ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವಿಶೇಷ ಕಾರ್ಯಗಾರ
Special workshop from Dharmasthala Rural Development Project
ಯರಗಟ್ಟಿ 25: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಪ್ರಸಕ್ತ ಸಾಲಿನಲ್ಲಿ ಅನ್ನದಾತರ ಜ್ಞಾನವರ್ಧನೆ ಮತ್ತು ಆರ್ಥಿಕ ಬಲವರ್ಧನೆಗಾಗಿ ಕೃಷಿ ಮತ್ತು ನೀರಾವರಿ ಕುರಿತು ವಿಶೇಷ ಕಾರ್ಯಗಾರವನ್ನು ಸಮೀಪದ ಮಬನೂರ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕಾ ಯೋಜನೆ ಅಧಿಕಾರಿ ಶ್ರೀಕಾಂತ. ಕೆ. ಚಾಲನೆ ನೀಡಿದರು.
ಕೃಷಿ ನೀರಾವರಿ ಕುರಿತು ಮಾತನಾಡಿದ ಪ್ರಗತಿಪರ ರೈತ ಈರನಗೌಡ ಪಾಟೀಲ ಅವರು ಭಾರತವು ಕೃಷಿ ಪ್ರಧಾನ ದೇಶವಾಗಿದೆ. ಬಹುತೇಕ ರೈತರು ಕೃಷಿ ಚಟುವಟಿಕೆಗಳಿಗೆ ಕೃತಕ ನೀರಿನ ಮೂಲಗಳನ್ನು ಬಳಸುತ್ತಾರೆ. ಪ್ರತಿ ಹನಿಗೂ ಹೆಚ್ಚಿನ ಬೆಳೆ’ ಎಂಬ ಪರಿಕಲ್ಪನೆಯ ಭಾಗವಾಗಿ ಕೃಷಿ ಸಿಂಚಾಯಿ ಯೋಜನೆಯನ್ನು ಜಾರಿ ಮಾಡಲಾಗಿದೆ.ಕೃಷಿ ಭೂಮಿಗೆ ಹನಿ ನೀರಾವರಿ ಹಾಗೂ ತುಂತುರು ನೀರಾವರಿಯನ್ನು ಮಾಡಲು ಸಹಾಯಧವನ್ನು ಈ ಯೋಜನೆಯ ಮೂಲಕ ನೀಡಲಾಗುತ್ತದೆ.
ಈ ವೇಳೆ ಕೃಷಿ ಅಧಿಕಾರಿ ನಾಗಪ್ಪ ನಾಯ್ಕ, ಸೇವಾ ಪ್ರತಿನಿಧಿ ಮಂಜುಳಾ ಬೀರದೇವರ, ನಾಗರಾಜ ನಾಯ್ಕ, ರೈತರಾದ ಕಿರಣಗೌಡ ಪಾಟೀಲ, ರೈತ ಮಹಿಳೆಯರಾದ ಸತ್ಯವ್ವ ಪಾಟೀಲ, ಸವಿತಾ ಪಾಟೀಲ, ಮಿನಾಕ್ಷಿ ಪಟಾತ, ರೇಣುಕಾ ಪಟಾತ, ಮಾಯವ್ವ ಪಟಾತ, ಶ್ರೀದೇವಿ ಭಾಗೋಜಿ, ಶೋಭಾ ಭಾಗೋಜಿ, ಲಕ್ಷ್ಮೀ ಈಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಮನೆ ಮನೆಗಳ ಮೇಲೆ ಕನ್ನಡ ಬಾವುಟ ಅಭಿಯಾನ–2026’: 5 ಸಾವಿರ ಕನ್ನಡ ಧ್ವಜಗಳ ಉಚಿತ ವಿತರಣೆ
ಉತ್ತರ ವಲಯ ಪೊಲೀಸರಿಂದ ರೌಡಿ ನಿಗ್ರಹಕ್ಕೆ ಕಠಿಣ ಕ್ರಮ : 23 ರೌಡಿಗಳ ಗಡಿಪಾರು
6.85 ಕೆ.ಜಿ. ಗಾಂಜಾ ಮಿಶ್ರಿತ ಚಾಕಲೇಟ್ ಪ್ಯಾಕೆಟ್ಗಳ ವಶ: ಓರ್ವ ಆರೋಪಿ ಬಂಧನ
ಕಳೆದುಹೋಗಿದ್ದ 57 ಮೊಬೈಲ್ ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ: ವಾರಸುದಾರರಿಗೆ ವಾಪಸ್ 