ವಿದ್ಯಾರ್ಥಿಗಳು ಉತ್ತಮ ದರ್ಜೆಯಲ್ಲಿ ಉತ್ತೀರ್ಣಗಾಲು ವಿಶೇಷ ತರಬೇತಿ

ವಿದ್ಯಾರ್ಥಿಗಳು ಉತ್ತಮ ದರ್ಜೆಯಲ್ಲಿ ಉತ್ತೀರ್ಣಗಾಲು ವಿಶೇಷ ತರಬೇತಿ Special training for students to pass with good grades

                     ಧಾರವಾಡ  09: ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಸಮಾಜ ಕಲ್ಯಾಣ , ಹಿಂದುಳಿದ ವರ್ಗ,ಅಲ್ಪಸಂಖ್ಯಾತ  ಇಲಾಖೆಗಳ ಹಾಸ್ಟೆಲ್ ಪ್ರಗತಿ ಪರೀಶೀಲನಾ ಸಭೆಯ ಅಧ್ಯಕ್ಷತೆಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ್ ಪಾಟೀಲ್ ರವರು ಸಭೆ ನಡೆಸಿದರು.ಹಾಸ್ಟೆಲ್ ನಿರ್ವಹಣೆ, ವಿದ್ಯಾರ್ಥಿಗಳ ಸೌಲಭ್ಯಗಳು, ಯೋಜನೆಗಳ ಅನುಷ್ಠಾನ, ಮತ್ತು ಸಮಸ್ಯೆಗಳ ಪರಿಹಾರದ ಬಗ್ಗೆ ಚರ್ಚಿಸುತ್ತಾರೆ. ಹಾಸ್ಟೆಲ್‌ಗಳ ಗುಣಮಟ್ಟ, ಶುಚಿತ್ವ, ಪೌಷ್ಠಿಕಾಂಶ, ಮೂಲಸೌಕರ್ಯಗಳ ಕೊರತೆ, ಮತ್ತು ಸಿಬ್ಬಂದಿ ಕೊರತೆಗಳ ಬಗ್ಗೆ ಚರ್ಚಿಸಿ, ಸಂಬಂಧಿಸಿದ ಅಧಿಕಾರಿಗಳಿಗೆ  ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು  ಸುಧಾರಣೆ ತರಲು ನಿರ್ದೇಶನ ನೀಡಿದರು.

                    ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಉತ್ತಮ ಆಹಾರ, ಶುಚಿತ್ವ, ನೀರು, ವಿದ್ಯುತ್ ಮತ್ತು ಸುರಕ್ಷತೆ ಒದಗಿಸುವುದು.ಎಸ್‌.ಎಸ್‌.ಎಲ್‌. ಫಲಿತಾಂಶದಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳು ಉತ್ತಮ ದರ್ಜೆಯಲ್ಲಿ ಉತ್ತೀರ್ಣಗಾಲು ವಿಶೇಷ ತರಬೇತಿ ನೀಡುವಂತೆ ತಿಳಿಸಿದರು.ವಿದ್ಯಾರ್ಥಿ ನಿಲಯಗಳ ಮೂಲಭೂತ ಸೌಲಭ್ಯಗಳು,ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ, ಬಯೋಮೆಟ್ರಿಕ್ ಹಾಜರಾತಿ,ಗುಣಮಟ್ಟದ ಆಹಾರ ವಿತರಣೆ,8, 9 ್ಘ 10 ನೇ ತರಗತಿಗೆ ಪ್ರವೇಶ ಪಡೆದ ಮಕ್ಕಳ ವಿವರಗಳನ್ನು ಚರ್ಚಿದರು.ಸಿಬ್ಬಂದಿಯ ನಿರ್ವಹಣೆ ಹಾಸ್ಟೆಲ್ ವಾರ್ಡನ್‌ಗಳು, ಅಡುಗೆಯವರು ಮತ್ತು ಇತರ ಸಿಬ್ಬಂದಿಗಳ ಕಾರ್ಯಕ್ಷಮತೆ ಮತ್ತು ಅವರ ಕೊರತೆಗಳ ಬಗ್ಗೆ ಚರ್ಚಿಸಿದರು.ಈ ಸಭೆಯಲ್ಲಿ ಜಂಟಿ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ,ಉಪ ನಿರ್ದೇಶಕರು ಹಿಂದುಳಿದ ವರ್ಗಗಳ ಇಲಾಖೆ, ಉಪ ನಿರ್ದೇಶಕರು ಅಲ್ಪಸಂಖ್ಯಾತ ವರ್ಗ ಇಲಾಖೆ, ತಾಲ್ಲೂಕು ಅಧಿಕಾರಿಗಳು ಉಪಸ್ಥಿತರಿದ್ದರು