ನಗರದ ಜನರಿಗೆ ಸಮರ​‍್ಕ ಕುಡಿಯುವ ನೀರು ಪೂರೈಕೆಗೆ ಕ್ರಮ: ಹೆಚ್‌.ಆರ್‌.ಗವಿಯಪ್ಪ

ನಗರದ ಜನರಿಗೆ ಸಮರ​‍್ಕ ಕುಡಿಯುವ ನೀರು ಪೂರೈಕೆಗೆ ಕ್ರಮ: ಹೆಚ್‌.ಆರ್‌.ಗವಿಯಪ್ಪ Steps taken to provide safe drinking water to the people of the city: H.R. Gaviyappa

ವಿಜಯನಗರ (ಹೊಸಪೇಟೆ) 22:  10 ಲಕ್ಷ ಲೀಟರ್ ಸಾಮರ್ಥ್ಯದ ಎರಡು ಜಲಸಂಗ್ರಹಗಾರಗಳಿಗೆ ಭೂಮಿ ಪೂಜೆ ನೆರವೇರಿಸಲಾಗಿದ್ದು ಮುಂದಿನ ದಿನಗಳಲ್ಲಿ ನಗರದ ಜನರಿಗೆ ಸಮರ​‍್ಕ ಮತ್ತು ಶುದ್ಧ ಕುಡಿಯುವ ನೀರು ಪೂರೈಸುವ ನಿಟ್ಟಿನಲ್ಲಿ ಅಮೃತನಗರೋತ್ಥಾನ ಯೋಜನೆ ಸಹಕಾರಿಯಾಗಲಿದೆ ಎಂದು ಶಾಸಕರಾದ ಹೆಚ್‌.ಆರ್‌.ಗವಿಯಪ್ಪ ತಿಳಿಸಿದರು.  

ಅವರು ಬುಧವಾರ ಎಂ.ಜಿ. ನಗರ ಮತ್ತು ಎಂ.ಪಿ ಪ್ರಕಾಶ್ ನಗರದಲ್ಲಿ ತಲಾ 10 ಲಕ್ಷ ಲೀಟರ್ ಸಾಮರ್ಥ್ಯದ ಎರಡು ನೀರಿನ ಟ್ಯಾಂಕ್‌ಗಳ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.? ಒಟ್ಟು ರೂ.4.9 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಪ್ರಸ್ತುತ ಇರುವ 38 ಎಂಎಲ್‌ಡಿ (ಒಐಆ) ನೀರು ಸರಬರಾಜನ್ನು ಹೊಸ ಯೋಜನೆಯ ಮೂಲಕ 108ಹಿ110 ಎಂಎಲ್‌ಡಿಗೆ ಹೆಚ್ಚಿಸಲಾಗುವುದು.

ಈ ಯೋಜನೆಯಿಂದ ಮುಂದಿನ ದಿನಗಳಲ್ಲಿ ಸುಮಾರು 7 ರಿಂದ 8 ಲಕ್ಷ ಜನರಿಗೆ ನೀರಿನ ಸೌಲಭ್ಯ ದೊರೆಯಲಿದೆ.?ಭವಿಷ್ಯದ ಯೋಜನೆ: ಜೋಳದರಾಶಿ ಗುಡ್ಡ, ದೊಣ್ಣೆಹಳ್ಳಿ ಮತ್ತು ಕಾರಿಗನೂರು ಬಳಿ ಪ್ರಮುಖ ಟ್ಯಾಂಕ್‌ಗಳ ನಿರ್ಮಾಣ ಹಾಗೂ 190 ಕೋಟಿ ರೂ. ವೆಚ್ಚದಲ್ಲಿ ಹೊಸ ಪಂಪಿಂಗ್ ಸ್ಟೇಷನ್ ಮತ್ತು ನೀರು ಸಂಸ್ಕರಣಾ ಘಟಕ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು.?ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಎನ್‌.ರೂಪೇಶ್, ಪೌರಾಯುಕ್ತ ಶಿವಕುಮಾರ್ ಸೇರಿದಂತೆ ಹಲವು ಜನಪ್ರತಿನಿಧಿಗಳು ಉಪಸ್ಥಿತರಿದ್ದರು.