ ಬಳಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಪ್ರಾಚಾರ್ಯರಾದ ಎಸ್.ಆರ್‌ಮುಗನೂರಮಠ ಮಾತನಾಡಿ ಮನಸ್ಸು ಯಾವ ಕಾರ್ಯದಲ್ಲಿ ಸಮರ್ಕವಾಗಿ ತೊಡಗಿಕೊಳ್ಳುತ್ತದೆಯೋ ಅಲ್ಲಿ ಆಯಾಸ, ದನಿವುಗಳಿರುವುದಿಲ್ಲ. ಕೃತಕ ಬುದ್ಧಿಮತ್ತೆಯು ಎಲ್ಲ ಕ್ಷೇತ್ರವನ್ನು ವ್ಯಾಪಿಸಿಕೊಳ್ಳುತ್ತಿದ್ದು ಅದನ್ನು ಕಲಿಯುವ ಮತ್ತು ಅಳವಡಿಸಿಕೊಳ್ಳುವ ಕೆಲಸ ಮಾಡಬೇಕು. ಪುಸ್ತಕ ಓದಿ ನೆನಪಿಟ್ಟುಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತಿದ್ದು ನೆನಪಿಟ್ಟುಕೊಳ್ಳುವ ಶ್ರಮದಾಯಕ ಕೆಲಸಕ್ಕೆ ಎಐ ತಂತ್ರಜ್ಞಾನ ಸಹಾಯಕವಾಗಿದೆ. ಮೆದುಳಿನ ಭಾಗಕ್ಕೆ ತಂತ್ರಜ್ಞಾನದ ಚಿಪ್ ಅಳವಡಿಸಿ ಕಾರ್ಯಚಟುವಟಿಕೆ ನಿರ್ವಹಣೆ ಮಾಡುವಷ್ಟು ವಿಜ್ಞಾನ ಮುಂದುವರೆದಿದೆ.
ವಿದ್ಯಾರ್ಥಿಗಳಿಗೆ ಪ್ರತಿಯೊಂದು ವಿಷಯವೂ ಅಧ್ಯಯನಯೋಗ್ಯವಾಗಿದ್ದು ಮುಕ್ತಮನಸ್ಸಿನಿಂದ ಅಧ್ಯಯನಶೀಲತೆಯಲ್ಲಿ ತೊಡಗಿಕೊಳ್ಳಬೇಕು. ಜ್ಞಾನವನ್ನು ಎಷ್ಟು ಪರಿಣಾಮಕಾರಿಯಾಗಿ ಬಳಸುತ್ತೇವೆ ಎನ್ನುವುದು ಕ್ರಿಯೇಟಿವಿಟಿಯಾಗಿದ್ದು ಅದಕ್ಕೆ ಕೃತಕ ಬುದ್ಧಿಮತ್ತೆ ಸಹಕಾರಿಯಾಗುತ್ತಿದೆ. ಕಲಾ ವಿಭಾಗದ ವಿದ್ಯಾರ್ಥಿಗಳು ಎಲ್ಲ ಕ್ಷೇತ್ರಗಳಲ್ಲಿಯೂ ಜೀವನ ರೂಪಿಸಿಕೊಳ್ಳಲು ಸಾಧ್ಯ ಪ್ರತಿಯೊಂದನ್ನು ಸವಾಲಾಗಿ ಸ್ವೀಕರಿಸಿ ಕಲಿಯಲು ಮುಂದಾದರೆ ಯಶಸ್ಸು ಶತಸಿದ್ದ. ಕೌಶಲ್ಯಗಳನ್ನು ಹೇಗೆ ಬೆಳಸಿಕೊಳ್ಳುತ್ತೀರಿ ಮತ್ತು ಬಳಸಿಕೊಳ್ಳುತ್ತೀರಿ ಎನ್ನುವುದು ನಿಮ್ಮ ಜೀವನವನ್ನು ರೂಪಿಸುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಮೂರು ದಿನದ ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಮೂರು ಹಂತದ ಸರ್ಟಿಫಿಕೇಟ್ ಗಳನ್ನು ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕಾರ್ಯಾಗಾರದ ತರಬೇತಿದಾರ ದಿನೇಶ್ ರಾಠೋಡ, ಐಕ್ಯೂಎಸಿ ಸಂಯೋಜಕರಾದ ಡಾ.ಎ.ಯು ರಾಠೋಡ, ಪ್ಲೇಸ್ ಮೆಂಟ್ ಸೆಲ್ ಸಂಯೋಜಕರಾದ ಎಸ್.ವಿ ಕಟ್ಟಿ, ಪ್ರಾಧ್ಯಾಪಕರುಗಳಾದ ಐ.ಬಿ ಚಿಕ್ಕಮಠ, ಎನ್.ಆರ್ ಇಂಗಳಗಿ, ಮಹಾಂತೇಶ ದೊಡವಾಡ, ಎಮ್.ಐ ಕಂಬಿ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 