ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ನಡೆ ವಸತಿ ನಿಲಯಗಳ ವಾಸ್ತವ್ಯದ ಕಡೆಗೆ

ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ನಡೆ ವಸತಿ ನಿಲಯಗಳ ವಾಸ್ತವ್ಯದ ಕಡೆಗೆ Social Welfare Department officials' move towards dormitory accommodation

              ಗದಗ 12:  ದಿನಾಂಕ:08-01-2026 ರಂದು ಸಮಾಜ ಕಲ್ಯಾಣ ಇಲಾಖೆ ಮತ್ತು ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಡಾ.ಬಿ.ಆರ್ ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ವಸತಿ ನಿಲಯ ಗದಗ, ಈ  ವಸತಿ ನಿಲಯದಲ್ಲಿ ವಾಸ್ತವ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.  ಎಲ್ಲರೂ ಸಹ ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಮಾನಸಿಕ ವಿಕಸನ ಕುರಿತಂತೆ ತಮ್ಮ ತಮ್ಮ  ಅತ್ಯಮೂಲ್ಯ ಸಲಹೆ ಸೂಚನೆಗಳನ್ನು ನೀಡಿದರು. ಸದರಿ ಕಾರ್ಯಕ್ರಮ ವಿದ್ಯಾರ್ಥಿಗಳ ಸರ್ವೋತೋಮೂಖ ವಿಕಸನಕ್ಕೆ ಕಾರಣವಾಗುವಂತೆ ಎಲ್ಲ ವಸತಿ ನಿಲಯಗಳಲ್ಲಿಯೂ ಸಹ ಮುಂದಿನ ಹಂತದಲ್ಲಿ ಜರುಗಿಸಬೇಕೆಂದು ಆಶಿಸಿದರು.

             ಎಸ್‌ಎಸ್‌ಎಲ್‌ಸಿ ಮಕ್ಕಳ ವಾರ್ಷಿಕ ಪರೀಕ್ಷೆ ಕುರಿತು ಮಾನಸಿಕ ಸ್ಥೈರ್ಯಯವನ್ನು ಸಹ ತುಂಬಲಾಯಿತು.ಎಲ್ಲ ವಿದ್ಯಾರ್ಥಿಗಳೊಂದಿಗೆ ಸಹ ಭೋಜನವನ್ನು ಮಾಡಲಾಯಿತು. ಎಲ್ಲಾ ವಿದ್ಯಾರ್ಥಿಗಳು ಉತ್ತಮ ಫಲಿತಾಂಶಧ ಪಡೆದು ತಮ್ಮ ಜೀವನದಲ್ಲಿ  ಯಶಸ್ವಿಯಾಗಲಿ ಎಂಬುದನ್ನು ಮನವರಿಕೆ ಮಾಡುವ ನಿಟ್ಟಿನಲ್ಲಿ ಸದರಿ ಕಾರ್ಯಕ್ರಮ ಉತ್ತಮ ವೇದಿಕೆಯಾಗಿದೆ, ಮುಂದಿನ ದಿನಗಳಲ್ಲಿ ಎಲ್ಲ ವಸತಿ ನಿಲಯಗಳಲ್ಲಿಯೂ ಸಹ ಅಧಿಕಾರಿಗಳ ನಡೆ ವಸತಿ ನಿಲಯಗಳ ವಾಸ್ತವ್ಯದ ಕಡೆಗೆ ಎಂಬ ಕಾರ್ಯಕ್ರಮಗಳನ್ನು ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗುವುದು, ಸದರಿ ಕಾರ್ಯಕ್ರಮವನ್ನು ಆಯೋಜನೆ ಮಾಡಿದ ಇಲಾಖೆಯ ಸಹಾಯಕ ನಿರ್ದೇಶಕರಾದ ಗೋಪಾಲ  ಲಮಾಣಿ ಮತ್ತು ನಿಲಯ ಮೇಲ್ವಿಚಾರಕರಾದ ಅಜರೇಸಾಭ್ ಹರಳಿಹಳ್ಳಿ ಮತ್ತು ನಿಲಯ ಸಿಬ್ಬಂದಿಗಳಿಗೆ ಉಪನಿರ್ದೇಶಕರಾದ ಶ್ರೀಮತಿ ಡಾ. ನಂದಾ ಹಣಬರಟ್ಟಿ ಇವರು ಅಭಿನಂದನೆಗಳನ್ನು ತಿಳಿಸಿದರು. 

             ಸದರಿ ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಶ್ರೀಮತಿ ಡಾ. ನಂದಾ ಹಣಬರಟ್ಟಿ,  ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ  ಮಲ್ಲಯ್ಯ ಸಿ ಕೊರವನವರ,  ಕ್ಷೇತ್ರ ಶಿಕ್ಷಾಣಾಧಿಕಾರಿಗಳ ಕಾರ್ಯಾಲಯದ  ಅಧಿಕಾರಿಗಳು, ದ್ವಾರಕಾಮಹಿ ಫೌಂಡೆಶನ್‌ನ ಸಿಬ್ಬಂದಿಗಳು,   ಗೋಪಾಲ ಲಮಾಣಿ, ಸಹಾಯಕ ನಿರ್ದೇಕಶಕರು ಸಮಾಜ ಕಲ್ಯಾಣ ಇಲಾಖೆ ಗದಗ, ಕಛೇರಿ ಅಧೀಕ್ಷರಾದ ಶ್ರೀಮತಿ ಮಂಜುಳಾ ಎನ್,   ಮತ್ತಣ್ಣ ಸಂಕನೂರ, ಸದರಿ ನಿಲಯದ ನಿಲಯ ಮೇಲ್ವಿಚಾರಕರಾದ   ಹರಜೇಸಾಭ್ ಹರಳಿಹಳ್ಳಿ, ವಿವಿದ ನಿಲಯಗಳ ನಿಲಯ ಮೇಲ್ವಿಚಾರಕರರಾದ ಶ್ರೀಮತಿ ವಿದ್ಯಾ ಬೆಳವಣಿಕೆ, ಶ್ರೀಮತಿ ಸುಜಾತಾ ಹಳ್ಳಿ, ಮತ್ತು ಕಛೇರಿಯ ಸಿಬ್ಬಂದಿಗಳು ಹಾಜರಿದ್ದರು.