ಜನವರಿ 6 ರಂದು ಕಲಬುರ್ಗಿಯಲ್ಲಿ ರಾಜ್ಯ ಮಟ್ಟದ ಸ್ಲಂ ಜನರ ಸಮಾವೇಶ
State-level slum people's conference in Kalaburagi on January 6
ಗದಗ-4 : ಸ್ಲಂ ಜನಾಂದೋಲನ-ಕರ್ನಾಟಕ ರಾಜ್ಯ ಸಮಿತಿಯ 16ನೇ ಸಂಸ್ಥಾಪನಾ ದಿನದ ನಿಮಿತ್ಯ ಕಾರ್ೋರೇಟ್ ಜಾತಿವಾದಿ ನವ-ನಗರಗಳಲ್ಲಿ ಸಾಮಾಜಿಕ ನ್ಯಾಯ ಮತ್ತು ಸ್ಲಂ ಜನರ ಸವಾಲು ಕುರಿತು ಕಲಬುರ್ಗಿಯಲ್ಲಿ ಇದೇ ಜನವರಿ 6 ರಂದು ರಾಜ್ಯ ಮಟ್ಟದ ಸ್ಲಂ ಜನರ ಬೃಹತ್ ಸಮಾವೇಶ ಆಯೋಜಿಸಲಾಗಿದೆ ಎಂದು ಸ್ಲಂ ಜನಾಂದೋಲನ-ಕರ್ನಾಟಕ ರಾಜ್ಯ ಸಂಚಾಲಕ ಹಾಗೂ ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷರಾದ ಇಮ್ತಿಯಾಜ.ಆರ್.ಮಾನ್ವಿ ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ. ಇತ್ತಿಚ್ಚಿಗೆ ದೇಶ ಮತ್ತು ರಾಜ್ಯಗಳ ಪ್ರಭುತ್ವದ ಆಡಳಿತದಿಂದ ನಿರ್ಮಾಣವಾಗುತ್ತಿರುವ ಅಭಿವೃಧ್ದಿ ತಾತರತಮ್ಯದಿಂದಾಗಿ ನಗರಗಳಲ್ಲಿ ಅಸಮಾನತೆಯ ನಾಗರೀಕ ಸಮಾಜದಿಂದ ಬಡವರ ಮತ್ತು ಶ್ರೀಮಂತರ ಅಂತರ ವೇಗವಾಗಿ ಸೃಷ್ಠಿ ಮಾಡುತ್ತಿದ್ದು ಸರ್ವ ಜನಾಂಗದ ಭಾರತ ನಿರ್ಮಾಣಕ್ಕೆ ಫ್ಯಾಸಿಸಂ ಪ್ರೇರಿತ ಕಾರ್ೋರೇಟ್ ಜಾತಿವಾದಿ ನಗರಗಳ ನಿರ್ಮಾಣ ದೊಡ್ಡ ಅಘಾತಕಾರಿಯಾಗಿದೆ.
ನವ ಭಾರತಕ್ಕಾಗಿ ನವ ಕರ್ನಾಟಕ ನಿರ್ಮಾಣದ ವಿಷನ್-2030 ಮುನ್ನೋಟದಂತೆ ಸರ್ಕಾರಗಳು ತಮ್ಮಲ್ಲ ಜವಾಬ್ದಾರಿಗಳನ್ನು ಖಾಸಗಿ ವಲಯಕ್ಕೆ ಅಂದರೆ ಕಾರ್ೋರೇಟ್ ವಲಯಕ್ಕೆ ಬಿಟ್ಟು ಕೊಡುವ ಮುನ್ನೋಟ ಹೊಂದಿದೆ. ಆದ್ದರಿಂದ ಸಂವಿಧಾನ ಬದ್ದವಾಗಿ ಬಡಜನರ ಕಲ್ಯಾಣಕ್ಕೆ ಆದ್ಯತೆ ನೀಡಿ ನಗರ ಪ್ರದೇಶದ ಸ್ಲಂಗಳಲ್ಲಿ ಬಡತನದ ಪ್ರಮಾಣವನ್ನು ಇಳಿಕೆ ಮಾಡಲು ಶಿಕ್ಷಣ, ಆರೋಗ್ಯ, ವಸತಿ, ಭೂಮಿ ಮತ್ತು ಸಾಮಾಜಿಕ ಭದ್ರತೆಗಾಗಿ ಹೋರಾಟ ಕಟ್ಟಿದಾಗ ಮಾತ್ರ ಸ್ಲಂ ಜನರ ಘನತೆಯ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಸಾಮಾಜಿಕ ನ್ಯಾಯವಾಗಿ ನಮ್ಮ ಪಾಲನ್ನು ಪಡೆಯಲು ನೇರವಾಗಿ ಅಸಮಾನತೆಯ ಮುಕ್ತನಗರಗಳ ಜೊತಗೆ ಬಡತನ ಮುಕ್ತ ನಗರಗಳನ್ನಾಗಿಸುವ ಕನಸಿನತ್ತ ಹೆಜ್ಜೆ ಇಡಬಹುದಾಗಿದೆ.
ಇಂದಿನ ದೇಶದ ರಾಜಕೀಯ ಸಂದರ್ಭ ಜನಸಾಮಾನ್ಯರನ್ನು ಉಸಿರುಗಟ್ಟಿಸುವ ವಾತಾವರಣದಿಂದ ಕೂಡಿದ್ದು. ಜನಸಾಮಾನ್ಯರ ಸಮಸ್ಯಗಳನ್ನು ಮರೆಮಾಚಿ ಬೆಲೆ ಏರಿಕೆ ಮತ್ತು ಧ್ವೇಷ ರಾಜಕಾರಣ, ರೈತ, ಕಾರ್ಮಿಕರು, ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ಅಲೆಮಾರಿಗಳ ಸುಲಿಗೆಯಿಂದಾಗಿ ತಳ ಸಮುದಾಯಗಳಿಗೆ ಅನ್ಯಾಯವಾಗುತ್ತಿದೆ. ಸ್ಲಂ ನಿವಾಸಿಗಳನ್ನು ದೇಶದ ನಾಗರೀಕರನ್ನಾಗಿ ನೋಡದೆ ಮನೆ ಇಲ್ಲದ ಅಕ್ರಮ ವಲಸಿಗರೂ ಎನ್ನುವ ದೃಷ್ಠಿಯಲ್ಲಿ ಪ್ರಭುತ್ವ ನೋಡುತ್ತಿದೆ.
ಹಾಗಾಗಿ ಸಂವಿಧಾನದ ಸಾಮಾಜಿಕ ನ್ಯಾಯ, ಸಮಪಾಲು, ಸಮಬಾಳು ಖಾತ್ರಿಗಾಗಿ, 2030 ರಲ್ಲಿ ಎದುರಾಗುವ ಅಪಾಯವನ್ನು ತಪ್ಪಿಸಲು, ಕಾರ್ೋರೇಟ್ ಜಾತಿವಾದಿಗಳ ನವ-ನಗರಗಳ ಅಭಿವೃಧ್ದಿಯನ್ನು ದಿಕ್ಕರಿಸಿ ಬಹುತ್ವದ ಭಾರತವನ್ನು ರಕ್ಷಿಸುವ ಮತ್ತು ಸಂವಿಧಾನವನ್ನು ಬಲಗೊಳಿಸಲು ನಗರವಂಚಿತ ಸಮುದಾಯಗಳು ಸಂಘಟಿತರಾಗಿ ನಗರಗಳ ಮೇಲೆ ಹಕ್ಕು ಸ್ಥಾಪನೆಗಾಗಿ ಸೈದ್ಧಾಂತಿಕ ಹೋರಾಟವನ್ನು ಮಾಡುವ ಮೂಲಕ ಜನರ ರಾಜಕಾರಣಕ್ಕೆ ಮುನ್ನಡಿ ಬರೆಯಬೇಕಾಗಿದೆ. ಆದ್ದರಿಂದ ನಮ್ಮ ಸಂವಿಧಾನ ಬದ್ದ ಹಕ್ಕುಗಾಗಿ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಜನವರಿ-6 ರಂದು ಕಲಬುರ್ಗಿಯಲ್ಲಿ ಸ್ಲಂ ಜನಾಂದೋಲನ-ಕರ್ನಾಟಕ ರಾಜ್ಯ ಸಮಿತಿಯ 16ನೇ ಸಂಸ್ಥಾಪನಾ ದಿನದ ಅಂಗವಾಗಿ ನಡೆಯಲಿರುವ ರಾಜ್ಯ ಮಟ್ಟದ ಸ್ಲಂ ಜನರ ಬೃಹತ್ ಸಮಾವೇಶದಲ್ಲಿ ಎಲ್ಲಾ ಸ್ಲಂ ಜನರು ಭಾಗವಹಿಸಿ ಸ್ಲಂ ಜನರ ರಾಜ್ಯ ಮಟ್ಟದ ಸಮಾವೇಶವನ್ನು ಯಶಸ್ವಿಗೊಳಿಸಬೇಕೆಂದು ಸ್ಲಂ ಸಮಿತಿ ಅಧ್ಯಕ್ಷರಾದ ಇಮ್ತಿಯಾಜ.ಆರ್.ಮಾನ್ವಿ, ಕಾರ್ಯದರ್ಶಿ ಅಶೋಕ ಕುಸಬಿ ಮನವಿ ಮಾಡಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 