ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ 2026 ಉದ್ಘಾಟನೆ : ಕವಿತಾ.ಎಸ್.ಮನ್ನಿಕೇರಿ
State Government Employees District Level Sports Meet 2026 inaugurated by: Kavita.S.Mannikeri
ವಿಜಯನಗರ 09: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ 2026 ಉದ್ಘಾಟನೆಯನ್ನು ದಿ.09/02/2026 ರಂದು ಬೆಳ್ಳಿಗ್ಗೆ : 11:00 ಗಂಟೆಗೆ ಮಾನ್ಯ ವಿಜಯನಗರ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಶ್ರೀಮತಿ ಕವಿತಾ.ಎಸ್.ಮನ್ನಿಕೇರಿ ಇವರು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು, ನಂತರ ಮಾತನಾಡಿದ ಮಾನ್ಯರು ಸರ್ಕಾರದ ಯೋಜನೆಗಳನ್ನು ಸಮರ್ಕವಾಗಿ ಅನುಷ್ಟಾಗೊಳಿಸುವಲ್ಲಿ ಸರ್ಕಾರಿ ನೌಕರರ ಪಾತ್ರ ಅತ್ಯಂತ ಮಹತ್ವವಾಗಿದ್ದು, ಕಾರ್ಯಭಾರದ ಒತ್ತಡಗಳ ನಿವಾರಣೆಗೆ, ಆರೋಗ್ಯವೃದ್ದಿಗೆ ಹಾಗೂ ನೌಕರರ ಸುಪ್ತ ಪ್ರತಿಭೆಗಳ ಅನಾವರಣಕ್ಕೆ, ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ದೆಗಳು ಸಹಕಾರಿಯಾಗಲಿವೆ, ಈ ಎರಡು ದಿನಗಳ ಕ್ರೀಡಾಕೂಟದಲ್ಲಿ ನೌಕರರು ಸಕ್ರಿಯವಾಗಿ ಪಾಲ್ಗೊಂಡು ಕ್ರೀಡಾಕೂಟ ಯಶಸ್ವಿಗೊಳಿಸಲು ಕರೆ ನೀಡಿದರು.
ವಿಜಯನಗರ ಜಿಲ್ಲಾ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನಗೌಡ ಇವರು ಪ್ರಾಸ್ತಾವಿಕವಾಗಿ ಮಾತನಾಡಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ದೇಶದಲ್ಲಿಯೇ ಮಾದರಿಯಾದ ನೌಕರರ ಸಂಘವಾಗಿದ್ದು, ನೌಕರರ ಬೇಡಿಕೆಗಳ ಈಡೇರಿಕೆಗಾಗಿ ಶ್ರಮಿಸುತ್ತಿದೆ. ಜಿಲ್ಲೆಯ ನೌಕರರ ಕಾರ್ಯ ಒತ್ತಡದ ನಿವಾರಣೆಗೆ ಹಾಗೂ ಆತ್ಮವಿಶ್ವಾಸವೃದ್ದಿಗೆ ಎರಡು ದಿನಗಳ ಕಾಲ ಕ್ರೀಡಾ ಕೂಟಗಳನ್ನ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದು, ಸದರಿ ಕ್ರೀಡಾ ಕೂಟದಲ್ಲಿ ನೌಕರರು, ಸೋಲು, ಗೆಲವು ಎಂದು ಭಾವಿಸದೇ, ಪಾಲ್ಗೊಳ್ಳುವುದೇ ಮುಖ್ಯ ಉದ್ದೇಶ ಎಂದು ಸಂದೇಶ ನೀಡಿರುತ್ತಾರೆ.
ಈ ಕಾರ್ಯಕ್ರಮದಲ್ಲಿ ಯುವಜನ ಸೇವೆ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ಗ್ರೇಸಿ ರವರು, ಹಾಗೂ ಜಿಲ್ಲಾ ದೈಹಿಕ ಶಿಕ್ಷಣ ಪರೀವೀಕ್ಷಕರಾದ ಶ್ರೀ ಶ್ರೀಕಾಂತ ವಾಲ್ಮೀಕಿ, ಜಿಲ್ಲಾ ಖಜಾಂಚಿಗಳಾದ ಶ್ರೀ ಕೆ.ಮಲ್ಲೇಶಪ್ಪ, ರಾಜ್ಯ ಪರಿಷತ್ ಸದಸ್ಯರಾದ ಶ್ರೀ ರಾಘವೇಂದ್ರ ಹೆಗಡಿಯಾಳ್, ಜಿಲ್ಲಾ ಕಾರ್ಯದರ್ಶಿಗಳಾದ ಶ್ರೀ ಟಿ.ಪಂಪಣ್ಣ, ಜಿಲ್ಲಾ ಗೌರವಾಧ್ಯಕ್ಷರಾದ ಶ್ರೀ ಹೆಚ್.ರಾಜೀವ್, ಜಿಲ್ಲಾ ಕಾರ್ಯಾಧ್ಯಕ್ಷರಾದ ಶ್ರೀ ಕಡ್ಲಿ ವೀರಭದ್ರೇಶ, ರಾಜ್ಯ ಪದಾಧಿಕಾರಿಗಳಾದ ಶ್ರೀ ಎಂ.ಪಿ.ಎಂ.ಅಶೋಕ, ಡಾಽಽ ಮುನಿವಾಸುದೇವರೆಡ್ಡಿ, ಶ್ರೀ ಕೆ.ಬಸವರಾಜ, ಜಿಲ್ಲೆಯ ಎಲ್ಲಾ ತಾಲೂಕುಗಳ ಅಧ್ಯಕ್ಷರುಗಳಾದ ಶ್ರೀ.ಎಂ.ಪಿ.ಎಂ ಮಂಜುನಾಥ, ಶ್ರೀ ಎ.ಕೋಟ್ರಗೌಡ , ಶ್ರೀ ಎಸ್.ವೆಂಕಟೇಶ, ಶ್ರೀ ಎನ್.ಜೆ.ಮನೋಹರ, ಶ್ರೀ ಯೋಗೀಶ್ವರ ದಿನ್ನಿ ಸೇರಿದಂತೆ ನೌಕರರ ಸಂಘ ಹಾಗೂ ವಿವಿಧ ವೃಂದ ಸಂಘಗಳಎಲ್ಲಾ ಪಧಿಕಾರಿಗಳು ಹಾಗೂ ನೌಕಕರು ಪಾಲ್ಗೊಂಡಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 