ಗುಣಾತ್ಮಕ ಶಿಕ್ಷಣಕ್ಕೆ ಮಾದರಿಯಾದ ಸ್ನೇಹ ಶಿಕ್ಷಣ ಸಂಸ್ಥೆ : ದೊಡ್ಡಗೌಡ್ರ
Sneha Educational Institute a model for quality education: Dodda Gowdra
ಶಿಗ್ಗಾವಿ 29: ಗ್ರಾಮೀಣ ಪ್ರದೇಶಗಳಲ್ಲಿ ಗುಣಾತ್ಮಕ ಶಿಕ್ಷಣಕ್ಕೆ ಮಾದರಿಯಾದ ಸಂಸ್ಥೆ ಹೊಸುರಿನ ಸ್ನೇಹ ಶಿಕ್ಷಣ ಸಂಸ್ಥೆ ಎಂದು ಸಂಸ್ಥೆ ಅಧ್ಯಕ್ಷ ಈರನಗೌಡ ದೊಡ್ಡಗೌಡ್ರ ಹೇಳಿದರು.ತಾಲೂಕಿನ ಹೊಸುರ ಗ್ರಾಮದ ಸ್ನೇಹ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಸರಸ್ವತಿ ಇಂಗ್ಲೀಷ್ ಮಾಧ್ಯಮದ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು 2019 ರಲ್ಲಿ 35 ವಿಧ್ಯಾರ್ಥಿಗಳಿಂದ ಪ್ರಾರಂಭವಾದ ಈ ಶಾಲೆ ಇಂದು 210 ವಿದ್ಯಾರ್ಥಿಗಳಿಂದ ತಾಲೂಕಿನಲ್ಲಿ ಉತ್ತಮ ಶಿಕ್ಷಣ ಸಂಸ್ಥೆಯಾಗಿ ಹೊರಹೊಮ್ಮಿದೆ ಅಲ್ಲದೇ ಪರಿಮಣಾತ್ಮಕ ಶಿಕ್ಷಣಕ್ಕೆ ಆದ್ಯತೆ ನೀಡಿದೆ ಎಂದರು.ಸಾನಿಧ್ಯವಹಿಸಿ ಕುಮಾರಪಟ್ಟಣಂ ಪುಣ್ಯ ಕೋಟಿ ಮಠ ಜಗದೀಶ್ವರ ಮಹಾಸ್ವಾಮಿಗಳು ಮಾತನಾಡಿ ಶಿಕ್ಷಣವಂಚಿತರಿಗೆ ಶಿಕ್ಷಣ ಕೊಟ್ಟು ಜಗತ್ತಿನಲ್ಲಿ ಮಹಾ ಮೇಧಾವಿಗಳಾಗಿ ಸರ್ವರಿಗೂ ಶಿಕ್ಷಣದ ನ್ಯಾಯವನ್ನು ಒದಗಿಸಿದ ಕೀರ್ತಿ ಡಾ. ಅಂಬೇಡ್ಕರವರಿಗೆ ಸಲ್ಲುತ್ತದೆ ಅಲ್ಲದೇ ಇಲ್ಲಿಯ ವಿಧ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸುತ್ತಾರೆ ಹಾಗೂನೂರಾರು ಮಕ್ಕಳ ಬದುಕಿನ ಭರವಸೆ ಮೂಡಿಸುತ್ತಿರುವ ಈ ಸಂಸ್ಥೆ ನಾಡಿನಲ್ಲಿ ವೈಶಿಷ್ಟ್ಯ ಪೂರ್ಣವಾಗಿ ಬೆಳೆದು ಬೆಳಕಾಗಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ . ಗ್ರಾ. ಪಂ. ಅಧ್ಯಕ್ಷೆ ರಾಜೇಶ್ವರಿ ಲಮಾಣಿ, ಮಾಜಿ ಅಧ್ಯಕ್ಷ ಗ್ರಾ.ಪಂ. ಅಧ್ಯಕ್ಷ ಅಣ್ಣಪ್ಪ ಲಮಾಣಿ, ಸಿ.ಹೆಚ್.ಹಿತ್ತಲಮನಿ, ಅನಂತಪ್ಪ ಧಾರವಾಡ, ನಿಂಗಪ್ಪ ಹೂಗಾರ, ಅನೀಲಕುಮಾರ ಅತ್ತಿಗೇರಿ, ಕ್ಯಾತಪ್ಪ ಕೋಟಣ್ಣವರ, ಚನ್ನಬಸಪ್ಪ ದೇವಗೇರಿ, ಕಾಜೇಸಾಬ ಮುಲ್ಲಾನವರ, ರುದ್ರ್ಪ ಅದರಗುಂಚಿ, ಗಂಗಾಧರ ಕಮ್ಮಾರ, ಚಂದನಗೌಡ ಪಾಟೀಲ, ಶಿವಲಿಂಗಪ್ಪ ಚಕ್ರಸಾಲಿ ಸೇರಿದಂತೆ ಪಾಲಕರು, ಪೋಷಕರು, ಗ್ರಾಮಸ್ಥರು ಉಪಸ್ಥಿತರಿದ್ದರು. ನಂತರ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 