ಆರೋಗ್ಯವಂತ ಬದುಕಿಗೆ ಕ್ರೀಡೆ ಮುಖ್ಯ: ಶಾಸಕ ಬಸವರಾಜ್ ಶಿವಣ್ಣನವರ
Sports are important for a healthy life: MLA Basavaraj Shivannavara
ಆರೋಗ್ಯವಂತ ಬದುಕಿಗೆ ಕ್ರೀಡೆ ಮುಖ್ಯ: ಶಾಸಕ ಬಸವರಾಜ್ ಶಿವಣ್ಣನವರ
ಬ್ಯಾಡಗಿ 10: ಕ್ರೀಡೆ ಮತ್ತು ಪಠ್ಯ ಎರಡರಲ್ಲೂ ಸಾಧನೆ ಮಾಡಬೇಕು ಆರೋಗ್ಯವಂತ ಮನಸ್ಸಿದ್ದರೆ ದೈಹಿಕ ಆರೋಗ್ಯ ಚೆನ್ನಾಗಿರಲಿದೆ ಕ್ರೀಡೆಗಳಿಂದ ಶಾರೀರಿಕ ಚೈತನ್ಯ ಮಾನಸಿಕ ಉಲ್ಲಾಸ ಸಿಗಲು ಸಾಧ್ಯ ಎಂದು ಶಾಸಕ ಬಸವರಾಜ್ ಶಿವಣ್ಣನವರ ಹೇಳಿದರು. ತಾಲೂಕಿನ ಮೋಟೆಬೆನ್ನೂರು ಗ್ರಾಮದ ನವೋದಯ ವಿದ್ಯಾ ಸಂಸ್ಥೆಯ ಸುಶೀಲಮ್ಮ ಹಾವೇರಿಮಠ ಆಂಗ್ಲ ಮಾಧ್ಯಮ ಶಾಲೆಯೂ 2025- 26 ಸಾಲಿನ ಕ್ಲಸ್ಟರ್ ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದವರು.
ವಿದ್ಯಾರ್ಥಿಗಳು ಕ್ರೀಡಾ ಪ್ರತಿಭೆ ಗುರುತಿಸಲು ಅಭಿವೃದ್ಧಿಗೆ ಇದು ಸಹಕಾರಿಯಾಗಲಿದೆ ಕ್ರೀಡೆಯಲ್ಲಿ ತಾಳ್ಮೆ ಏಕಾಗ್ರತೆ. ಸೋಲು ಗೆಲುವು ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ ಎರಡನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಕ್ರೀಡಾಪಟುಗಳು ಹೊಂದಿದ್ದರೆ ಮಾತ್ರ ಯಶಸ್ಸು ಸಾಧ್ಯ ಮಕ್ಕಳಲ್ಲಿ ಇತ್ತೀಚಿನ ದಿನ ಶೈಕ್ಷಣಿಕ ಚಟುವಟಿಕೆಗಳಲ್ಲಿ ಉತ್ಸಾಹ ಚೇತರಿಕೆ ಕಡಿಮೆಯಾಗುತ್ತಿದೆ ಕ್ರೀಡಾಕೂಟದಿಂದ ಮಕ್ಕಳಿಗೆ ಮುಖದಲ್ಲಿ ನಗೆ ಕಾಣಬಹುದು ಮತ್ತು ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ಕೆಎಂಎಫ್ ನಿರ್ದೇಶಕ ಪ್ರಕಾಶ್ ಬನ್ನಿಹಟ್ಟಿ. ನಾಗರಾಜ ಅನ್ವೇರಿ.ಉದ್ದಿಮೆದಾರ ಕರಬಸಪ್ಪ ಬಳ್ಳಾರಿ, ವೀರಣ್ಣ ಬಳ್ಳಾರಿ, ಬಸವರಾಜ ಹಾವೇರಿ ಮಠ ಶಾಲೆಯ ಅಧ್ಯಕ್ಷರು, ಮಲ್ಲಿಕಾರ್ಜುನ ಬಳ್ಳಾರಿ ಕಾರ್ಯದರ್ಶಿಗಳು ನವೋದಯ ವಿದ್ಯಾ ಸಂಸ್ಥೆ.ಎ ಟಿ ಲಕ್ಕಣ್ಣನವರ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಪಾರ್ವತಮ್ಮ ನಾಯಕ್.ಕ್ಷೇತ್ರ ಶಿಕ್ಷಣೂ ಎಸ್ಜಿ ಕೋಟಿ.ಎಸ್ ಟಿ ಪೀಠದ . ವಿವಿ ಹಿರೇಮಠ. ಕುಮಾರ ಎಸ್. ಟಿ ಎಲ್ ವೆಂಕಟೇಶ. ಎಂ ಎಲ್ ಸೋಮಣ್ಣನವರ. ನವ್ಯಾ ಹಾವನೂರ ಹಾಗೂ ಶಾಲೆಯ ಸಿಬ್ಬಂದಿಗಳು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 