ಧರ್ಮಸ್ಥಳ ಬಗ್ಗೆ ಕೆಲವರು ಅವಹೇಳನೇಕಾರಿ ಸುದ್ದಿ ಹಬ್ಬಿಸಿದ್ದು, ಪುಣ್ಯಕ್ಷೇತ್ರದ ಹೆಸರನ್ನು ಮಲಿನ ಮಾಡುತ್ತಿದ್ದಾರೆ
Some people have spread derogatory news about Dharmasthala
ಕಾಗವಾಡ 14: ಧರ್ಮಸ್ಥಳ ಬಗ್ಗೆ ಕೆಲವರು ಅವಹೇಳನೇಕಾರಿ ಸುದ್ದಿ ಹಬ್ಬಿಸಿದ್ದು, ಪುಣ್ಯಕ್ಷೇತ್ರದ ಹೆಸರನ್ನು ಮಲಿನ ಮಾಡುತ್ತಿದ್ದಾರೆ. ಕಳೆದ ಅನೇಕ ದಿನಗಳಿಂದ ಶ್ರೀ ಕ್ಷೇತ್ರದಲ್ಲಿ ಎಸ್‌ಐಟಿ ತನಿಖೆ ಕೈಗೊಂಡಿದ್ದಾರೆ. ಯಾವುದೇ ರೀತಿ ಕಳೆಬರ ದೊರಕಿಲ್ಲ. ಈ ಪುಣ್ಯಕ್ಷೇತ್ರಕ್ಕೆ ಚುತಿ ತರುವ ಕಾರ್ಯ ನಡಿಯುತ್ತಿದ್ದರಿಂದ ಕಾಗವಾಡ ಮತಕ್ಷೇತ್ರದ ಸಮಸ್ತ ಜೈನ ಬಾಂಧವರು ಹಾಗೂ ಹಿಂದೂ ಮುಸ್ಲಿಂ ಬಾಂಧವರು ಒಂದುಗೂಡಿ ಶನಿವಾರ ಬೆಳಿಗ್ಗೆ 10 ಗಂಟೆಗೆ ರಾಣಿ ಚೆನ್ನಮ್ಮ ವೃತ್ತದಲ್ಲಿ ಉಗ್ರವಾದ ಪ್ರತಿಭಟನೆ ಕೈಗೊಳ್ಳಲಾಗಿದ್ದು, ಸಾವಿರಾರು ಸಂಖ್ಯೆಯಿಂದ ನಾಗರೀಕರು ಪಾಲ್ಗೊಳ್ಳಬೇಕೆಂದು ಕರ್ನಾಟಕ ರಾಜ್ಯ ಜೈನ್ ಅಸೋಸಿಯೇಷನ್ ಉಪಾಧ್ಯಕ್ಷ ಶೀತಲಗೌಡ ಪಾಟೀಲ್ ಕರೆ ನೀಡಿದ್ದಾರೆ.ಅವರು, ಗುರುವಾರ ದಿ. 14 ರಂದು ಸಂಜೆ ಪಟ್ಟಣದ ಪಿಕೆಪಿಎಸ್ ಸಂಸ್ಥೆಯಲ್ಲಿ ಪ್ರಮುಖರ ಸಭೆಯಲ್ಲಿ ಮಾತನಾಡುತ್ತಿದ್ದರು. ಪ್ರತಿಭಟನೆಯಲ್ಲಿ ಶಿರಗುಪ್ಪಿ, ಜುಗೂಳ, ಉಗಾರ್, ಅನಂತಪೂರ ಹಾಗೂ ಮದಭಾವಿ ಹೋಬಳಿ ಮಟ್ಟದಿಂದ ಸುಮಾರು 5000 ಜನ ಪಾಲ್ಗೊಳ್ಳಲಿದ್ದಾರೆ.
ಶೇಡಬಾಳದ ಆಚಾರ್ಯ ಶಾಂತಿಸಾಗರ್ ಜೈನ ಆಶ್ರಮದಲ್ಲಿ ಎಲ್ಲ ಸಮಾಜದ ಬಾಂಧವರು ಒಂದುಗೂಡಿ ಕಾಲು ನಡೆಗೆ ಮುಖಾಂತರ ಸುಮಾರು ನಾಲ್ಕು ಕಿಲೋಮೀಟರ್ ಅಂತರದಲ್ಲಿರುವ ಪಟ್ಟಣದ ರಾಣಿ ಚೆನ್ನಮ್ಮ ವೃತ್ತದಲ್ಲಿ ಬಂದು ಪ್ರತಿಭಟನೆ ಕೈಗೊಳ್ಳಲಿದ್ದಾರೆ. ಬಳಿಕ ಸ್ಥಳೀಯ ದಂಡಾಧಿಕಾರಿ ಇವರಿಗೆ ಮುಖ್ಯಮಂತ್ರಿಗಳಿಗೆ ಮನವಿ ಅರ್ಿಸಲಿದ್ದೇವೆ ಎಂದು ಅವರು ತಿಳಿಸಿದ್ದಾರೆ. ಈ ವೇಳೆ ಕಾಗವಾಡ ಪಿಕೆಪಿಎಸ್ ಅಧ್ಯಕ್ಷ ನ್ಯಾಯವಾದಿ ಕಾಕಾ ಪಾಟೀಲ, ಉಪಾಧ್ಯಕ್ಷ ಪದ್ಮಾಕರ್ ಕರವ, ಶಿರಗುಪ್ಪಿ ಪಿಕೆಪಿಎಸ್ ಅಧ್ಯಕ್ಷ ಸುರೇಶ ಚೌಗಲೆ, ವಿದ್ಯಾಸಾಗರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿದ್ಯಾಸಾಗರ ಮಾನಗಾವೆ, ಪ್ರಕಾಶ್ ಹೇಮಗಿರೆ, ಪ್ರಕಾಶ್ ಚೌಗುಲೆ, ಸುರೇಶ್ ಪಾಟೀಲ್, ಪಿಕೆಪಿಎಸ್ ಕಾರ್ಯದರ್ಶಿ ರಾಜೇಂದ್ರ ಪೂಜಾರಿ ಸೇರಿದಂತೆ ಅನೇಕರು ಇದ್ದರು..
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 