ಶ್ರೀ ವಿದ್ಯಾನಿಕೇತನ ಇಂಟರ್ ನ್ಯಾಷನಲ್ ಸ್ಕೂಲ್‌ಕರ್ನಾಟಕ ಕೌಸ್ತುಭ ಹಿ ಉತ್ಕೃಷ್ಟ ಭಾರತ ಎಂಬ ಶೀರ್ಷಿಕೆಯ ಅಡಿಯಲ್ಲಿ ಶಾಲಾ ವಾರ್ಷಿಕೋತ್ಸವ
Sri Vidyaniketan International School Karnataka School Anniversary under the title Kaustubha Hi Utk
ಗಂಗಾವತಿ 06: ಗಂಗಾವತಿ ತಾಲೂಕಿನ ವಡ್ಡರಹಟ್ಟಿಯ ಶ್ರೀ ವಿದ್ಯಾನಿಕೇತನ ಇಂಟರ್ ನ್ಯಾಷನಲ್ ಶಾಲೆಯಲ್ಲಿ 2025-26ನೆಯ ಸಾಲಿನ ಪೂರ್ವ ಪ್ರಾಥಮಿಕದಿಂದ 8ನೆಯ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು “ಕರ್ನಾಟಕ ಕೌಸ್ತುಭ-ಉತ್ಕೃಷ್ಟ ಭಾರತ” ಎಂಬ ಶೀರ್ಷಿಕೆಯ ಅಡಿಯಲ್ಲಿ ಆಯೋಜಿಸಲಾಗಿತ್ತು. ಭಾರತದ ಶ್ರೀಮಂತ ಸಂಸ್ಕೃತಿ-ವೈವಿಧ್ಯತೆಯನ್ನು ಪ್ರತಿಬಿಂಬಿಸುವ ಹಾಗೂ ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಪ್ರದರ್ಶಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಂದ ವಿವಿಧ ರೀತಿಯ ನೃತ್ಯ-ರೂಪಕ, ನಾಟಕ, ಸಂಗೀತ ಹಾಗೂ ಸಾಹಸವನ್ನು ಪ್ರಸ್ತುತ ಪಡಿಸುವ ಕಾರ್ಯಕ್ರಮಗಳು ಅತ್ಯಂತ ಅಮೋಘವಾಗಿ ಜರುಗಿದವು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶ್ರೀ ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಶ್ರೀ ನೆಕ್ಕಂಟಿ ಸೂರಿಬಾಬು ಅವರು, ಹೆತ್ತ ತಾಯಿ ಹೊತ್ತ ನಾಡು ಅತ್ಯಂತ ಶ್ರೇಷ್ಠ ಎಂದು ತಿಳಿಸಿ, ಶ್ರೀ ವಿದ್ಯಾನಿಕೇತನ ಇಂಟರ್ ನ್ಯಾಷನಲ್ ಶಾಲೆಯು ಈ ಗ್ರಾಮದಲ್ಲಿ ಪ್ರಾರಂಭಗೊಳ್ಳಲು ಮೊದಲ ದಿನದಿಂದಲೂ ಸಹಕರಿಸಿದ ಗ್ರಾಮದ ಎಲ್ಲ ಗುರು-ಹಿರಿಯರು ಮತ್ತು ಮುಖಂಡರಿಗೆ ಕೃತಜ್ಞತೆಯನ್ನು ತಿಳಿಸಿ, ಶ್ರೀ ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯ ಮೇಲೆ ಅಪಾರ ಭರವಸೆ ಇಟ್ಟಿರುವ ಎಲ್ಲಾ ಪಾಲಕರಿಗೆ ಹೃತ್ಪೂರ್ವಕವಾದ ಧನ್ಯವಾದಗಳನ್ನು ಸಲ್ಲಿಸಿದರು. ಸಂಸ್ಥೆಯು ನರ್ಸರಿಯಿಂದ ನೌಕರಿಯವರೆಗೆ ಎಂಬ ಧ್ಯೇಯೋದ್ದೇಶವನ್ನು ಈಡೇರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದ್ದು, ನಮ್ಮ ಈ ಗ್ರಾಮವು ಈಗಾಗಲೇ ಕೃಷಿ, ವ್ಯಾಪಾರ, ವಾಣಿಜ್ಯ ಕ್ಷೇತ್ರಗಳಲ್ಲಿ ಮುಂದುವರೆದಿದ್ದು, ಮುಂಬರುವ ದಿನಗಳಲ್ಲಿ ಶೈಕ್ಷಣಿಕ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿಯೂ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳವಣಿಗೆ ಸಾಧಿಸುವ ನಿಟ್ಟಿನಲ್ಲಿ ಈ ಶಿಕ್ಷಣ ಸಂಸ್ಥೆಯನ್ನು ಆರಂಭಿಸಲಾಗಿದ್ದು, ಸಿಡ್ಲಿಂಗ್ ಲ್ಯಾಬ್ಸ್ ಎಂಬ ಸಾಫ್ಟವೇರ್ ಕಂಪನಿಯ ಶಾಖೆಯನ್ನು ನಮ್ಮ ಈ ಗ್ರಾಮದಲ್ಲಿ ಪ್ರಾರಂಭಿಸುವ ಮೂಲಕ ಮುಂದುವರೆದ ನಗರಗಳಿಗೆ ಸರಿಸಮಾನವಾದ ಬೆಳವಣಿಗೆಯನ್ನು ಸಾಧಿಸಲಾಗುವುದು ಎಂದು ತಿಳಿಸಿದರು.
ತದನಂತರ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ. ಅರ್ಚನ ಅವರು ಮಾತನಾಡಿ ಮಕ್ಕಳು ಯಶಸ್ಸನ್ನು ಗಳಿಸಲು ಸದಾ ಪ್ರಯತ್ನಿಸಬೇಕು, ಪಾಲಕರು ತಮ್ಮ ಮಕ್ಕಳನ್ನು ಬೇರೆಯವರೊಂದಿಗೆ ಹೋಲಿಕೆ ಮಾಡದೇ ಮಕ್ಕಳಲ್ಲಿರುವ ಸೃಜನಶೀಲತೆಯನ್ನು ಪ್ರೋತ್ಸಾಹಿಸಬೇಕೆಂದು ಕಿವಿ ಮಾತನ್ನು ಹೇಳಿದರು. ತದನಂತರ ಮಾಜಿ ಸಚಿವರಾದ ಶ್ರೀ ಮಲ್ಲಿಕಾರ್ಜುನ ನಾಗಪ್ಪ ಅವರು ಮಾತನಾಡಿ ಶ್ರೀ ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯು ಈ ಭಾಗದ ಶೈಕ್ಷಣಿಕ ಬೆಳವಣಿಗೆಗೆ ನೀಡುತ್ತಿರುವ ಕೊಡುಗೆಯನ್ನು ಸ್ಮರಿಸಿದರು. ಅದೇ ರೀತಿ ಮಾಜಿ ಸಂಸದರಾದ ಶ್ರೀ ಶಿವರಾಮೇಗೌಡ ಅವರು ಮಾತನಾಡಿ ಶ್ರೀ ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯು ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಕ್ಷೇತ್ರಕ್ಕೆ ನೀಡಿದ ಸೇವೆಯ ಕುರಿತು ಮಾತನಾಡಿದರು.ಈ ಸಂದರ್ಭದಲ್ಲಿ ಶ್ರೀ ವಿದ್ಯಾನಿಕೇತನ ಪಬ್ಲಿಕ್ ಶಾಲೆಯ ಉಪಾಧ್ಯಕ್ಷರಾದ ಶ್ರೀ ನೆಕ್ಕಂಟಿ ಆದರ್ಶ ಅವರು ಪ್ರಾಸ್ತಾವಿಕವಾಗಿ ಮಾತಾನಾಡಿದರು.
ಈ ಕಾರ್ಯಕ್ರಮದಲ್ಲಿ ಖ್ಯಾತ ವೈದ್ಯರಾದ ಡಾ. ಅಮರೇಶ, ಹಿರಿಯ ರೈತ ಮುಖಂಡರಾದ ಶ್ರೀ ಗಡ್ಡಿ ಮುದುಕಪ್ಪ, ಶ್ರೀ ಬುಡ್ಡಪ್ಪ ನಾಯಕ್, ವಾಣಿಜ್ಯೋದ್ಯಮಿಗಳಾದ ಶ್ರೀ ಡಿ. ವೆಂಕಟಪತಿರಾಜು, ಶ್ರೀ ಸುರೇಶ ಸಿಂಗನಾಳ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಸೈಯದ್ ಇಲಿಯಾಸ್ ಖಾದ್ರಿ, ವಕೀಲರಾದ ಶ್ರೀ ಹನುಮನಗೌಡ ನಾಯಕ್, ಶ್ರೀ ತಿಮ್ಮಣ್ಣ ನಾಯಕ್, ಶಾಲೆಯ ಆಡಳಿತ ನಿರ್ದೇಶಕರಾದ ಶ್ರೀ ಹೆಚ್.ಕೆ ಚಂದ್ರಮೋಹನ್, ಮುಖಂಡರಾದ ಶ್ರೀ ಕಾಟಪ್ಪ ನಾಯಕ್, ಶ್ರೀ ಸಂಗಪ್ಪ, ನಗರಸಭಾ ಸದಸ್ಯರಾದ ಶ್ರೀ ಎಫ್. ರಾಘವೇಂದ್ರ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಡಿ. ಸುಬ್ಬರಾಜು, ಶ್ರೀ ನರೇಶ್. ವೈ, ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಸುಭದ್ರಾದೇವಿ, ಪಾಲಕರು, ಶಾಲೆಯ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 