ಧರ್ಮ ಜಾಗೃತಿ, ಉತ್ತಮ ಸಂಸ್ಕಾರಗಳನ್ನು ತಿಳಿಸಿಕೊಡುವುದರ ಜೊತೆಗೆ ಸಾಮಾಜಿಕ ಸುಧಾರಣೆ
Social reform along with religious awareness and teaching good morals
ಯಲಬುರ್ಗಾ 24: ಧರ್ಮ ಜಾಗೃತಿ, ಉತ್ತಮ ಸಂಸ್ಕಾರಗಳನ್ನು ತಿಳಿಸಿಕೊಡುವುದರ ಜೊತೆಗೆ ಸಾಮಾಜಿಕ ಸುಧಾರಣೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮಠಗಳ ಸಾಮಾಜಿಕ ಕಾಳಜಿಯು ಅನುಕರಣೀಯ ಎಂದು : ಶ್ರೀ ಮ.ನಿ.ಪ್ರ. ಶಿವಬಸವ ಮಹಾಸ್ವಾಮಿಗಳು ಅಕ್ಕಿ ಆಲೂರ-ವಿರಕ್ತಿಮಠ ಶ್ರೀಗಳು ಹೇಳಿದರು. ಪಟ್ಟಣದ ಶ್ರೀಧರ ಮುರಡಿ ಹಿರೇಮಠದ ಷ.ಬ್ರ.ಬಸವಲಿಂಗೇಶ್ವರ ಸ್ವಾಮೀಜಿಗಳ 24 ನೇ ವರ್ಷದ ಪೀಠಾರೋಹಣ ಸಮಾರಂಭ ವೈಭವದಿಂದ ಪಟ್ಟಣದ ಮೊಗ್ಗಿ ಬಸವೇಶ್ವರ ದೇವಸ್ಥಾನ-ಬಸವಲಿಂಗೇಶ್ವರ ಗೋ-ಶಾಲೆ ಅವರಣದಲ್ಲಿ ಐದನೇ ದಿನದ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದ ಶ್ರೀಗಳು, ಶೈಕ್ಷಣಿಕವಾಗಿ, ಧಾರ್ಮಿಕವಾಗಿ, ಸಂಗೀತ, ಸಾಹಿತ್ಯ ಮತ್ತು ಸಂಸ್ಕೃತಿಯಲ್ಲಿ ವಿಶೇಷ ಕೊಡುಗೆ ನೀಡುತ್ತಿರುವ ಮಠಗಳು ಸಮುದಾಯ ಸಂಘಟನೆಯಲ್ಲಿ ಸಾಕಷ್ಟು ಬದಲಾವಣೆ ತರುವ ಕೆಲಸ ಮಾಡುತ್ತಿವೆ.
ಭಕ್ತರಿಂದ ಹಾಗೂ ಭಕ್ತರಿಗಾಗಿಯೇ ಇರುವ ಮಠಗಳು ಶ್ರದ್ಧಾ ಕೇಂದ್ರಗಳಾಗಿ, ಧಾರ್ಮಿಕ ಚಟುವಟಿಕೆಗಳ ವೇದಿಕೆಗಳಾಗಿ ರೂಪುಗೊಂಡಿವೆ. ಹಾನಗಲ್ಲ ಗುರುಕುಮಾರ ಶಿವಯೋಗಿಗಳ ತತ್ವಗಳನ್ನು ಹಾಗೂ ಅವರ ಸತ್ಯ ಸಂಕಲ್ಪವನ್ನು ಶ್ರೀಧರ ಮುರಡಿ ಹಿರೇಮಠದ ಒಡೆಯರು ಅಳವಡಿಸಿಕೊಂಡು ಜೀವನ ಸಾಗಿಸುವ ಏಕೈಕ ಶ್ರೀಗಳಾಗಿದ್ದಾರೆ. ಶ್ರೀಮಠದ ಪೀಠಾಧ್ಯಕ್ಷರಾದ ಶ್ರೀ ಷ ಬ್ರ ಬಸವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಅನೇಕ ಕೃಷಿ ಚಟುವಟಿಕೆಗಳಲ್ಲಿ ಬೆರೆಯುವ ಮೂಲಕ ಕೃಷಿ ಪ್ರೇಮಿಗಳಾಗಿ , ವಿವಿಧ ತಳಿಯ ಪ್ರಾಣಿ -ಪಕ್ಷಿಗಳನ್ನು ಸಾಕುವ ಮೂಲಕ ಪ್ರಾಣಿಪ್ರಿಯರಾಗಿ, ಯೋಗದಲ್ಲಿ ಕಠಿಣ ಯೋಗ ಆಸನಗಳನ್ನು ಮಾಡುವ ಮೂಲಕ ಯೋಗಪಟುಗಳಾಗಿ ಸಾಧನೆ ಮಾಡಿದ ಅಪರೂಪದ ಪರಮ ಪೂಜ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.
ನಂತರ ಸಾನಿಧ್ಯವನ್ನು ಶ್ರೀ ಷ.ಬ್ರ. ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಅರಳಲೇ ಹಿರೇಮಠ-ಮಂಗಳೂರು, ಶ್ರೀ ಮ.ನಿ.ಪ್ರ. ಡಾಽಽ ಮಹಾದೇವ ಮಹಾಸ್ವಾಮಿಗಳು ಮುಂಡರಗಿ ಶ್ರೀ ಅನ್ನದಾನೀಶ್ವರ ಶಾಖಾಮಠ, ಕುಕನೂರು ಶ್ರೀಗಳು, ಶ್ರೀ ಷ.ಬ್ರ. ಡಾಽಽ ಗುರುಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳು ಭೂಕೈಲಾಸ ಮೇಲುಗದ್ದಿಗೆ ಹಿರೇಮಠ ಸಂಸ್ಥಾನ ಚಿಕ್ಕಮ್ಯಾಗೇರಿ-ಇಟಗಿ, ಶ್ರೀಗಳು ಸಾನಿಧ್ಯ ವಹಿಸಿಕೊಂಡು ಆಶೀರ್ವಚನ ನೀಡಿದರು. ಈ ವೇಳೆ ಶಿವಪ್ಪ ಹುಬ್ಬಳ್ಳಿ, ಈರಣ್ಣ ಹುಬ್ಬಳ್ಳಿ, ಸಂತೋಷಿಮಾ ವೆಂಕಣ್ಣ ಜೋಶಿ, ಬಸವರಾಜ ಗುಳಗುಳ್ಳಿ, ಸುರೇಶ ಹೊಸಳ್ಳಿ, ಚನ್ನಬಸನಗೌಡ ತಳುವಗೇರಿ , ವಿಜಯಕುಮಾರ ಜಕ್ಕಲಿ, ಮಹೇಶ ಹುಬ್ಬಳ್ಳಿ, ಬಸವರಾಜ ಕೊಳ್ಳಿ, ಕಲ್ಲೇಶ ಕರಮುಡಿ, ಅಶೋಕ ರಾಯಭಾಗಿ, ಶಿವುಕುಮಾರ್ ಸಾದರ್, ಮುತ್ತುರಾಜ ಬಂಡಿ, ಸೇರಿ ಅಪಾರ ಭಕ್ತರು ಇದ್ದರು. ನಂತರ 260-263ನೇ ತಲಭಾರ ಜರಗಲಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 