ಬಳ್ಳಾರಿ ಬಲಿಜ ಸಂಘದಿಂದ ಶ್ರೀ ಕೃಷ್ಣದೇವರಾಯ ಜಯಂತಿ ಆಚರಣೆ - ಸಾಧಕರಿಗೆ ಸನ್ಮಾನ
Sri Krishnadevaraya Jayanti celebrated by Bellary Balija Sangha - felicitated the ascetics
ಬಳ್ಳಾರಿ 17: ಬಳ್ಳಾರಿ ಜಿಲ್ಲಾ ಬಲಿಜ ಸಂಘದ ವತಿಯಿಂದ ವಿಜಯನಗರ ಸಾಮ್ರಾಜ್ಯದ ಶ್ರೇಷ್ಠ ಚಕ್ರವರ್ತಿ ಶ್ರೀ ಕೃಷ್ಣದೇವರಾಯರ ಜಯಂತಿಯನ್ನು ಅತ್ಯಂತ ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಮಾಜದ ಪ್ರತಿಭೆಗಳನ್ನು ಗುರುತಿಸಿ ಗೌರವಿಸಲಾಯಿತು. ಬಳ್ಳಾರಿ ಜಿಲ್ಲಾ ಬಲಿಜ ಸಂಘದ ಅಧ್ಯಕ್ಷರಾದ ಶ್ರೀ ರಮೇಶ್ ಬುಜ್ಜಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಶ್ರೀ ಕೃಷ್ಣದೇವರಾಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಸಾಧಕರಿಗೆ ಗೌರವ ಸಮರೆ್ಣ: ವೇದಿಕೆಯಲ್ಲಿ ಸಮಾಜದ ಇಬ್ಬರು ಪ್ರಮುಖ ಸಾಧಕರನ್ನು ಸನ್ಮಾನಿಸಲಾಯಿತು: ಕುಮಾರಿ ತನುಜಾ ಶ್ರೀ: ಕೂಚಿಪುಡಿ ನೃತ್ಯದಲ್ಲಿ ವಿಶ್ವಮಟ್ಟದ ಸಾಧನೆ ಮಾಡಿ, 'ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್'ನಲ್ಲಿ ಸ್ಥಾನ ಪಡೆದ ಕುಮಾರಿ ತನುಜಾ ಶ್ರೀ ಅವರನ್ನು ಸಂಘದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು. ಶ್ರೀ ಮುನಿಸ್ವಾಮಿ: ಸಮಾಜ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡು, ಅನೇಕ ಸಾಮೂಹಿಕ ವಿವಾಹಗಳನ್ನು ಆಯೋಜಿಸಿದ ಸೇವೆಯನ್ನು ಗುರುತಿಸಿ ಲಭಿಸಿದ 'ಡಾಕ್ಟರೇಟ್' ಗೌರವ ಹಾಗೂ 'ಕರ್ನಾಟಕ ರಾಜ್ಯ ಪ್ರಶಸ್ತಿ' ವಿಜೇತರಾದ ಶ್ರೀ ಮುನಿಸ್ವಾಮಿ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅಧ್ಯಕ್ಷರಾದ ಶ್ರೀ ರಮೇಶ್ ಬುಜ್ಜಿ ಅವರು, "ಶ್ರೀ ಕೃಷ್ಣದೇವರಾಯರು ಕೇವಲ ಒಬ್ಬ ಮಹಾನ್ ರಾಜನಲ್ಲ, ಅವರು ಸಾಹಿತ್ಯ, ಕಲೆ ಮತ್ತು ಧರ್ಮದ ಪರಮ ರಕ್ಷಕರಾಗಿದ್ದರು. ಅವರ ಆಡಳಿತ ಅವಧಿಯು ವಿಜಯನಗರ ಸಾಮ್ರಾಜ್ಯದ ಸುವರ್ಣ ಯುಗವಾಗಿತ್ತು. ಅವರ ಧೈರ್ಯ, ದೂರದೃಷ್ಟಿ ಮತ್ತು ಸಮಾನತೆಯ ಚಿಂತನೆಗಳು ಇಂದಿನ ಪೀಳಿಗೆಗೆ ದಾರೀದೀಪವಾಗಿವೆ," ಎಂದು ತಿಳಿಸಿದರು. ಈ ಸಂಭ್ರಮದ ಸಮಾರಂಭದಲ್ಲಿ ಸಮಾಜದ ಪ್ರಮುಖ ಮುಖಂಡರಾದ ತಿಪ್ಪೇಸ್ವಾಮಿ, ಉದಯ ಭಾಸ್ಕರ, ನಾರಾಯಣಪ್ಪ ಕೃಷ್ಣ,ರಂಗಸ್ವಾಮಿ ಶ್ರೀನಿವಾಸುಲು ಕೋಲ ಸುತ್ಯನಾರಾಯಣ ರಂಗನಾಥ್, ವೀರೇಶ್, ಪ್ರಭಾಕರ್ ಕುಮಾರಸ್ವಾಮಿ, ವಿಜಕುಮಾರ, ಬಿ. ಸಿ. ರಾಜೇಶ್, ಹಾಜರಾಗಿದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 