ಸಮಾಜಕ್ಕಾಗಿ ದುಡಿದ ಸಾಧಕರನ್ನು ಸಮಾಜ ಸ್ಮರಿಸುತ್ತದೆ ಸಮಾಜದ ಹಿತಕ್ಕಾಗಿ ಸೇವೆ ಮಾಡಿದ ಹಿರಿಯ ವೈದ್ಯ ಕಾಳೆ’ಸಮರ​‍್ಿತ’ ಗ್ರಂಥವನ್ನು ಲೋಕಾರೆ​‍್ಣಗೊಳಿಸಿ ಮಾತನಾಡಿದ ಸಚಿವ ಎಚ್‌. ಕೆ. ಪಾಟೀಲ

ಸಮಾಜಕ್ಕಾಗಿ ದುಡಿದ ಸಾಧಕರನ್ನು ಸಮಾಜ ಸ್ಮರಿಸುತ್ತದೆ ಸಮಾಜದ ಹಿತಕ್ಕಾಗಿ ಸೇವೆ ಮಾಡಿದ ಹಿರಿಯ ವೈದ್ಯ ಕಾಳೆ’ಸಮರ​‍್ಿತ’ ಗ್ರಂಥವನ್ನು ಲೋಕಾರೆ​‍್ಣಗೊಳಿಸಿ ಮಾತನಾಡಿದ ಸಚಿವ ಎಚ್‌. ಕೆ. ಪಾಟೀಲ Society remembers the achievers who worked for the society. Minister H. K. Patil spoke at the launc

ನರೇಗಲ್ 23 : ಆದಾಯಕ್ಕಾಗಿ ಕೆಲಸ ಮಾಡದೇ ಸಮಾಜದ ಹಿತಕ್ಕಾಗಿ ಸೇವೆ ಮಾಡುವ ವ್ಯಕ್ತಿಗಳಿಗೆ ಮಾತ್ರ ಜನರು ಗೌರವ-ಪ್ರೀತಿ ನೀಡುತ್ತಾರೆ ಹಾಗೂ ಅಭಿಮಾನದಿಂದ ಹೊತ್ತು ಮೆರೆಸುತ್ತಾರೆ ಅಂತವರಲ್ಲಿ ಹಿರಿಯ ವೈದ್ಯರಾದ ಡಾ. ಜಿ. ಕೆ. ಕಾಳೆಯವರ ಸಮಾಜಿಕ ಸೇವೆ ಅಪಾರವಾಗಿದೆ ಎಂದು ಕಾನೂನು ನ್ಯಾಯ ಮಾನವ ಹಕ್ಕುಗಳು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸದ್ಯೋಮ ಇಲಾಖೆಗಳ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ  ಎಚ್‌. ಕೆ. ಪಾಟೀಲ ಹೇಳಿದರು.           

ನರೇಗಲ್ ಪಟ್ಟಣದ ಹಿರಿಯ ವೈದ್ಯ ಡಾ. ಜಿ. ಕೆ. ಕಾಳೆಯವರ ಮತ್ತು ಭಾಗ್ಯವತಿ ಅನಿಲ ಕಾಳೆಯವರ 75ನೇ ವರ್ಷದ  ಅಮೃತ ಮಹೋತ್ಸವದ ಅಂಗವಾಗಿ ಕೋಡಿಕೊಪ್ಪ ಗ್ರಾಮದ ವೀರ​‍್ಪಜ್ಜನ ಮಠದ ಆವರಣದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ’ಸಮರ​‍್ಿತ’ ಎನ್ನುವ ಗ್ರಂಥವನ್ನು ಲೋಕಾರೆ​‍್ಣಗೊಳಿಸಿ ಮಾತನಾಡಿದರು. ಜಾತಿ ಆಧಾರಿತವಾಗಿ ಮಾತನಾಡುವ ಕಾಲಘಟ್ಟದಲ್ಲಿ  ಕಾಳೆಯವರನ್ನು ಅನ್ನದಾನೇಶ್ವರ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಯನ್ನಾಗಿ ಶ್ರೀಗಳು ನೇಮಕ ಮಾಡಿದ್ದಾರೆ ಅಷ್ಟೇ ಅಲ್ಲದೆ ಸಂಸ್ಥೆಯ ಪೂರ್ಣ ಹಿರಿತನವನ್ನು ಕಾಳೆಯವರ ಕೈಯಲ್ಲಿ ಕೊಟ್ಟಿರುವುದು ಅವರ ಘನತೆ, ವಿಶ್ವಾಸಕ್ಕೆ ಸಾಕ್ಷಿಯಾಗಿದೆ.

ನಾಲ್ಕು ದಶಕಗಳಿಂದ ನನಗೆ ಆತ್ಮೀಯರಾಗಿರುವ ಕಾಳೆಯವರು ಯಾವಾಗಲೂ ಸಮಾಜಕ್ಕೆ ಉಪಯೋಗವಾಗುವ ಮಾರ್ಗದರ್ಶನ ನೀಡಿದ್ದಾರೆ. ನರೇಗಲ್ ಭಾಗದ ಅನೇಕ ಮಕ್ಕಳನ್ನು ಅಧ್ಯಯನಕ್ಕೆ ಹಚ್ಚಿ ಹೃದಯವಂತವರನ್ನಾಗಿ ಮಾಡುವುದಲ್ಲದೆ ಸಮಾಜದ ಹಿತವನ್ನು ಕಾಪಾಡುತ್ತಾ ಬಂದಿದ್ದಾರೆ ಎಂದರು. ಡಾ. ಜಿ. ಕೆ. ಕಾಳೆಯವರ ವೈದ್ಯಕೀಯ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಮತ್ತು ಕೃಷಿಕ ಸಾಧನೆಗಳು ಮುಂದಿನ ಪೀಳಿಗೆಗೆ ಪರಿಚಯವಾಗಲಿ ಎನ್ನುವ ಉದ್ದೇಶದೊಂದಿಗೆ ಅವರ ಆಧರ್ಶ ಜೀವನವನ್ನು ಗ್ರಂಥದ ರೂಪದಲ್ಲಿ ಬಿಡಗಡೆಗೊಳಿಸಿರುವುದು ಶ್ಲಾಘನೀಯವಾಗಿದೆ ಎಂದರು.           

ಸಾನಿಧ್ಯ ವಹಿಸಿ ಆಶೀರ್ವಚ ನೀಡಿದ ಹಾಲಕೆರೆ ಅನ್ನದಾನೇಶ್ವರ ಸಂಸ್ಥಾನಮಠದ ಮುಪ್ಪಿನ ಬಸವಲಿಂಗ ಸ್ವಾಮೀಜಿ ಮಾತನಾಡಿ, ಅಧಿಕಾರ, ಸ್ಥಾನ, ಹಣ, ಅಂತಸ್ತು ಯಾವುದು ಶಾಶ್ವತವಲ್ಲ. ಸಮಾಜದ ಏಳಿಗೆಗಾಗಿ ಶ್ರಮಿಸಿದ ಸಾಧಕರನ್ನು ಸಮಾಜ ಎಂದಿಗೂ ಸ್ಮರಿಸುತ್ತದೆ ಹಾಗಾಗಿ ಅವರ ಹೆಸರು ಶಾಶ್ವತವಾಗಿ ಇರುತ್ತದೆ. ಅದೇ ಮಾರ್ಗದಲ್ಲಿ ನಡೆದು ನಿಸ್ವಾರ್ಥದಿಂದ ತಮ್ಮನ್ನು ಸಮರೆ​‍್ಣ ಮಾಡಿಕೊಂಡಿದ್ದಾರೆ. ಪ್ರಾಮಾಣಿಕತೆ ಮತ್ತು ನೇರ-ನಿಷ್ಠುರ ಮನೋಭಾವದಿಂದ ಸುತ್ತ ಹತ್ತು ಹಳ್ಳಿಯ ಜನರ ಮನಸ್ಸಿನಲ್ಲಿ ಮನೆ ಮಾಡಿರುವ ವೈದ್ಯರಾಗಿದ್ದಾರೆ ಎಂದರು.           ನರೇಗಲ್ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯರು ಮಾತನಾಡಿ, ಯುವಕರು ಹಿರಿಯರಿಗೆ ಗೌರವಸುವುದರಿಂದ ಅನೇಕ ಫಲಗಳು ಸಿಗುತ್ತವ, ಸಂಸ್ಕಾರ ಭಾವನೆಗಳು ಮೂಡುತ್ತವೆ ಹಾಗೂ ಆದರ್ಶ ಮೌಲ್ಯಗಳು ನಿಜ ಜೀವನದಲ್ಲಿ ಅಳವಡಿಕೆಯಾಗುತ್ತವೆ ಅದಕ್ಕಾಗಿ ಹಿರಿಯರನ್ನು ಗೌರವಿಸುವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದರು.           

ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ದಿ ಸಮಿತಿ ಉಪಾಧ್ಯಕ್ಷರಾದ ಡಿ. ಆರ್‌. ಪಾಟೀಲಕ್ಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರೋಣ ಗುಲಗಂಜಿ ಮಠದ ಗುರುಪಾದ ಸ್ವಾಮೀಜಿ, ನರೇಗಲ್ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯರ ಸ್ವಾಮೀಜಿ, ನಿಡಗುಂದಿಕೊಪ್ಪ ಶಾಖಾ ಶಿವಯೋಗ ಮಂದಿರದ ಅಭಿನವ ಚನ್ನಬಸವ ಸ್ವಾಮೀಜಿ ಹಾಗೂ ಸಿದ್ದನಕೊಳ್ಳದ ನಿರಂತರ ದಾಸೋಹ ಮಠದ ಡಾ. ಶಿವಕುಮಾರ ಸ್ವಾಮೀಜಿಯವರು ಹಾಗೂ ವಿಧಾನ ಪರಿಷತ್ ಸದಸ್ಯ ಎಸ್‌. ವಿ. ಸಂಕನೂರ ಮಾತನಾಡಿದರು.  ನಂತರ   ಬಾಗಲಕೋಟೆಯ ಅನಂತ ಕುಲಕರ್ಣಿ ಹಾಗೂ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ಮತ್ತು ಡಾ. ಜಿ. ಕೆ. ಕಾಳೆಯವರಿಗೆ ಸಂಘ ಸಂಸ್ಥೆಗಳಿಂದ ಮತ್ತು ಅಭಿಮಾನಿಗಳಿಂದ ಗೌರವ ಸನ್ಮಾನಗಳು ನಡೆದವು.           ಈ ವೇಳೆ ಭಾಗ್ಯವತಿ ಅನಿಲ ಕಾಳೆ, ರವೀಂದ್ರನಾಥ ದೊಡ್ಡಮೇಟಿ, ಸಿದ್ದಣ್ಣ ಬಂಡಿ, ಪ್ರಕಾಶ ಕುಲಕರ್ಣಿ, ಮಲ್ಲಯ್ಯ ಚಪ್ಪನಮಠ, ವಿದ್ಯಾಧರ ದೊಡ್ಡಮನಿ ಇದ್ದರು.