ಕ್ರೀಡೆ ಭೌದ್ಧಿಕ ಶಕ್ತಿಗೆ ಪ್ರೇರಕ ಬಸವರಾಜ ಹೊರಟ್ಟಿ

ಧಾರವಾಡ 11: ಕ್ರೀಡೆಯ ಬಗ್ಗೆ ಆಸಕ್ತಿ ಬಾಲ್ಯದಿಂದಲೂ ಇರಬೇಕಾದದ್ದು ಅಗತ್ಯವಾಗಿದೆ, ಯಾರಲ್ಲಿ ಕ್ರೀಡಾ ಮನೋಭಾವನೆ ಇರುತ್ತದೆಯೋ ಅವರು ಮಾನಸಿಕವಾಗಿ ದೈಹಿಕವಾಗಿ ಸದೃಡರಾಗಿರುತ್ತಾರೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.

ಕನರ್ಾಟಕ ವಿಶ್ವವಿದ್ಯಾಲಯ 69ನೇ ಅಂತರ ಮಹಾವಿದ್ಯಾಲಯಗಳ ಕ್ರೀಡಾಕೂಟದ ಮುಖ್ಯ ಅತಿಥಿಗಳಾಗಿ ಆಗಮಿಸಿ ಅಮೃತಧಾರೆ ಕ್ರೀಡಾ ಕೈಪಿಡಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು. 

ಇತ್ತೀಚಿಗೆ ಕ್ರೀಡೆಯ ಕಡೆಗೆ ಆಸಕ್ತಿ ಕಡಿಮೆ ಆಗುತ್ತಿದ್ದು, ಓದಿನ ಕಡೆಗೆ ಒಲವು ಹೆಚ್ಚುತ್ತಿದೆ. ಕ್ರೀಡಾ ನಿದರ್ೇಶಕರು ವಿದ್ಯಾಥರ್ಿಗಳಲ್ಲಿ ಕ್ರೀಡಾ ಮನೋಭಾವ ಮೂಡುವಂತೆ ಪ್ರಯತ್ನಿಸಬೇಕು. ಕ್ರೀಡೆಗಾಗಿ ಮಿಸಲಿಟ್ಟ ಹಣ ದುರುಪಯೋಗವಾಗಬಾರದು ಎಂದು ಹೇಳಿದರು. 

ಸಮಾರಂಭವನ್ನು ಉದ್ಘಾಟಿಸಿದ ಕನರ್ಾಟಕ ವಿಶ್ವವಿದ್ಯಾಲಯದ ಕುಲಪತಿ ಎ. ಎಸ್ ಶಿರಾಳಶೆಟ್ಟಿ ಅವರು ಕನರ್ಾಟಕ ವಿಶ್ವವಿದ್ಯಾಲಯದ ಅಥ್ಲೇಟಿಕ್ ಕ್ರೀಡಾಕೂಟವನ್ನು ಆಯೋಜಿಸಲು ಜೆ.ಎಸ್.ಎಸ್ ಮಹಾವಿದ್ಯಾಲಯ ಮುಂದೆ ಬಂದಿರುವುದು ಸಂತೋಷದ ಸಂಗತಿ. ಎಲ್ಲ ಕ್ರೀಡಾಪಟುಗಳು ಸಕ್ರೀಯವಾಗಿ ಪಾಲ್ಗೊಂಡು ಇದನ್ನು ಯಶಸ್ವಿಗೊಳಿಸಿಕೊಡಬೇಕೆಂದು ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅಂತರಾಷ್ಟ್ರೀಯ ಮತ್ತು ಬಂಗಾಲ ವಾರೀಯರ್ಸ್ ತಂಡದ ಪ್ರೋ ಕಬ್ಬಡಿ ಪಟು ಸುಕೇಶ ಹೆಗಡೆಯವರು ಯಾವ ಆಟದಲ್ಲಿ ನಮಗೆ ಆಸಕ್ತಿ ಇದೆಯೋ ಆ ಆಟದ ಬಗ್ಗೆ ನಮಗೆ ಶ್ರದ್ಧೆ ಇರಬೇಕು ಯಾವುದೇ ಆಟದಲ್ಲಿ ಯಶಸ್ಸು ಕಾಣಬೇಕಾದರೆ, ಕಠಿಣವಾದ ಪರಿಶ್ರಮ ಅಗತ್ಯವಾಗಿದೆ. ಪ್ರಾರಂಭದಲ್ಲಿ ನಾನೂ ಕೂಡ ಅಥ್ಲೇಟ್ ಇದ್ದೆ, ಕಬ್ಬಡ್ಡಿಯನ್ನು ಆಯ್ಕೆ ಮಾಡಿಕೊಂಡು ಸಾಧನೆಯನ್ನು ಮಾಡಿ ಸಿದ್ಧಿಯನ್ನು ಪಡೆದುಕೊಂಡು ತಮ್ಮ ಮುಂದೆ ವೇದಿಕೆಯ ಮೇಲೆ ನಿಂತಿದ್ದೇನೆ ಎಂದು ಹೇಳಿದರು. 

ಅಧ್ಯಕ್ಷತೆ ವಹಿಸಿದ್ದ, ಜನತಾ ಶಿಕ್ಷಣ ಸಮಿತಿಯ ಕಾರ್ಯದಶರ್ಿ ಡಾ. ನ. ವಜ್ರಕುಮಾರವರು, ಜೀವನದಲ್ಲಿ ವ್ಯಕ್ತಿ ಮುಂದೆ ಬರಬೇಕಾದರೆ ಪ್ರಾಮಾಣಿಕತೆ, ಶ್ರದ್ಧೆ, ನಿಷ್ಠೆ, ಅಗತ್ಯವಾಗಿದೆ ಎಂದು ಹೇಳಿ ಎಲ್ಲ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.

ಜನತಾ ಶಿಕ್ಷಣ ಸಮಿತಿಯ ವಿತ್ತಾಧಿಕಾರಿ ಡಾ. ಅಜಿತ ಪ್ರಸಾದರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಾಚಾರ್ಯ ಡಾ. ಜಿ. ಕೃಷ್ಣಮೂತರ್ಿ ಸ್ವಾಗತಿಸಿದರು, ಡಾ. ಜಿನದತ್ತ ಹಡಗಲಿ ರಂಜನಾ ಬಾದ್ರಿ ನಿರೂಪಿಸಿದರು. ಜಿನ್ನಪ್ಪ ಕುಂದಗೊಳ ವಂದಿಸಿದರು. 

 ಡಾ. ಸೂರಜ್ ಜೈನ್, ಮಹಾವೀರ ಉಪಾದ್ಯೆ ಉಪಸ್ಥಿತರಿದ್ದರು.