ಗಣಪತಿ ವಿಸರ್ಜನೆ ಜಾಗರೂಕತೆ, ಸಡಗರದಿಂದ ನೆರವೇರಿಸಲು ಕ್ರಮ : ಪ್ರಲ್ಹಾದ ಜೋಶಿ
Steps taken to ensure Ganpati immersion with vigilance and enthusiasm: Pralhad Joshi
ಗಣಪತಿ ವಿಸರ್ಜನೆ ಜಾಗರೂಕತೆ, ಸಡಗರದಿಂದ ನೆರವೇರಿಸಲು ಕ್ರಮ : ಪ್ರಲ್ಹಾದ ಜೋಶಿ
ಶಿಗ್ಗಾವಿ 14 :ಗಣಪತಿ ವಿಸರ್ಜನೆಯನ್ನು ಜಾಗರೂಕತೆಯಿಂದ ಹಾಗೂ ಸಡಗರದಿಂದ ನೆರವೇರಿಸುವಂತೆ ಶುಭಾಶಯ ಕೋರಿದರು. ಜೊತೆಗೆ, ಮುಂದಿನ ದಿನಗಳಲ್ಲಿ ಶುದ್ಧ ಮಣ್ಣಿನಿಂದ ತಯಾರಿಸಲಾದ ಗಣಪತಿಗಳ ಸ್ಥಾಪನೆ ಹಾಗೂ ಪರಿಸರ ಸ್ನೇಹಿ ಆಚರಣೆ ಬಗ್ಗೆ ಜಾಗೃತಿ ಮೂಡಿಸಿ, ಎಲ್ಲರೂ ಪರಿಸರ ಪ್ರೇಮಿಗಳಾಗಿ ಹಬ್ಬವನ್ನು ಆಚರಿಸಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕರೆ ನೀಡಿದರು. ತಾಲೂಕಿನ ಬಂಕಾಪೂರ ಮತ್ತು ಶಿಗ್ಗಾವಿ ಪಟ್ಟಣಗಳ ಪ್ರಮುಖ ಗಣೇಶೋತ್ಸವ ಮೂರ್ತಿಗಳಿಗೆ ಭಕ್ತಿಪೂರ್ವಕವಾಗಿ ಪೂಜೆ ಸಲ್ಲಿಸಿ ಮಾತನಾಡಿ ಯುವಕ ಮಂಡಳಿಗಳ ಪ್ರತಿನಿಧಿಗಳು ಡಿಜೆ ಬಳಕೆಗೆ ಸಂಬಂಧಿಸಿದ ಮನವಿಯನ್ನು ಸಚಿವರ ಗಮನಕ್ಕೆ ತಂದಾಗ, ಅವರು ತಕ್ಷಣವೇ ಸ್ಥಳೀಯ ಪೊಲೀಸ್ ಹಿರಿಯ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿ, ಶಾಂತಿ ಮತ್ತು ಸೌಹಾರ್ದಯುತವಾಗಿ ಹಬ್ಬವನ್ನು ಆಚರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಕಾರ್ಯಕ್ರಮದಲ್ಲಿ ತಾಲೂಕ ಭಾಜಪ ಅಧ್ಯಕ್ಷರಾದ ವಿಶ್ವನಾಥ ಹರವಿ ,ಪುರಸಭಾ ಸದಸ್ಯರಾದ ಶ್ರೀಕಾಂತ ಬುಳ್ಳಕ್ಕನವರ, ದಯಾನಂದ ಅಕ್ಕಿ,ಪರಶುರಾಮ ಸೊನ್ನದ, ಮಂಜುನಾಥ ಬ್ಯಾಹಟ್ಟಿ,ರಮೇಶ ವನಹಳ್ಳಿ,ರಾಜು ಟೋಪಣ್ಣನವರ, ಮುಖಂಡರಾದ ಶಿವಾನಂದ ಮ್ಯಾಗೇರಿ, ಹೊನ್ನಪ್ಪ ಹೂಗಾರ, ಬಸವರಾಜ ನಾರಾಯಣಪುರ, ಹೊನಕೇರಿ, ಆನಂದ ಸುಬೇದಾರ, ಸಚಿನ ಮಡಿವಾಳರ, ಗಣಪತಿ ಮಂಡಳಿಯ ಸದಸ್ಯರು, ಪಟ್ಟಣದ ಹಿರಿಯರು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ 