ಶ್ರೀ ಕರೆಸಿದ್ಧೇಶ್ವರ ಏತ ನೀರಾವರಿ ಯೋಜನೆ ಮಂಜೂರು : ರೈತರಿಂದ ಉಡುಗೊರೆ

ಶ್ರೀ ಕರೆಸಿದ್ಧೇಶ್ವರ ಏತ ನೀರಾವರಿ ಯೋಜನೆ ಮಂಜೂರು : ರೈತರಿಂದ ಉಡುಗೊರೆ Sri Karesiddheshwara Lift Irrigation Project sanctioned: Gift from farmers


  ಹಾರೂಗೇರಿ  21: ಸಮೀಪದ ಅಲಖನೂರ ಗ್ರಮದ ಶ್ರೀ ಕರೆಸಿದ್ದೇಶ್ವರ ದೇವಸ್ಥಾನದ ಹತ್ತಿರ ಕುಡಚಿ ಮತಕ್ಷೇತ್ರಕ್ಕೆ ಏತ ನೀರಾವರಿಯನ್ನು ತಂದ ಶಾಸಕ ಮಹೇಂದ್ರ ತಮ್ಮಣ್ಣವರ ಅವರಿಗೆ ಅಲಖನೂರಿನ ರೈತರು ಸುಮಾರು 3ಲಕ್ಷರೂ. ಮೊತ್ತದ ರೈತ ಕಾಣಿಕೆಯಾಗಿ ಜೋಡೆತ್ತು ಮತ್ತು ಚಕ್ಕಡಿ ನೀಡಿ ಅಭಿನಂದಿಸಿದರು. 

  ರೈತ ಮುಖಂಡ ಕುಮಾರ ಯಲ್ಲಟ್ಟಿ ಮಾತನಾಡಿ ರೈತರ ಸಮಸ್ಯೆಗಳಿಗೆ ದನಿಯಾಗಿ, ಅನ್ನಕ್ಕೆ ಬೆನ್ನೆಲುಬಾಗಿ ನಿಂತು, ಈ ಭಾಗಕ್ಕೆ ಏತ ನೀರಾವರಿ ತಂದು, ರೈತರ ಬದುಕನ್ನು ಸಿಹಿಯಾಗಿಸಿದ ಶಾಸಕ ಮಹೇಂದ್ರ ತಮ್ಮಣ್ಣವರ ಕುಡಚಿ ಮತಕ್ಷೇತ್ರದ ಭಗೀರಥರಾಗಿದ್ದಾರೆಂದು ಹೇಳಿದರು. 

  ರೈತರ ಪ್ರೀತಿಯ ಕಾಣಿಕೆ ಸ್ವೀಕರಿಸಿ ಮಾತನಾಡಿದ ಶಾಸಕ ಮಹೇಂದ್ರ ತಮ್ಮಣ್ಣವರ ಹುಟ್ಟಿದಾಗಿನಿಂದ ನಾನೊಬ್ಬ ರೈತನಾಗಿ ಬೆಳೆದಿದ್ದೇನೆ. ರೈತನ ಭುಜದ ಮೇಲೆ ಕೇವಲ ನೇಗಿಲು ಮಾತ್ರವಲ್ಲ. ಹೊಟ್ಟೆ ತುಂಬಿಸುವ ಬಹುದೊಡ್ಡ ಜವಾಬ್ದಾರಿಯಿದೆ. ಮಣ್ಣಿನ ಮಕ್ಕಳಾದ ರೈತರ ಬೆವರಿಗೆ ಬೆಲೆ ಕಟ್ಟಲಾಗದು. ರೈತರ ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ಸೇವೆ ಮಾಡುತ್ತೇನೆಂದು ಹೇಳಿದರು. 

  ಗ್ರಾಪಂ ಅಧ್ಯಕ್ಷ ಸಂಕು ಹೊರಟ್ಟಿ, ಮಾಜಿ ಅಧ್ಯಕ್ಷ ಸದಾಶಿವ ಗಡ್ಡಿ, ಸದಸ್ಯರಾದ ಹಣಮಂತ ಸನದಿ, ಕರೆಪ್ಪ ಹಸರೆ, ಕರೆಪ್ಪ ಪೂಜೇರಿ, ಪತ್ತು ಕರಿಗಾರ, ಕಿರಣ ಗಡ್ಡಿ, ವಿಠ್ಠಲ ಪೂಜೇರಿ, ಶಿವಾನಂದ ಇಂಗಳಿ, ಕಲ್ಲಪ್ಪ ಚೌಗಲಾ, ಸಹಾದೇವ ಪೂಜೇರಿ, ನಾಗಪ್ಪ ಚೌಗಲಾ, ಶಂಕರ ಕಾಂಬಳೆ, ಶಂಕರ ಕರಿಗಾರ, ಸಚೀನ ಹಳಕಲ್, ಆನಂದಗೌಡ ಪಾಟೀಲ, ಪ್ರದೀಪ ಹಾಲ್ಗುಣಿ ಹಾಗೂ ಅಲಖನೂರ ಗ್ರಾಮದ ಗಣ್ಯರು, ರೈತರು ಉಪಸ್ಥಿತರಿದ್ದರು.