ಎಸ್.ಜಿ.ಬಿ.ಐ.ಟಿಯಲ್ಲಿ ಸ್ಮಾರ್ಟ ಇಂಡಿಯಾ ಹ್ಯಾಕಥಾನ್ ಉದ್ಘಾಟನೆ
Smart India Hackathon inaugurated at SGBIT
ಎಸ್.ಜಿ.ಬಿ.ಐ.ಟಿಯಲ್ಲಿ ಸ್ಮಾರ್ಟ ಇಂಡಿಯಾ ಹ್ಯಾಕಥಾನ್ ಉದ್ಘಾಟನೆ
ನಾವಿನ್ಯತೆ, ಪ್ರಾಯೋಗಿಕ ಸಮಸ್ಯಾ ಪರಿಹಾರಕ್ಕೆ ವೇಗವರ್ಧಕವಾಗಿ ಹ್ಯಾಕಥಾನ್ ಕಾರ್ಯನಿರ್ವಹಣೆ: ಡಾ. ಪಟಗುಂದಿ
ಬೆಳಗಾವಿ 24: ಸ್ಮಾರ್ಟ ಇಂಡಿಯಾ ಹ್ಯಾಕಥಾನ್ ಎಂಬುವುದು ದೈನಂದಿನ ಜೀವನದಲ್ಲಿ ಎದುರಿಸುವ ಕೆಲವು ಪ್ರಮುಖ ಸವಾಲುಗಳನ್ನು ಪರಿಹರಿಸುವಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳಲು ವಿನ್ಯಾಸಗೊಳಿಸಲಾದ ಪ್ರಮುಖ ರಾಷ್ಟ್ರವ್ಯಾಪಿ ಉಪಕ್ರಮವಾಗಿದೆ. ತಂತ್ರಜ್ಞಾನದ ವೇಗದ ಜಗತ್ತಿನಲ್ಲಿ ನಾವಿನ್ಯತೆ ಮತ್ತು ಪ್ರಾಯೋಗಿಕ ಸಮಸ್ಯಾ ಪರಿಹಾರಕ್ಕೆ ವೇಗವರ್ಧಕವಾಗಿ ಹ್ಯಾಕಥಾನ್ ಒಂದು ವೇದಿಕೆಯನ್ನು ಒದಗಿಸುತ್ತದೆ ಇದನ್ನು ಸರಿಯಾಗಿ ಸದುಪಯೋಗ ಪಡಿಸಿಕೊಳ್ಳಬೇಕೆಂದು ಇಂದು ಎಸ್.ಜಿ.ಬಿ.ಐ.ಟಿ ಯಲ್ಲಿ ನಡೆದ ಸ್ಮಾರ್ಟ ಇಂಡಿಯಾ ಹ್ಯಾಕಥಾನ್ -2025 ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಡಾ. ಬಿ.ಆರ್.ಪಟಗುಂದಿ ಅವರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹದ ನುಡಿಗಳನ್ನಾಡಿದರು.
ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಎಫ್.ವ್ಹಿ.ಮಾನ್ವಿ ಅವರು ಸ್ಪರ್ಧೆಯಲ್ಲಿ ಭಾಗಿಯಾದ ವಿದ್ಯಾರ್ಥಿಗಳಿಗೆ ಅಭಿನಂದಿಸುತ್ತಾ ತಂತ್ರಜ್ಞಾನ ಶಕ್ತಿಯನ್ನು ಬಳಸಿಕೊಂಡು ನವೀನ ಆಲೋಚನೆಗಳೊಂದಿಗೆ ಮುಂಬರುವ ರಾಷ್ಟ್ರೀಯ ಹ್ಯಾಕಥಾನ್ ಸ್ಪರ್ಧೆಯಲ್ಲಿ ಗೆಲ್ಲಲು ವಿದ್ಯಾರ್ಥಿಗಳು ಉತ್ತಮವಾಗಿ ತಯಾರಿ ನಡೆಸುವಂತೆ ಪ್ರೇರೇಪಿಸಿದರು.
ನಾವಿನ್ಯತೆ ತಂತ್ರಜ್ಞಾನ ಆಧಾರಿತ ಮೂಲ ಮಾದರಿಗಳನ್ನು ಅಭಿವೃದ್ಧಿ ಪಡಿಸಲು ಬೆಂಬಲ ಮತ್ತು ಸರ್ಕಾರದಿಂದ ಹಣಕಾಸಿನ ನೆರವು ನೀಡುಲಾಗುವುದೆಂದು ನೈನ್ 2.0 ದ ಸಂಯೋಜಕ ಡಾ. ಸುರೇಶ್ ಅಕ್ಕೋಳೆ ಅವರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಸ್ಪೋಕ್ ಸಂಯೋಜಕ ಪ್ರೋ.ರಾಜೇಶ್ವರಿ ಕಿಸಾನ್ ಯೋಜನಾ ಸಂಯೋಜಕ ಪ್ರೋ. ಸುವರ್ಣಾ ಕರ್ಕಿ ಹಾಗೂ ಡೀನ್ ಅಕಾಡೆಮಿಕ್ ಮುಖ್ಯಸ್ಥ ಡಾ. ಅಶೋಕ ಹುಲಗಬಳಿ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನೆರವೇರಿಸಿದರು. ಮಹಾವಿದ್ಯಾಲಯದ ಎಲ್ಲ ವಿಭಾಗದ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ 