ಬದುಕಿನ ಸಾರ್ಥಕತೆಗೆ ಆಧ್ಯಾತ್ಮಿಕ ಚಿಂತನೆಗಳು ಅಗತ್ಯ: ಕೈವಲ್ಯಮಯಿ ಮಾತಾಜಿ

ಬದುಕಿನ ಸಾರ್ಥಕತೆಗೆ ಆಧ್ಯಾತ್ಮಿಕ ಚಿಂತನೆಗಳು ಅಗತ್ಯ: ಕೈವಲ್ಯಮಯಿ ಮಾತಾಜಿ Spiritual thoughts are essential for the meaning of life: Kaivalyamayi Mataji

           ವಿಜಯಪುರ 23: ಮಾನವ ಜನ್ಮ ದೊಡ್ಡದು, ಅದನ್ನು ಹಾನಿ ಮಾಡಲು ಬೇಡ ಎಂಬ ಸಂದೇಶ ನೀಡಿದ ಪುರಂದರದಾಸರು, ಈ ಜನ್ಮವೆಂಬುದು ಒಮ್ಮೆ ಮಾತ್ರ ಬರುವುದು. ಇರುವಷ್ಟು ದಿನ ಒಳ್ಳೆಯ ಕೆಲಸ-ಕಾರ್ಯ ಮಾಡುತ್ತಾ, ಸದ್ಭಾವ, ಸದ್ವಿಚಾರ, ಸನ್ನಡತೆ, ಸದ್ಗುಣ, ಸಚ್ಚಾರಿತ್ರ್ಯ ಎಂಬ ಪಂಚ ಗುಣಗಳನ್ನು ಮೈಗೂಡಿಸಿಕೊಂಡು ಬದುಕಬೇಕು. ನಮ್ಮ ಬದುಕು ಹೆಂಗ ಆಗಬೇಕೆಂದರೆ, ಇತರರಿಗೆ ಆದರ್ಶ, ಮಾದರಿ ಮತ್ತು ಅನುಕರಣೆಯಾಗುವಂತಿರಬೇಕು. ಮನೆಯಲ್ಲಿ ನಾವು ಬದುಕುವ ರೀತಿ-ನೀತಿ, ಆಚಾರ-ವಿಚಾರ, ಸಂಸ್ಕೃತಿ-ಸಂಸ್ಕಾರಗಳೆಲ್ಲವೂ ನಮ್ಮ ಮಕ್ಕಳಲ್ಲಿ ಜೀವನ-ಮೌಲ್ಯಗಳನ್ನು ಒಡಮೂಡಿಸವಂತಿರಬೇಕು. ಅಂದಾಗ ಮಾತ್ರ ಶಿಕ್ಷಣದಿಂದ ಸುಸಂಸ್ಕೃತ, ಸುಶಿಕ್ಷಿತ ಮತ್ತು ಮೌಲ್ಯಯುತ ಸಮಾಜ ನಿರ್ಮಾಣವಾಗಲು ಸಾಧ್ಯ. ಎಂದು ವಿಜಯಪುರದ ಶಾರದಾಶ್ರಮದ ಪರಮ ಪೂಜ್ಯ ಕೃಪಾಮಯಿ ಮಾತಾಜೀ ಅವರು ಆರ್ಶೀವಚನದಲ್ಲಿ ಹೇಳಿದರು. 

          ಅವರು ನಗರದ ಅಥಣಿ ರಸ್ತೆಯಲ್ಲಿರುವ ಅಲ್‌-ಅಮೀನ್ ಆಸ್ಪತ್ರೆ ಎದುರಿಗೆ ಇರುವ ಎನ್‌.ಜಿ.ಓ ಕಾಲನಿಯಲ್ಲಿ ಜೈ ಶ್ರೀ ಆಂಜನೇಯ ದೇವಸ್ಥಾನದ 6 ನೇಯ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡ “ಸಾರ್ಥಕ ಬದುಕಿಗೆ ಅಧ್ಯಾತ್ಮಿಕ ಚಿಂತನೆಗಳು” ವಿಷಯ ಕುರಿತಾದ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.  ಅವರು ಮಾತನಾಡುತ್ತಾ, ಪ್ರತಿಯೊಬ್ಬ ತಾಯಂದಿರು ತಮ್ಮ ಮಕ್ಕಳಲ್ಲಿ ಧರ್ಮ, ಸಂಸ್ಕೃತಿ-ಸಂಸ್ಕಾರ, ನೈತಿಕ, ವೈಚಾರಿಕ, ಅಧ್ಯಾತ್ಮಕ ಮತ್ತು ಜೀವನ-ಮಾನವೀಯ ಮೌಲ್ಯಗಳ ಬಗ್ಗೆ ಅರಿವು ಮೂಡಿಸಬೇಕು. ಅಂದಾಗ ಮಾತ್ರ  ಈ ದೇಶದ ಶ್ರೇಷ್ಠ ಸಂತ ಸ್ವಾಮಿ ವಿವೇಕಾನಂದರು ಕಂಡ ಕನಸು ನನಸಾಗಿಲಸು ಸಾಧ್ಯ. ಈ ಭರತ ಖಂಡದ ಇತಿಹಾಸ, ಪರಂಪರೆ, ಸಂಪ್ರದಾಯ, ಆಚರಣೆ ಮತ್ತು ದೇಶೀಯ ಅಸ್ಮಿತೆಯನ್ನು ಉಳಿಸಿ-ಬೆಳೆಸುವಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದೆ ಎಂದು ಹೇಳಿದರು.  ಕೈವಲ್ಯಮಯಿ ಮಾತಾಜಿ ಇವರನ್ನು ಕಸ್ತೂರಿ ಸಾವಳಗಿ ಇವರು ಗೌರವ ಸನ್ಮಾನ ಮಾಡಿದರು. ಇದೇ ಸಂದರ್ಭದಲ್ಲಿ ಮಹಾಪ್ರಸಾದ ಸೇವೆಗೈದ ಮಲ್ಲಿಕಾರ್ಜುನ ಪಾಟೀಲ ಹಾಗೂ ಶಿಕ್ಷಕಿ ಮಂಜುಳಾ ಕವಲಗಿ ಇವರನ್ನು ಸನ್ಮಾನಿಸಲಾಯಿತು.  

          ಕಾರ್ಯಕ್ರಮದಲ್ಲಿ ದೇವಸ್ಥಾನ ಸೇವಾ ಸಮೀತಿಯ ನಿರ್ದೇಶಕರಾದ ಶ್ರೀ ಎಸ್‌.ಎಸ್‌.ತೆನಿಹಳ್ಳಿ, ಶಿವಪ್ಪ ಸಾವಳಗಿ, ನಾನಾಸಾಬ ಕೂಟನೂರ, ಅನೀಲ ಪಾಟೀಲ, ಶಶಿ ಉತ್ನಾಳ, ಶಿವಯೋಗಿ ಹತ್ತಿ, ಮಹಾದೇವ ಕಪಾಳಿ, ರಾಮಚಂದ್ರ ಜೋಶಿ, ಅಶೋಕ ಪಾಟೀಲ, ಶಂಕರ ಪೂಜಾರಿ, ಆರ್‌.ಬಿ.ಪೂಜಾರಿ, ಆನಂದ ಕಡಕೋಳ, ಸಪ್ನೀಲ್ ಚವ್ಹಾಣ, ನಾಗೇಂದ್ರ ಯಾದವ, ಶ್ರೀಶೈಲ ಮಠಪತಿ, ಎಂ,ಎಸ್‌.ಪಾಟೀಲ, ಎ.ಬಿ.ಬಿರಾದಾರ ಇನ್ನಿತರರು ಸಹ ಉಪಸ್ಥಿತರಿದ್ದರು.  ಈ ಕಾರ್ಯಕ್ರಮದಲ್ಲಿ ನವರಸಪುರದ ಎಲ್ಲ ಬಡಾವಣೆಗಳ ಸುಮಾರು ನೂರಾರು ಹಿರಿಯರು, ಮಹಿಳೆಯರು, ಮಕ್ಕಳು ಯುವಕರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.