ಕ್ರೀಡೆ ಸದೃಢ ದೈಹಿಕ, ಮಾನಸಿಕ ಆರೋಗ್ಯ ಹೊಂದಲು ಸಾಧ್ಯ: ಸಿಪಿಐ ಡಪ್ಪಿನ
Sports can help you maintain strong physical and mental health: CPI Dappina
ರಾಯಬಾಗ, 25 : ಆತ್ಮ ರಕ್ಷಣೆಗಾಗಿ ಟೈಕ್ವಾಂಡೊದತಂಹ ಸಮರ ಕ್ರೀಡೆಯನ್ನು ಪ್ರಮುಖವಾಗಿ ಇಂದಿನ ಯುವತಿಯರು ಕಲಿಯಬೇಕು ಎಂದು ಸಿಪಿಐ ಎಮ್.ಎಮ್.ಡಪ್ಪಿನ ಹೇಳಿದರು. ಗುರುವಾರ ಸಾಯಂಕಾಲ ಪಟ್ಟಣದ ಮಹಾದೇವ ಮಂಗಲ ಕಾರ್ಯಾಲಯದಲ್ಲಿ ಕರ್ನಾಟಕ ಟೈಕ್ವಾಂಡೊ ಸಂಸ್ಥೆ ಮತ್ತು ರಾಯಬಾಗ ಟೈಕ್ವಾಂಡೊ ಕೇಂದ್ರದಿಂದ ಹಮ್ಮಿಕೊಂಡಿದ್ದ ಟೈಕ್ವಾಂಡೊ ಪರೀಕ್ಷೆಯಲ್ಲಿ ಉತೀರ್ಣ ಆದ ವಿದ್ಯಾರ್ಥಿಗಳಿಗೆ ಕಲರ್ ಬೆಲ್ಟ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಸದೃಢ ದೈಹಿಕ ಮತ್ತು ಮಾನಸಿಕ ಆರೋಗ್ಯ ಹೊಂದಲು ಸಾಧ್ಯವಾಗುತ್ತದೆ.
ಕ್ರೀಡೆಯಲ್ಲಿ ರಾಷ್ಟ್ರಮಟ್ಟ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಸರ್ಕಾರ ಉದ್ಯೋಗ ನೀಡುತ್ತದೆ. ಇದರ ಸದುಪಯೋಗ ಪಡೆದುಕೊಳ್ಳಲು ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಬೇಕೆಂದರು.ಸತತ ಪ್ರಯತ್ನದಿಂದ ಎಂತಹ ಸಾಧನೆ ಕೂಡ ಮಾಡಬಹುದು ಎಂದರು. ಟೈಕ್ವಾಂಡೊ ಪರೀವೀಕ್ಷಕ ವಿಜಯಕುಮಾರ ರಾಠೋಡ, ತರಬೇತುದಾರ ಜಯದೀಪ ದೇಸಾಯಿ, ಪ್ರಾರ್ಥನಾ ದೇಸಾಯಿ, ಕರಣ ದೇಸಾಯಿ ಸೇರಿ ಕ್ರೀಡಾ ವಿದ್ಯಾರ್ಥಿಗಳು ಇದ್ದರು.4 ವಿದ್ಯಾರ್ಥಿಗಳಿಗೆ ಬ್ಲಾಕ್ ಬೆಲ್ಟ್, 1 ರೆಡ್, 4 ಬ್ಲ್ಯೂ ಒನ್, 6 ಬ್ಲ್ಯೂ, 7 ಗ್ರೀನ್ ಒನ್, 13 ಗ್ರೀನ್ ಹಾಗೂ 27 ಯಲೋ ಬೆಲ್ಟ್ ವಿತರಿಸಲಾಯಿತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 