ವಿಧಾನಸಭಾ ಕ್ಷೇತ್ರದ ತಾಲೂಕು ಮಟ್ಟದ ಸಂಸದರ ಕ್ರೀಡಾ ಮಹೋತ್ಸವ
Sports festival for taluk level MPs of the assembly constituency
ಹಾವೇರಿ 16 : ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ರವಿವಾರ ಹಾವೇರಿ-ಗದಗ ಲೋಕಸಭಾ ಸಂಸದರಾದ ಬಸವರಾಜ ಬೊಮ್ಮಾಯಿಯವರು ಆಯೋಜಿಸಿದ್ದ ಹಾವೇರಿ ವಿಧಾನಸಭಾ ಕ್ಷೇತ್ರದ ತಾಲೂಕು ಮಟ್ಟದ ಸಂಸದರ ಕ್ರೀಡಾ ಮಹೋತ್ಸವದ ಹಗ್ಗ ಜಗ್ಗಾಟ ಸ್ಫರ್ಧೆಯಲ್ಲಿ ಲಕ್ಷ್ಮೀಪ್ರಭಾ ಎಸ್ ಹುಲ್ಲೂರು ನೇತೃತ್ವದ ತಂಡ ಪ್ರಥಮ ಸ್ಥಾನಗಳಿಸಿತು.ಹಗ್ಗ ಜಗ್ಗಾಟ ಸ್ಫರ್ಧೆಯ ವಿಜೇತ ತಂಡದಲ್ಲಿ ಲಕ್ಷ್ಮೀಪ್ರಭ ಎಸ್ ಹುಲ್ಲೂರು, ಪ್ರೇಮಾ ತಹಶೀಲ್ದಾರ್, ಸುಧಾ ಮಣ್ಣನ್ನವರ, ರೇಖಾ ಜಂಗಳಿ, ಸುನೀತಾ ಪಿ. ಗುಬ್ಬೇರ, ಸಿದ್ದಮ್ಮ ಪಾಟೀಲ, ಪೂಜಾ ವಾಲಿ, ಶೃತಿ ಪಂಪಣ್ಣನವರ, ಅನಸೂಯಾ ಕೊರಡೂರ, ಬಸಮ್ಮ, ರಹಮತಬಿ ಎನ್ ನೀಲಗಾರ ಇದ್ದರು.ಹಗ್ಗಜಗ್ಗಾಟ ಸ್ಪರ್ಧೆಯ ಪ್ರಥಮ ಸ್ಥಾನ ವಿಜೇತರಿಗೆ ಸಂಸದರಾದ ಬಸವರಾಜ ಎಸ್ ಬೊಮ್ಮಾಯಿ ಪಾರಿತೋಷಕ, ಪದಕ ಹಾಗೂ ಪ್ರಶಸ್ತಿ ಪತ್ರ ವಿತರಿಸಿ ಅಭಿನಂಧಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ನಿರ್ದೇಶಕಿ ಲತಾ ಬಿ.ಎಚ್, ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿಗಳಾದ ಎಲ್.ವೈ ಶಿರಕೋಳ, ಯುವ ಮುಖಂಡ ಭರತ್ ಬೊಮ್ಮಾಯಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 