ಚುಟುಕು ಸಾಹಿತ್ಯ ಪರಿಷತ್ ಸಮ್ಮೇಳನಾಧ್ಯಕ್ಷರಾಗಿ ಶ್ರೀನಿವಾಸ ಚಿತ್ರಗಾರ ಆಯ್ಕೆ

ಚುಟುಕು ಸಾಹಿತ್ಯ ಪರಿಷತ್ ಸಮ್ಮೇಳನಾಧ್ಯಕ್ಷರಾಗಿ ಶ್ರೀನಿವಾಸ ಚಿತ್ರಗಾರ ಆಯ್ಕೆ  Srinivas Chitgara elected as president of Chutuku Sahitya Parishad conference

ಲೋಕದರ್ಶನ ವರದಿ 

ಕೊಪ್ಪಳ  07: ಕೊಪ್ಪಳ ತಾಲೂಕ ಎರಡನೇ ಚುಟುಕು ಸಾಹಿತ್ಯ ಸಮ್ಮೇಳನ ಸವಾ9ಧ್ಯಕ್ಷರಾಗಿ ಶಿಕ್ಷಕ ಹಾಗೂ ಕವಿ ಶ್ರೀನಿವಾಸ ಚಿತ್ರಗಾರ ಅವರನ್ನು ಆಯ್ಕೆ ಮಾಡಲಾಗಿದೆ .ತಾಲೂಕಿನ ಕಿನ್ನಾಳ ಗ್ರಾಮದ ಇವರು  ಯತ್ನಟ್ಟಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ,   58 ರ ಹರೆಯದ ಹಿರಿಯ ಕವಿ 15ಕ್ಕೂ ಅಧಿಕ ಮಕ್ಕಳ ಸಾಹಿತ್ಯ ಸೇರಿದಂತೆ ಇತರೆ  ಪುಸ್ತಕಗಳನ್ನು ಪ್ರಕಟಿಸಿದ್ದಾರೆ.   ಜೊತೆಗೆ ನಾಡಿನ ವಿವಿಧೆಡೆ  ನೂರಾರು ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದು, ಹಲವಾರು  ಕಾರ್ಯಕ್ರಮಗಳ ಸಭೆ ಸಮಾರಂಭಗಳ ಉದ್ಘಾಟಕರಾಗಿ, ಅಧ್ಯಕ್ಷರಾಗಿ ಉಪನ್ಯಾಸಕಾರರಾಗಿ ಉಪನ್ಯಾಸ ನೀಡಿದ್ದಾರೆ. 

ಸ್ಥಳೀಯ ಸಾಹಿತ್ಯ ಸಮ್ಮೇಳನಗಳ ಕೆಲವು ಸ್ಮರಣ ಸಂಚಿಕೆಗಳಲ್ಲಿ ಸಂಪಾದಕ ಮಂಡಳಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.ಸಮ್ಮೇಳನವು ಬರುವ ಮೇ  ಕೊನೆ ವಾರದಲ್ಲಿ  ಕೊಪ್ಪಳ ನಗರ  ಅಥವಾ ಗ್ರಾಮೀಣ ಭಾಗಗಳಲ್ಲಿ ಅಚ್ಚುಕಟ್ಟಾಗಿ ನಡೆಸಲು ಸಭೆಯಲ್ಲಿ ನಿಧ9ರಿಸಲಾಯಿತು.ಸಭೆಯಲ್ಲಿ ಪರಿಷತ್ ಜಿಲ್ಲಾಧ್ಯಕ್ಷ ರುದ್ರ​‍್ಪ ಆರ್ ಭಂಡಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ. ಮಹಾಂತೇಶ್ ನೆಲಾಗಣಿ,   ತಾಲುಕು ಅಧ್ಯಕ್ಷ  ಮೈಲಾರ​‍್ಪ ಉಂಕೀ , ಪದಾಧಿಕಾರಿಗಳಾದ ಶಿವಪ್ರಸಾದ ಹಾದಿಮನಿ, ಶಿವಪ್ಪ ಕೊಗಳಿ, ಬಸವಶ್ರೀ ಸೋಮನಾಳ ಇತರರೂ ಹಾಜರಿದ್ದರು.