ರಾಜ್ಯ ಸರ್ಕಾರ ಜನಪರ ಕಾಳಜಿಗೆ ಕೈ ಗನ್ನಡಿಯಾಗಿದೆ: ವೆಂಕಟೇಶ ಹೆಗಡೆ
State government has taken steps to address public concerns: Venkatesh Hegde
ರಾಜ್ಯ ಸರ್ಕಾರ ಜನಪರ ಕಾಳಜಿಗೆ ಕೈ ಗನ್ನಡಿಯಾಗಿದೆ: ವೆಂಕಟೇಶ ಹೆಗಡೆ
ಬಳ್ಳಾರಿ 30: ನಗರದಲ್ಲಿರಸಗೊಬ್ಬರ ಪೂರೈಕೆ, ಉತ್ಪಾದನೆಯ ಹೊಣೆಕೇಂದ್ರ ಸರ್ಕಾರದ್ದು ಎಂಬ ಕನಿಷ್ಠ ಜ್ಞಾನ ನಮ್ಮ ಮಾಜಿ ಸಚಿವ ಶ್ರೀರಾಮುಲು ಅವರಿಗೆಇದ್ದಂತೆಕಾಣುತ್ತಿಲ್ಲ.ಬಿಜೆಪಿ ನಾಯಕರುಯಾವಾಗಲೂತಮ್ಮಜವಾಬ್ದಾರಿ ವಿಚಾರ ಬಂದಾಗಕಾಂಗ್ರೆಸ್‌ಇಲ್ಲವೇರಾಜ್ಯ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಬಿಜೆಪಿ ನಾಯಕರು ನಿರಂತರವಾಗಿ ಮಾಡಿಕೊಂಡು ಬಂದಿದ್ದಾರೆ.ಇದೀಗರಸಗೊಬ್ಬರ ವಿಷಯದಲ್ಲಿಇಂತಹುದ್ದೇರಾಜಕಾರಣ ಮಾಡುತ್ತಿದೆ. ಇವರಿಗೆ ಈ ಹಿಂದೆತಮ್ಮದೇ ಸರ್ಕಾರಇದ್ದಾಗ ಹಾವೇರಿಯಲ್ಲಿಗೊಬ್ಬರ ಕೇಳಿದ ರೈತರ ಮೇಲೆ ಗೋಲಿಬಾರ್ ನಡೆಸಿದ ಮಹನೀಯರುಇಂದುರೈತರ ಹೆಸರಲ್ಲಿರಾಜಕಾರಣ ಮಾಡುತ್ತಿದ್ದಾರೆ.ರಾಸಾಯನಿಕಗೊಬ್ಬರ ಪೂರೈಕೆ ಮಾಡುವ ಕೆಲಸ ಕೇಂದ್ರ ಸರ್ಕಾರದ್ದು.ಕೇಂದ್ರ ಸರ್ಕಾರಕ್ಕೆದೇಶದಲ್ಲಿರುವ ಕೃಷಿ ವಿಷಯ ತಿಳಿದೆ ಇಲ್ಲ. ಎಷ್ಟು ಗೊಬ್ಬರ, ಬೀಜ ಬೇಕು ಎಂಬುದರ ಬಗ್ಗೆ ಪೂರ್ಣಜ್ಞಾನಇಲ್ಲ. ಇದೆಕಾರಣಕ್ಕೆಇಂದುಗೊಬ್ಬರಕೊರತೆಎದುರಾಗಿದೆ.ಇನ್ನುಯೂರಿಯ ಬದಲು ನ್ಯಾನೋಯೂರಿಯ ಬಳಸಿ ಎಂದುಕೇಂದ್ರ ಸರ್ಕಾರ ಬಲವಂತವಾಗಿ ನ್ಯಾನೋಯೂರಿಯ ಬಳಕೆಗೆ ಒತ್ತುನೀಡಲು ಇಲಾಖೆ ಅಧಿಕಾರಿ, ರೈತರಿಗೆಒತ್ತಾಯ ಮಾಡುತ್ತಿದೆ.
ಆದರೆ ಬಳಕೆ ಮಾಡುವುದು ಹೇಗೆ ಎಂದುಎಂಬುದನ್ನು ತಿಳಿಹೇಳುವ ಕನಿಷ್ಠ ಜ್ಞಾನ ಹೊಂದಿಲ್ಲ.ಅನ್ಯ ವಿಷಗಳಿಗೆ ಸಿಕ್ಕಾಪಟ್ಟೆ ಜಾಹಿರಾತು ನೀಡಿ ಪ್ರಚಾರ ಮಾಡುವಕೇಂದ್ರ ಸರ್ಕಾರ ಸಬ್ಸಿಡಿ ಉಳಿಸಲು ನ್ಯಾನೋಗೊಬ್ಬರತಂದ ವಿಷಯವನ್ನುರೈತರಿಗೆ ತಿಳಿಸಲು ಒಂದೇಒಂದು ಸಣ್ಣಜಾಹಿರಾತು ನೀಡಿಲ್ಲ. ಇದರ ಮಧ್ಯೆ ನಮ್ಮ ಸರ್ಕಾರ ಕೃಷಿ ಇಲಾಖೆ ಮೂಲಕ ರೈತರಲ್ಲಿಅರಿವು ಮೂಡಿಸುತ್ತಾ ಬಂದಿದೆ. ಆದರೂ ನ್ಯಾನೋ ಬಳಕೆಗೆ ಇನ್ನುರೈತರುಜಾಗರೂಕರಾಗಿಲ್ಲ. ಇದರ ಬಗ್ಗೆ ರಾಮುಲುಅವರುತುಟಿ ಬಿಚ್ಚಲ್ಲಾ ಮತ್ತುಯಾವುದೋ ಮತ್ತೊಂದುಕಾರ್ೊರೇಟ್ ಕಂಪನಿಗೆ ಒಳಿತು ಮಾಡಲುಅವರ ಮೂಲಕ ನ್ಯಾನೋಗೊಬ್ಬರ ಉತ್ಪಾದಿಸಿ ಅದನ್ನು ಮಾರಾಟ ಮಾಡಿ, ಲಾಭ ಗಳಿಸುವ ಹುನ್ನಾರದಿಂದ ಈ ರೀತಿರೈತರಿಗೆ ವಂಚನೆ ಮಾಡುವ ಕೆಲಸವನ್ನುತಮ್ಮಕೇಂದ್ರ ಸರ್ಕಾರ ಮಾಡುತ್ತಿದೆಎಂಬುದನ್ನುರಾಮುಲುಅವರು ತಿಳಿಯಬೇಕು.
ರಾಜ್ಯ ಸರ್ಕಾರಎಂತಹ ಆಡಳಿತ ನೀಡುತ್ತಿದೆಎಂಬುದು ನಿಮಗೆ ಅದಾಗಲೇಅರಿವಿಗೆ ಬಂದಿದೆ. ಕೇಂದ್ರದ ಹಣಕಾಸು ಇಲಾಖೆ ಹೇಳಿದ ಹಾಗೆ ತಲಾಆದಾಯದ ವಿಷಯದಲ್ಲಿಇಡೀದೇಶಕ್ಕೆ ನಂ.1 ಆಗಿದೆ.ಇದುಜನಪರ ಕಾಳಜಿಗೆ ಹಿಡಿದಕನ್ನಡಿಆಗಿದೆ.ಇಂಥ ಆಡಳಿತದ ಬಗ್ಗೆ ಮಾತನಾಡುವುದು ಎಷ್ಟು ಸಮಂಜಸಎಂಬುದನ್ನು ಶ್ರೀ ರಾಮುಲು ಅರಿಯಬೇಕು.ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿಒಟ್ಟು 2531 ರೈತರಆತ್ಮಹತ್ಯೆ ಮಾಡಿಕೊಂಡಿದ್ದರು.ಈ ಪೈಕಿ 167 ಮಂದಿಯನ್ನು ಹೊರತುಪಡಿಸಿ ಇನ್ನೆಲ್ಲರೈತ ಕುಟುಂಬಗಳಿಗೂ ಪರಿಹಾರ ಸಿಕ್ಕಿದೆ ಎಂದು ಸರ್ಕಾರವೇ ವಿಧಾನಸಭೆಯಲ್ಲಿ ಹೇಳಿದೆ.ಇನ್ನು ಈ ವರ್ಷ (ಮಾರ್ಚ್ ವರೆಗೆ) ರಾಜ್ಯದಲ್ಲಿ 527 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದರು.ಇದರಲ್ಲಿ 28 ಮಂದಿಯನ್ನು ಹೊರತುಪಡಿಸಿ ಇನ್ನೆಲ್ಲರಿಗೂ ಪರಿಹಾರ ಸಿಕ್ಕಿದೆ.ಆದರೆ ಮೃತರೈತರಿಗೆ ಪರಿಹಾರವೇ ಸಿಗುತ್ತಿಲ್ಲ ಎಂಬ ರಾಮುಲುಆರೋಪಕ್ಕೆಆಧಾರವೇಇಲ್ಲ. ಸುಳ್ಳು ಹೇಳುವುದಕ್ಕೂ ಒಂದು ಮಿತಿಬೇಡವೇ?ಎಂದುವೆಂಕಟೇಶ್ ಹೆಗಡೆ, ವಕೀಲರು ಕೆಪಿಸಿಸಿ ಮಾಧ್ಯಮ ವಕ್ತಾರರು ಹಾಗೂ ಕೆಪಿಸಿಸಿ ರಾಜ್ಯ ಸಂಯೋಜಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 