ಮನುಷ್ಯನ ಯಾಂತ್ರಿಕ ಬದುಕಿನಲ್ಲಿ ಆಧ್ಯಾತ್ಮ ಜ್ಞಾನ ಆಶಾಕಿರಣವಾಗಿದೆ : ಜಿಲ್ಲಾಧಿಕಾರಿ ಇಟ್ನಾಳ
Spiritual knowledge is a ray of hope in the mechanical life of man: District Collector Itnal
ಕೊಪ್ಪಳ 21: ಮನುಷ್ಯನ ಯಾಂತ್ರಿಕ ಬದುಕಿನಲ್ಲಿ ಅಧ್ಯಾತ್ಮ ಜ್ಞಾನ ಆಶಾಕಿರಣವಾಗಿದೆ ಎಂದು ಕೊಪ್ಪಳ ಜಿಲ್ಲಾಧಿಕಾರಿ ಡಾ. ಸುರೇಶ್ ಬಿ ಇಟ್ನಾಳ್ ತಿಳಿಸಿದರು. ಅವರು ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಏರಿ್ಡಸಿದ ಅಧ್ಯಾತ್ಮ ಮಹೋತ್ಸವದ ಕಾರ್ಯಕ್ರಮವನ್ನು ಉದ್ಘಾಟಸಿ ಮಾತನಾಡಿದರು. ಸಾರ್ವಜನಿಕರು ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಸದೃಢವಾಗಿಟ್ಟುಕೊಳ್ಳಲು ಮೆಡಿಟೇಶನ್ ಅತ್ಯವಶ್ಯಕವಾಗಿದೆ ಎಂದು ಕೊಪ್ಪಳ ಜಿಲ್ಲಾಧಿಕಾರಿ ಡಾ, ಸುರೇಶ್ ಬಿ ಇಟ್ನಾಳ ಕರೆ ನೀಡಿದರು. ಸಾನಿಧ್ಯ ವಹಿಸಿ ಮಾತನಾಡಿದ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಬಿ.ಕೆ ಯೋಗಿನಿ ಅಕ್ಕ ಮಾತನಾಡಿ ಮನುಷ್ಯ ಜೀವನದಲ್ಲಿ ಹಣ ಆಸ್ತಿ ಅಂತಸ್ತು ಅಧಿಕಾರ ಗಳಿಸಬಹುದು ಇವುಗಳ ಜೊತೆಗೆ ಮನಸ್ಸಿಗೆ ಶಾಂತಿ ನೆಮ್ಮದಿಯನ್ನು ಪಡೆದಾಗ ವ್ಯಕ್ತಿಯ ಜೀವನ ಪರಿಪೂರ್ಣ ಎನಿಸಿಕೊಳ್ಳುತ್ತದೆ ಎಂದರು. ಮುಖ್ಯ ಅಧಿಕಾರಿಗಳಾಗಿ ಮಾತನಾಡಿದ ಡಾ. ಶಿವನಗೌಡ ಪಾಟೀಲ್ ಸಮಾಜದಲ್ಲಿ ದಿನದಿಂದ ದಿನಕ್ಕೆ ಮನುಷ್ಯನ ಆರೋಗ್ಯ ಹದಗೆಡಲು ಮಾನಸಿಕ ಒತ್ತಡ ಕಾರಣವಾಗಿದೆ. ಇದರಿಂದ ಹೊರಬರಲು ಸತ್ಸಂಗದ ವಾತಾವರಣ ಸಹಕಾರಿಯಾಗಿದೆ ಎಂದರು. ವೇದಿಕೆಯ ಮೇಲೆ ಚಂದ್ರಕಾಂತ ಬೆಟ್ಗೇರಿ ಸಂಗಮೇಶ್ ಕಲ್ಹಾಳ್ ರಮೇಶ್ ಕೌಲೂರ್ ಶೇಖರ್ಪ ಉಪಸ್ಥಿತರಿದ್ದರು. ಬಿ ಕೆ ಸ್ನೇಹಕ್ಕ ಕಾರ್ಯಕ್ರಮ ನಿರೂಪಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 