ರಾಣೆಬೆನ್ನೂರಲ್ಲಿ ಹೊನಲು ಬೆಳಕಿನ ರಾಜ್ಯಮಟ್ಟದ ಟೂರ್ನಮೆಂಟ್
State-level light show tournament in Ranebennur
ರಾಣೇಬೆನ್ನೂರು :10 ಇಲ್ಲಿನ ಗಂಗಾಪುರ ರಸ್ತೆಯ ಗುರುಕೊಟ್ಟೂರೇಶ್ವರ ಮಠದ ಆವರಣದಲ್ಲಿ ಇದೆ ಫೆಬ್ರವರಿ 14ರಂದು ಶನಿವಾರ ಮುಂಜಾನೆ 10 ಗಂಟೆಗೆ, ಮಹಾಶಿವರಾತ್ರಿ ಪ್ರಯುಕ್ತ ತನ್ನ 2ನೇ ವಾರ್ಷಿಕೋತ್ಸವದ ಅಂಗವಾಗಿ, ಹೊನಲು ಬೆಳಕಿನ ರಾಜ್ಯ ಮಟ್ಟದ ಲೋ ಟೆನಿಸ್ ಬಾಲ್ ಹಾಪ್ ಪಿಚ್ ಕ್ರಿಕೆಟ್ ಟೊರರ್ನಮೆಂಟ್ ಆಯೋಜಿಸಲಾಗಿದೆ ಎಂದು ಕೆಸಿಸಿ ಕ್ರಿಕೆಟ್ ಕ್ಲಬ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಕುರಿತು ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸದಸ್ಯ ಸಿದ್ದಣ್ಣ ಚಿಕ್ಕಬಿದರಿ ಅವರು, ರಾಣೆಬೆನ್ನೂರು ಮಾಹಿಸ್ ಎಲೆವನ್ ಮತ್ತು ಕೆಸಿಸಿ ಕ್ರಿಕೆಟ್ ಕ್ಲಬ್ ಸ್ಪರ್ಧೆ ಕಳೆದ ಎರಡು ವರ್ಷಗಳಿಂದ ಆಯೋಜಿಸುತ್ತಾ ಬಂದಿದೆ ರಾಜ್ಯಮಟ್ಟದ ಈ ಪಂದ್ಯಾವಳಿಯಲ್ಲಿ ನಾಡಿನ ಅನೇಕ ಸ್ಪರ್ದಾಳುಗಳು ಭಾಗವಹಿಸಲಿದ್ದಾರೆ. ರಾಜ್ಯಮಟ್ಟದ ನಿರ್ಣಾಯಕರು ಪಾಲ್ಗೊಳ್ಳುವ ಟೂರ್ನಮೆಂಟ್ ನಲ್ಲಿ ಎಲ್ಲ ರೀತಿಯ ಸುಸಜ್ಜಿತ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು. ನಗದು ಮೊತ್ತ( ಪ್ರಥಮ)18,888, ದ್ವಿತೀಯ 11,111, ಮತ್ತು ತೃತೀಯ 8,888. ಬಹುಮಾನವಾಗಿ ದೊರೆಯಲಿದೆ ಅಲ್ಲದೆ ಬೆಸ್ಟ್ ಬ್ಯಾಟ್ಸ್ಮನ್, ಬೌಲರ್, ಆಲ್ ರೌಂಡರ್, ಗಳಿಗೆ ನಗದು ಬಹುಮಾನ ಆಕರ್ಷಕ ಟ್ರೋಪಿ ದೊರೆಯಲಿದೆ ಎಂದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 