ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಗೆ ಸಚಿವ ಡಾ.ಹೆಚ್‌.ಕೆ.ಪಾಟೀಲ ರವರಿಂದ ಚಾಲನೆ

State-level Kabaddi tournament inaugurated by Minister Dr. H.K. Patil

  ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಗೆ ಸಚಿವ ಡಾ.ಹೆಚ್‌.ಕೆ.ಪಾಟೀಲ ರವರಿಂದ ಚಾಲನೆ  

 ಗದಗ  15: :ರಾಜೀವಗಾಂಧಿ ನಗರದಲ್ಲಿ ಗೌತಮ ಬುದ್ಧ ಸೇವಾ ಸಮಿತಿ ಗದಗ ಮತ್ತು ವೇರಿಗುಡ್ ಮಾರ್ನಿಂಗ್ ದಿನಪತ್ರಿಕಾ ಬಳಗದ ವತಿಯಿಂದ ಡಾ.ಬಿ.ಆರ್‌.ಅಂಬೇಡ್ಕರ ರವರ 134 ನೇಯ ಜಯಂತ್ಯೋತ್ಸವದ ಅಂಗವಾಗಿ  ಏರಿ​‍್ಡಸಲಾದ ರಾಜ್ಯ ಮಟ್ಟದ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿ ತೃತಿಯ ಜ.ತೋ.ಡಾ.ಸಿದ್ದಲಿಂಗ ಶ್ರೀಟ್ರೋಫಿ ಕಬಡ್ಡಿ ಪಂದ್ಯಾವಳಿಗೆ ಡಾ.ಬಿ.ಆರ್‌.ಅಂಬೇಡ್ಕರವರ ಭಾವಚಿತ್ರಕ್ಕೆ ಪಷ್ಪಾರ್ಚನೆ ಮಾಡಿ ಟಾಸ್ ಮಾಡುವ ಮೂಲಕ ಪಂದ್ಯಕ್ಕೆ  ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಡಾ.ಹೆಚ್‌.ಕೆ.ಪಾಟೀಲ ರವರು ಚಾಲನೆ ನೀಡಿ, ವಿಜಿಎಂ ತಂಡ ಗದಗ  ಹಾಗೂ ಜಂತಲಿಶಿರೂರ  ತಂಡಗಳಿಗೆ  ಶುಭಕೋರಿದರು. 

ಅವರು ದಿನಾಂಕ 13. ಹಾಗೂ 14 ಎಪ್ರಿಲ್ 2025 ರಂದು ರಾಜೀವಗಾಂಧಿ ನಗರದ ಸರ್ಕಾರಿ ಶಾಲೆಯ ನಂ 8ರ ಆವರಣದಲ್ಲಿ ನಡೆದ ಗೌತಮ ಬುದ್ಧ ಸೇವಾ ಸಮಿತಿ ಗದಗ ಮತ್ತು ವೇರಿಗುಡ್ ಮಾರ್ನಿಂಗ್ ದಿನ ಪತ್ರಿಕಾ ಬಳಗದ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಮತ್ತು ಸನ್ಮಾನ ಮತ್ತು ಸಾಂಸ್ಕೃತಿಕ ರಾಜ್ಯ ಮಟ್ಟದ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿ ತೃತಿಯ ಜ.ತೋ.ಡಾ.ಸಿದ್ದಲಿಂಗ ಶ್ರೀಟ್ರೋಫಿ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿದರು  

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಎಸ್‌.ವಿ.ಸಂಕನೂರು ಯುವಸಬಲೀಕರಣ ಮತ್ತು ಕ್ರೀಡಾಇಲಾಖೆಯ ಸಹಾಯಕ ನಿರ್ದೇಶಕರಾದ ಶರಣು ಗೋಗೇರಿ ಗೌತಮ ಬುದ್ಧ ಸೇವಾ ಸಮಿತಿ ಅಧ್ಯಕ್ಷರಾದ ದೇವಪ್ಪ ಎನ್‌. ಲಿಂಗದಾಳ ವಾಕರಾರ ಸಂಸ್ಥೆಯ ಉಪಾಧ್ಯಕ್ಷರಾದ ಪೀರಸಾಬ ಕೌತಾಳ ನಗರಸಭೆ ಸದಸ್ಯರಾದ ಎಲ್‌. ಡಿ. ಚಂದಾವರಿ ಸುರೇಶ ಕಟ್ಟಿಮನಿ ಸಾಹಿರಾ ಡೌಲಪರ‌್ಸ ಇಮಾಮಸಾಬ ಮೋರಬ ತೋಂಟದಾರ್ಯ ಮಠದ ಆಡಳಿತಾಧಿಕಾರಿಗಳಾದ ಎಸ್‌.ಎಸ್‌.ಪಟ್ಟಣಶೆಟ್ಟರ ಚಲವಾದಿ ಸಮಾಜದ ಮುಖಂಡರಾದ ಸತೀಶ್ ಎಚ್‌.ಹೂಲಿ ದಲಿತ ಯುವ ಸೇನಾ ಸಮಿತಿಯ ಅಧ್ಯಕ್ಷರಾದ ವಿಜಯ್ ಎಸ್‌. ಮುಳಗುಂದ ಅಶೋಕ ಮಂದಾಲಿ  ಶಾಂತಪ್ಪ ಹೂಗಾರ ಪಿ.ಎಸ್‌.ಐ., ಬೆಟಗೇರಿ ಬಡಾವಣೆ ಪೊಲೀಸ್ ಠಾಣೆ  ಮಾರುತಿ ಜೋಗದಂಡೇಕರ ಪ್ರೋ ಮಲ್ಲೇಶ ಹೊಸೂರು ಬಸವರಾಜ ಕಡೇಮನಿ ಎಸ್ ಎನ್ ಬಳ್ಳಾರಿ ಡೇವಿಡ್ ಗೋವಿನಕೊಪ್ಪ ಉಮೇಶ ಚಲವಾದಿ ಮಲ್ಲಿಕಾರ್ಜುನ ಎಫ್ ಕಲಕಂಬಿ ಬಸವರಾಜ ಬಾದಾಮಿ ಸಂತೋಷ ಕುಮಾರ ವಿ. ಕಲ್ಯಾಣ್  ಅಯ್ಯಪ್ಪ ನಾಯ್ಕರ ಮೌಲಾಸಾಬ ಗುಡಸಲಮನಿ ರಾಜೇಶ ಕಟ್ಟಿಮನಿ ಅಜಯಕುಮಾರ ಕಲಾಲ ಪ್ರಕಾಶ ಸಿ ಕೇಲೂರು ಬಿ.ಸಿ.ಹಿರೇಹಾಳ ಶಿದ್ದಪ್ಪ ಎನ್‌. ಲಿಂಗದಾಳ  ಶ್ರೀನಿವಾಸ್ ಹುಯಿಲಗೋಳ ಡಿ.ಟಿ.ವಾಲ್ಮೀಕಿ ಮಹೇಶ ಕುಚಬಾಳ ವೆಂಕಟೇಶಯ್ಯ ರಮೇಶ ಬಾಳಮ್ಮನವರ ಉಮೇಶ ಚಲವಾದಿ ವಸಂತ ಕಲಕಂಬಿ ಶ್ರೀನಿವಾಸ ಹುಯಿಲಗೋಳ  ಮನೋಹರ ಸಿಂಗಾಡಿ ಲಕ್ಷ್ಮಣ ಸಣ್ಣಕ್ಕಿ ಬಸವರಾಜ ಸತ್ಯಮ್ಮನವರ ಅರುಣ ಅಸೂಟಿ ಉಪಸ್ಥಿತರಿದ್ದರು ಇದ್ದರು ಕಾರ್ಯಕ್ರಮವನ್ನು ಮಂಜುನಾಥ ಲಿಂಗದಾಳ ನಿರೂಪಿಸಿದರು ಸ್ವಾಗತವನ್ನು ಡೇನಿಯಲ್ ಗೋವಿಕೊಪ್ಪ ಕೋರಿದರು ಕೋನೆಯಲ್ಲಿ ಅಜಯಕುಮಾರ ಲಿಂಗದಾಳ ವಂದಿಸಿದರು