ಸಮಾಜಮುಖಿ ಕಾರ್ಯಗಳು ಉತ್ತಮವಾದ ಭಾಂದವ್ಯ ಬೆಸೆಯುತ್ತವೆ: ಡಾ. ಅಜಿತ ಪ್ರಸಾದ

ಸಮಾಜಮುಖಿ ಕಾರ್ಯಗಳು ಉತ್ತಮವಾದ ಭಾಂದವ್ಯ ಬೆಸೆಯುತ್ತವೆ: ಡಾ. ಅಜಿತ ಪ್ರಸಾದ Social work builds good relationships: Dr. Ajit Prasad

ಸಮಾಜಮುಖಿ ಕಾರ್ಯಗಳು ಉತ್ತಮವಾದ ಭಾಂದವ್ಯ ಬೆಸೆಯುತ್ತವೆ: ಡಾ. ಅಜಿತ ಪ್ರಸಾದ 

 ಧಾರವಾಡ 25: ಸಮಾಜದಲ್ಲಿ ಹಿಂದುಳಿದವರಿಗೆ, ವಿಶೇಷಚೇತನರಿಗೆ ಸಹಾಯ ಮಾಡಿದರೇ ಭಗವಂತನ ಪೂಜೆ ಸಲ್ಲಿಸಿದಷ್ಟೆ ಪುಣ್ಯ ನಮಗೆ ದೊರೆಯುತ್ತದೆ. ಪ್ರಾಣಿಗಳಿಗೂ ಭಾವನೆಗಳಿವೆ, ಪ್ರೀತಿ, ಪ್ರೇಮ ವಿಶ್ವಾಸದಿಂದ ಸ್ಪಂದಿಸಿದರೆ, ಅವು ಕೂಡ ಮಾನವರೊಂದಿಗೆ ಸಹಬಾಳ್ವೆಯಿಂದ ಬದುಕುತ್ತವೆ. ದಾನ-ಧರ್ಮಗಳಂತಹ ಒಳ್ಳೆಯ ಕಾರ್ಯಗಳನ್ನು ಮಕ್ಕಳಲ್ಲಿ ಈಗಿನಿಂದಲೇ ಬೆಳೆಸಬೇಕು. ಮುಂದಿನ ದಿನಮಾನಗಳಲ್ಲಿ ಮಕ್ಕಳು ಉತ್ತಮ ಪ್ರಜೆಗಳಾಗುವಲ್ಲಿ ಸಹಕಾರಿಯಾಗುತ್ತವೆ ಎಂದು ಜೆ.ಎಸ್‌.ಎಸ್ ನ ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದರವರು ಹೇಳಿದರು. ಅವರು ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ 58ನೆ ಪಟ್ಟಾಭಿಷೇಕದ ವರ್ಧಂತ್ಯುತ್ಸವದ ನಿಮಿತ್ತ ಜೆ.ಎಸ್‌.ಎಸ್ ಶ್ರೀ ಮಂಜುನಾಥೇಶ್ವರ ಸಿ.ಬಿ.ಎಸ್‌.ಇ ಶಾಲೆ, ಪೀಪಲ್ಸ್‌ ಪಾರ್ ಎನಿಮಲ್ಸ್‌ ಸಂಸ್ಥೆ ಹಾಗೂ ಆರೂಢಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಧಾರವಾಡದ ವಿದ್ಯಾಗಿರಿಯ ಜೆ.ಎಸ್‌.ಎಸ್ ಉತ್ಸವ ಸಭಾಭವನದಲ್ಲಿ ಆಯೋಜಿಸಲಾಗಿದ್ದ ವಿಶೇಷ ಚೇತನರಿಗೆ ಮತ್ತು ಪ್ರಾಣಿಗಳಿಗೆ ಅವಶ್ಯವಿರುವ ಆಹಾರ ಪದಾರ್ಥ ಹಾಗೂ ಬೆಚ್ಚನೆ ಹೊದಿಕೆಗಳ ವಿತರಣಾ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು. ಇಂತಹ ಕಾರ್ಯಗಳು ಸಾಫಲ್ಯವಾಗಬೇಕಾದರೆ ಮಕ್ಕಳಿಗೆ ನೈತಿಕ ಶಿಕ್ಷಣ ದೊರೆಯಬೇಕು. ಆರ್ಥಿಕ ಸಂಕಷ್ಟದಲ್ಲಿದ್ದ ಜೆೆ.ಎಸ್‌.ಎಸ್‌. ಸಂಸ್ಥೆಯನ್ನು ವಹಿಕೊಂಡು ಪೂಜ್ಯರು ಮಾಡಿದ ಶೈಕ್ಷಣಿಕ ಸಾಧನೆ ಅಪಾರವಾದದ್ದು. ಜೆ.ಎಸ್‌.ಎಸ್ ನಲ್ಲಿ ಕೆ.ಜಿ ಯಿಂದ ಪಿ.ಜಿಯವೆರೆಗೆ ಶಿಕ್ಷಣವನ್ನು ಪಡೆದು ಉದ್ಯೋಗವನ್ನು ಸಹ ಇಲ್ಲಿಂದಲೇ ಪಡೆದಕೊಂಡು ಹೊಗಬಹದಾದ ಭಾಗ್ಯ ಉತ್ತರ ಕರ್ಣಾಟಕದ ಭಾಗದ ಜನರಿಗೆ ದೊರೆತಿದೆ ಎಂದರೇ, ಅದು ನಮ್ಮ ಪುಣ್ಯವೇ ಸರಿ. ಪೂಜ್ಯರಿಗೆ ಧರ್ಮಸ್ಥಳ ಧರ್ಮಭೂಮಿಯಾದರೆ, ಧಾರವಾಡ ಕರ್ಮಭೂಮಿಯಾಗಿದೆ. ಗ್ರಾಮಾಭಿವೃದ್ಧಿ ಸಂಸ್ಥೆಗಳ ಮೂಲಕ ಗ್ರಾಮೀಣ ಭಾಗದ ಜನರಿಗೆ ಶಿಕ್ಷಣ, ಉದ್ಯೋಗ, ವ್ಯವಸಾಯ ಹಾಗೂ ಸಾಮಾಜಿಕ ಕೆಲಸಗಳ ಮೂಲಕ ನೆರವಾಗಿ ಬದುಕು ಕಟ್ಟಿಕೊಟ್ಟಿದ್ದಾರೆ. ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಶಿಷ್ಯವೇತನ ನೀಡುವದರ ಮೂಲಕ ಅವರ ವಿದ್ಯಾರ್ಜನೆ ನಿಲ್ಲದಂತೆ ಕಾಳಜಿವಹಿಸಿದ್ದಾರೆ. ರುಡಸೆಟ್ ಸಂಸ್ಥೆಗಳ ಮೂಲಕ ನಿರುದ್ಯೋಗಿ ಯುವಕ-ಯುವತಿಯರಿಗೆ ಕೌಶಲ್ಯಧಾರಿತ ತರಬೇತಿ ನೀಡಿ, ಸ್ವ-ಉದ್ಯೋಗ ಸೃಷ್ಠಿಸಿಕೊಳ್ಳಲು ಅನುಕೂಲ ಮಡಿಕೊಟ್ಟಿದ್ದಾರೆ. ಪೂಜ್ಯ ಹೆಗ್ಗಡೆಯವರ ಆಶೀರ್ವಾದ ಮತ್ತು ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಜೆ.ಎಸ್‌.ಎಸ್ ಸಂಸ್ಥೆಗಳಲ್ಲಿ ಮಕ್ಕಳಲ್ಲಿ ಸದಾ ನೈತಿಕ ಮೌಲ್ಯಗಳನ್ನು ಕಲಿಸುತ್ತಿದ್ದು, ಮಕ್ಕಳಲ್ಲಿ ದಾನ-ಧರ್ಮಗಳಂತಹ ವಿಚಾರಗಳು ಮಕ್ಕಳಲ್ಲಿ ನೆಲೆನಿಂತಿವೆ ಎಂದರೇ ತಪ್ಪಾಗಲಾರದು. ನಮ್ಮ ಸಿ.ಬಿ.ಎಸ್ ಶಾಲೆ ಇಂತಹ ಹಲವಾರು ಸಮಾಜಮುಖಿ ಕಾರ್ಯಗಳನ್ನು ಆಯೋಜಿಸುತ್ತಾ ಬಂದಿದ್ದು, ಕೆಲವು ಕಾರ್ಯಕ್ರಮಗಳು ಇಂಡಿಯಾ ಬುಕ್ ಆಫ್ ರೆಕಾರ್ಡ್ಸನಲ್ಲಿ  ದಾಖಲೆ ಬರೆದಿರುವುದು ಗುಣಮಟ್ಟದ ಶಿಕ್ಷಣಕ್ಕೆ ಕೈಗನ್ನಡಿಯಾಗಿವೆ ಎಂದು ಹೇಳಿದರು. 

ಪೀಪಲ್ಸ್‌ ಫಾರ್ ಎನಿಮಲ್ ನ ನಿದೇಶಕರಾದ ಶ್ರೀ ವಿಕ್ರಮ ಸಿಂಗ್ ಕಪೂರ್ ಮಾತನಾಡಿ, ಮೂಖ ಪ್ರಾಣಿಗಳಿಗೂ ಕೂಡ ಅದರದೇ ಆದ ಜೀವನವಿದೆ. ಅವುಗಳಿಗೆ ತನ್ನ ಕಷ್ಟಗಳನ್ನು ಹೇಳಿಕೊಳ್ಳಲು ಮಾತು ಬರುವದಿಲ್ಲ ಬುದ್ಧಿ ಜೀವಿಯಾದ ಮನುಷ್ಯರು ಅವುಗಳ ಭಾವನೆಗಳಿಗೆ, ಕಷ್ಟಗಳಿಗೆ ಸ್ಪಂದಿಸಬೇಕು. ಆಗ ಅವುಗಳು ಕೂಡ ನಮ್ಮೋಂದಿಗೆ ಸಹಕರಿಸುತ್ತವೆ. ಅವುಗಳಿಗೆ ಅಗತ್ಯವಿರುವ ಓಷದೋಪಚಾರ, ಸೂರು ಹಾಗೂ ಆಹಾರದ ಅಗತ್ಯತೆಯನ್ನು ಒದಗಿಸುವ ನಿಟ್ಟಿನಲ್ಲಿ ಪೀಪಲ್ಸ್‌ ಫಾರ್ ಎನಿಮಲ್ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಈ ಸಮಾಜಮುಖಿ ಕಾರ್ಯಕ್ಕೆ ಜೆ.ಎಸ್‌.ಎಸ್ ಸಿ.ಬಿ.ಎಸ್‌.ಇ ಶಾಲೆ ಸಹಾಯ ಸಹಕಾರ ನೀಡುತ್ತಾ ಬಂದಿದೆ. ಮಕ್ಕಳು ಸ್ವಯಂ ಪ್ರೇರಿತರಾಗಿ ಪ್ರಾಣಿಗಳಿಗೆ ಅಗತ್ಯವಿರುವ ಆಹಾರ ಮತ್ತು ಓಷಧಿಗಳನ್ನು ನೀಡುತ್ತಿರುವದನ್ನು ನೋಡಿದರೇ ಪೂಜ್ಯ ಹೆಗ್ಗಡೆಯವರ ಸಂಸ್ಥೆಗಳು ಯಾವಾಗಲೂ ಸಮಾಜ ಹಿತವನ್ನು ಬಯಸುತ್ತವೆ ಎಂಬುದು ತಿಳಿಯುತ್ತದೆ ಎಂದರು. ಆರೂಢಾ ಸಂಸ್ಥೆಯ ಸಂಸ್ಥಾಪಕರು ನಾಗರಾಜ ಹೂಗಾರವರು ಮಾತನಾಡಿ, ಆರೂಢಾ ಸಂಸ್ಥೆ 1500 ಜನರ ತಂಡದೊಮದಿಗೆ ಕೆಲಸ ಮಾಡುತ್ತಿದ್ದು, ಸಮಾಜದಲ್ಲಿರು ನಿರಾಶ್ರಿತರಾಗಿರುವ ಹಾಗೂ ಸಂಕಷಟದಲ್ಲಿರುವ ವಿಶೇಷ ಚೇತನರನ್ನು ಹುಡುಕಿ ಅವರಿಗೆ ನೆಮ್ಮದಿಯ ಜೀವನ ಕಟ್ಟಿಕೊಡುವಲ್ಲಿ ಶ್ರಮವಹಿಸುತ್ತಿದೆ. ಜೆ.ಎಸ್‌.ಎಸ್ ಸಂಸ್ಥೆ ನಮ್ಮೊಂದಿಗೆ ಕೈ ಜೋಡಿಸಿರುವುದು ನಮಗೆ ಇನ್ನಷ್ಟು ಬಲ ತಂದಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಶಾಲೆಯ ಪ್ರಾಚಾರ್ಯೆ ಶ್ರೀಮತಿ ಸಾಧನಾ ಎಸ್ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಪೂಜ್ಯರ ಒಳ್ಳೆಯ ಕಾರ್ಯಗಳ ಪ್ರೇರಣೆಯಿಂದ ಪ್ರತಿ ವರ್ಷ ನಮ್ಮ ವಿದ್ಯಾರ್ಥಿಗಳು ಸಮಾಜದ ಬಡ ಜನರಿಗೆ, ಪ್ರಾಣಿ-ಪಕ್ಷಿಗಳಿಗೆ, ಅನಾಥ ಮಕ್ಕಳಿಗೆ, ಆಶ್ರಮಗಳಿಗೆ ಅಗತ್ಯವಿರುವ ವಸ್ತುಗಳನ್ನು ದಾನವಾಗಿ ನೀಡುತ್ತಾ ಬಂದಿದ್ದಾರೆ. ಇಂತಹ ಕಾರ್ಯಗಳಿಗೆ ಸಂಸ್ಥೆಯ ಕಾರ್ಯದರ್ಶಿಗಳು ಸದಾ ಪ್ರೊತ್ಸಾಹ ನೀಡುತ್ತಿದ್ದು, ಅವರಿಗೆ ಶಾಲೆಯ ಪರವಾಗಿ ಧನ್ಯವಾದ ತಿಳಿಸಿದರು.  ಪ್ರಾರಂಭದಲ್ಲಿ ಕು. ದೀಕ್ಷಾ ಮತ್ತು ಅಮೃತಾ ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಶುಭಾಂಗಿ ಲೋಖಂಡೆ, ಸುನಿತಾ ದೇವಗಿರಿ, ಶ್ಯಾಮಲಾ ವಿ. ಪೀಪಲ್ಸ್‌ ಫಾರ್ ಎನಿಮಲ್ ಸಂಸ್ಥೆ ಮತ್ತು ಆರೂಢಾ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ವಾಣಿಶ್ರೀ ಕಾರ್ಯಕ್ರಮ ನಿರೂಪಿಸಿದರು.