ಕ್ರೀಡೆಯಿಂದ ಸವಾಂರ್ಗೀಣ ಬೆಳವಣಿಗೆ ಸಾಧ್ಯ: ಡಾ. ಮಗದುಮ
Sports can lead to individual development: Dr. Magaduma
ಮಾಂಜರಿ 18: ಕ್ರೀಡೆ ಎಂಬುದು ವಿದ್ಯಾರ್ಥಿ ಜೀವನದ ಒಂದು ಭಾಗ. ಕ್ರೀಡೆಯಲ್ಲಿ ಹೆಚ್ಚು ತೊಡಗಿಸಿಕೊಂಡ ವರಿಂದ ಸವಾಂರ್ಗೀಣ ಬೆಳವಣಿಗೆ ಸಾಧ್ಯವೆಂದು ಅಂಕಲಿಯ ಗೊಮ್ಮಟೇಶ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಡಾ. ಎನ್.ಎ ಮಗದುಮ ಅಭಿಪ್ರಾಯಪಟ್ಟರು. ಅವರು ಇಂದು ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿರುವ ಗೋಮಟೇಶ ಶಿಕ್ಷಣ ಸಂಸ್ಥೆಯ ನಸಿಂರ್ಗ್ ಮಹಾವಿದ್ಯಾಲಯ ಹಾಗೂ ಡಾ ಎನ್ ಎ ಮಗದುಮ್ ಆಯುರ್ವೇದಿಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸೌಶದ ಕೇಂದ್ರದ ವಿದ್ಯಾರ್ಥಿಗಳ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಒಂದೊಂದು ಪ್ರತಿಭೆ ಅಡಗಿರುತ್ತದೆ. ಇದನ್ನು ಹೆಕ್ಕಿ ತೆಗೆಯುವ ಜವಾಬ್ದಾರಿ ಶಿಕ್ಷಕರ ಮೇಲಿದ್ದರೆ, ಸಿಕ್ಕ ಅವಕಾಶದಲ್ಲಿ ಪ್ರತಿಭೆಯನ್ನು ಪ್ರತಿಬಿಂಬಿಸಲು ವಿದ್ಯಾರ್ಥಿಗಳು ತಯಾರಿರಬೇಕೆಂದು ಸೂಚಿಸಿದರು.
ಈ ವೇಳೆ ನಸಿಂರ್ಗ್ ಮಹಾವಿದ್ಯಾಲಯದ ಪ್ರಾಚಾರ್ಯರಾದ ಹಜರತಅಲಿ ಪಾನಾರಿ ಮಾತನಾಡಿ, ಇತ್ತೀಚೆಗೆ ಭಾರತ ಕ್ರೀಡೆಯಲ್ಲಿ ಉತ್ತಮ ಸಾಧನೆಮಾಡುತ್ತಿದೆ. ದೇಶಿ ಹಾಗೂ ಅಪ್ಪಟ ಹಳ್ಳಿ ಕ್ರೀಡೆಯಾದ ಕಬಡ್ಡಿ ಆಟವನ್ನು ಇಂದು ವಿಶ್ವದೆಲ್ಲೆಡೆ ಆಯೋಜಿಸುತ್ತಿರುವುದು ಹೆಮ್ಮೆಯ ವಿಷಯ. ಕ್ರಿಕೆಟ್ ಜೊತೆಗೆ ಇತರ ಆಟಗಳಿಗೂ ತನ್ನದೆಯಾದ ಪ್ರತೀತಿ ಇದ್ದು ದೇಶೀಯ ಕ್ರೀಡೆಗಳಿಗೆ ಆದ್ಯತೆ ನೀಡಿ ಸೋಲು ಗೆಲುವಿಗಿಂತ ಭಾಗಿಯಾಗುವುದು ಮುಖ್ಯ ಕಾರ್ಯಕ್ರಮದಲ್ಲಿ ಕ್ರೀಡಾಜ್ಯೋತಿ ಹಾಗೂ ಕ್ರೀಡಾ ಧ್ವಜಾರೋಹಣ ವನ್ನು ಸಂಸ್ಥೆಯ ಸಂಸ್ಥಾಪಕ ಡಾ ಎನ ಎ ಮಗದುಮ್ ನೆರವೇರಿಸಿ ಉದ್ಘಾಟಿಸಿದರು. ಈ ಕಾರ್ಯಕ್ರಮಕ್ಕೆ ಆಯುರ್ವೇದಿಕ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರಸನ್ನ ಸಾವನುರ್ ಎನ್ ಎಸ್ ನಿಡುಗುಂದೆ ಲಲಿತಾ ಮಗುದುನ್, ಸುರೇಶ್ ಚೌಗುಲಾ, ಹರ್ಷವರ್ಧನ್ ಮಗದುಮ್, ರಾಮಗೌಡ ಪಾಟೀಲ್, ಯಾಕುಬ್ ತಾಂಬಾಟ್ ಹಾಗೂ ಇನ್ನಿತರ ಶಿಕ್ಷಕ ಶಿಕ್ಷಕರು ವಿದ್ಯಾರ್ಥಿಗಳು ಹಾಜರಿದ್ದರು. ಅಶ್ವಿನಿ ಜಂಗಮ ಸ್ವಾಗತಿಸಿ ನಿರೂಪಿಸಿ ವಂದಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 