ರೈತ ಸಂಘವನ್ನು ಮತ್ತೆ ಬಲಿಷ್ಠವಾಗಿ ಕಟ್ಟಲು ಎಲ್ಲರೂ ಕೈಜೋಡಿಸಬೇಕೆಂದು: ರಾಜ್ಯಾಧ್ಯಕ್ಷ ಪಚ್ಚೆ ನಂಜುಂಡಸ್ವಾಮಿ ಹೇಳಿದರು
ರಾಯಬಾಗ: ಪ್ರೊ.ನಂಜುಂಡಸ್ವಾಮಿ ಅವರ ವಿಚಾರಧಾರೆಯನ್ನು ಇಂದಿನ ಯುವ ರೈತರಿಗೆ ತಿಳಿಸಿ ರೈತ ಸಂಘವನ್ನು ಮತ್ತೆ ಬಲಿಷ್ಠವಾಗಿ ಕಟ್ಟಲು ಎಲ್ಲರೂ ಕೈಜೋಡಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಪಚ್ಚೆ ನಂಜುಂಡಸ್ವಾಮಿ ಹೇಳಿದರು. ಸೋಮವಾರ ಪಟ್ಟಣದ ರೈತ ಸಂಘದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪ್ರೊ.ನಂಜುಂಡಸ್ವಾಮಿ ಅವರ 21ನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರೈತರ ಶ್ರೇಯೋಭಿವೃದ್ಧಿಗಾಗಿ ಒಡೆದು ಹೋದ ಕರ್ನಾಟಕ ರಾಜ್ಯ ರೈತ ಸಂಘಗಳನ್ನು ಒಟ್ಟುಗೂಡಿಸಲು ಏಕೀಕರಣ ಮಾಡಲು ಪ್ರಯತ್ನ ಮಾಡಲಾಗುತ್ತಿದೆ. ಪ್ರೊ.ನಂಜುಂಡಸ್ವಾಮಿ ಅವರ ಕನಸು ನನಸು ಮಾಡಲು ಪ್ರೊ.ನಂಜುಂಡಸ್ವಾಮಿ ಅವರ ಜೊತೆ ಇದ್ದ ಹಿರಿಯರು ನಮಗೆಲ್ಲ ಮಾರ್ಗದರ್ಶನ ಮಾಡಬೇಕೆಂದರು. ತಾಲೂಕಾಧ್ಯಕ್ಷ ವಿಜಯ ಶ್ರೇಷ್ಠಿ, ರೈತ ಮುಖಂಡರಾದ ಚುನ್ನಪ್ಪ ಪೂಜಾರಿ, ಫಯಾಜ್, ಮಲ್ಲಪ್ಪ ಅಂಗಡಿ, ಮಾಯಗೌಡ ಪಾಟೀಲ, ದೀಲೀಪ ಸಮಾಜೆ, ಅಪ್ಪಾಸಾಬ ಮಾನೆ, ಮಹಾದೇವ ಪಾಟೀಲ, ಶ್ರೀಶೈಲ ಸಾಬಾನೆ, ನಿಂಗಪ್ಪ ಪೂಜೇರಿ, ಸುಲ್ತಾನ ಪೂಜಾರಿ, ಭೀಮಸೇನ ಪಿಸಾಳೆ ಹಾಗೂ ರೈತ ಸಂಘದ ಮುಖಂಡರು ಇದ್ದರು.ಫೋಟೊ: 03 ರಾಯಬಾಗ 1ಫೋಟೊ ಶೀರ್ಷಿಕೆ: ರಾಯಬಾಗ: ಪಟ್ಟಣದ ರೈತ ಕಚೇರಿಯಲ್ಲಿರುವ ಪ್ರೊ.ನಂಜುಂಡಸ್ವಾಮಿ ಅವರ ಮೂರ್ತಿಗೆ ಪುಷ್ಪ ನಮನ ಸಲ್ಲಿಸುತ್ತಿರುವ ಗಣ್ಯರು.