ಕೌಶಲ್ಯ ತರಬೇತಿಯಿಂದ ಉತ್ತಮ ಬದುಕು ಸಾಧ್ಯ: ಮಾವಿನಕುರವೆ
ಹಾರೂಗೇರಿ: ಹಳ್ಳಿಗಳಲ್ಲಿ ಹೈನುಗಾರಿಕೆಗೆ ಬೇಕಾದ ಎಲ್ಲಾ ಸೌಕರ್ಯಗಳು ಇರುವುದರಿಂದ ಸ್ವ ಸಹಾಯ ಸಂಘದ ಸದಸ್ಯರುಗಳು ಹೆಚ್ಚು ಹೆಚ್ಚು ಹೈನುಗಾರಿಕೆಯಲ್ಲಿ ತೊಡಗಿ ಹೆಚ್ಚಿನ ಆದಾಯವನ್ನು ಪಡೆದು ತಮ್ಮ ಜೀವನ ಮಟ್ಟವನ್ನು ಸುಧಾರಿಸಿಕೊಳ್ಳಬೇಕು ಹಾಗೂ ನಬಾರ್ಡವು ಯಾವುದೇ ವ್ಯಕ್ತಿಯನ್ನು ಪ್ರತಿನಿಧಿಯಾಗಿ( ಏಜಂಟ್) ನೇಮಿಸಿರುವುದಿಲ್ಲಾ. ಹಲವಾರು ಜನ ನಬಾರ್ಡ ನ ಪ್ರತಿನಿಧಿ ಎಂದು ಜನರಿಗೆ ನಂಬಿಸಿ ಮೋಸಮಾಡುತ್ತಿದ್ದಾರೆ. ಹಾಗಾಗಿ ತಾವುಗಳು ಅದಕ್ಕೆ ಅವಕಾಶ ಕೊಡದೇ ತಮಗೆ ಸಹಾಯ ಧನ ಸಾಲ ಬೇಕಾದಲ್ಲಿ ನೇರವಾಗಿ ಬ್ಯಾಂಕುಗಳಿಗೆ ಹೋಗಿ ಅಜರ್ಿಗಳನ್ನು ಸಲ್ಲಿಸಿ, ಅಲ್ಲಿಂದಲೇ ಸಾಲ ಸವಲತ್ತುಗಳನ್ನು ಪಡೆದುಕೊಳ್ಳಬಹುದು. ಹೈನುಗಾರಿಕೆಯು ಕೇವಲ ಒಂದು ಉದ್ಯೋಗ ಅಷ್ಟೇ ಆಗದೇ ಒಂದು ಉದ್ದಿಮೆಯಾಗಿ ಬೆಳೆಯಬೇಕು ಎಂದು ಬೆಳಗಾವಿಯ ನಬಾರ್ಡ ಬ್ಯಾಂಕಿನ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಆದಿತ್ಯ ಮಾವಿನಕುರವೆ ಹೇಳಿದರು.
ಅವರು ನಬಾರ್ಡ ಬೆಂಗಳೂರು ಹಾಗೂ ಜನನಿ ಸಮಗ್ರ ಅಭಿವೃದ್ಧಿ ಸಂಸ್ಥೆ ಮುನ್ಯಾಳ ಇವುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಲೆವಲಿಹುಡ್ ಎಂಟರಪ್ರೈಜಸ್ ಡೆವೆಲಪಮೆಂಟ್ ಪ್ರೋಗ್ರಾಮ್ (ಐಇಆಕ) ಯೋಜನೆಯಡಿಯಲ್ಲಿ ಅಲಖನೂರಿನ 7 ದಿನಗಳ ಹೈನುಗಾರಿಕೆ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದರು. ಈ ರೀತಿಯ ತರಬೇತಿಗಳನ್ನು ಮಾಡಲು ನಬಾರ್ಡ ಬ್ಯಾಂಕು ಕೂಡಾ ಸಹಾಯ ಧನ ನೀಡುತ್ತದೆಂದು ಹೇಳಿದರು.
ಮುಖ್ಯ ಅತಿಥಿ ಲೀಡ್ ಬ್ಯಾಂಕ ಜಿಲ್ಲಾ ವ್ಯವಸ್ಥಾಪಕ ಬಿ. ನಾಗರಾಜು ಮಾತನಾಡಿ, ನಬಾರ್ಡದಿಂದ ಬಂದ ಪ್ರತಿಯೊಂದು ಯೋಜನೆಗೂ ನಮ್ಮ ರಾಷ್ಟ್ರೀಕೃತ ಬ್ಯಾಂಕುಗಳಿಂದ ಸಾಲ ಸೌಲಭ್ಯಗಳನ್ನು ಸಂಘಗಳಿಗೆ ನೀಡಿದ್ದೇವೆ. ಏಜಂಟ್ಗಳನ್ನು ನಂಬಿ ಮೋಸ ಹೋಗದಿರಿ. ಯವುದೇ ರೀತಿಯ ಸಾಲ ಸಹಾಯಧನ ಸೌಲಭ್ಯಗಳು ಬಂದರೂ ಅವೂ ಬ್ಯಾಂಕುಗಳಿಂದಲೇ ವಿತರಣೆಯಾಗುತ್ತವೆ ಆದ್ದರಿಂದ ಯಾರಿಗೂ ಲಂಚ ಕೋಡುವ ಅವಶ್ಯಕತೆ ಇರುವುದಿಲ್ಲಾ ಎಂದರು.
ಅಂಗನವಾಡಿ ಮೇಲ್ವಚಾರಕಿ ಎಸ್.ಎಸ್. ತಮದಡ್ಡಿ ಮಾತನಾಡಿ, ಸ್ವ ಸಹಾಯ ಸಂಘದ ಸದಸ್ಯರುಗಳು ಇಂತಹ ತರಬೇತಿಗಳನ್ನು ಪಡೆದು ಅದರ ಸದುಪಯೋಗ ಪಡೆದುಕೊಳ್ಳಬೇಕು. ಈ ತರಬೇತಿಯನ್ನು ಆಯೋಜಿಸಿದ ನಬಾರ್ಡ ಹಾಗೂ ಜನನಿ ಸಂಸ್ಥೆಯ ಕಾರ್ಯ ನಿಜವಾಗಲೂ ಶ್ಲಾಘನಿಯ ಎಂದರು.
ಗ್ರಾ.ಪಂ. ಸದಸ್ಯರಾದ ಸದಾಶಿವ ಪೂಜೇರಿ, ಸೋನವ್ವಾ ಸನದಿ, ಕರೆಪ್ಪಾ ಪೂಜೇರಿ, ರಾಮಪ್ಪಾ ಪೂಜೇರಿ, ಸಂಸ್ಥೆ ಸಿಬ್ಬಂದಿ ವಿಶ್ವನಾಥ ಯಾಳವರಮಠ, ಕೆಂಪವ್ವಾ ಬಿರಾದಾರ ಹಾಗೂ ಅಂಗನವಾಡಿ ಕಾರ್ಯಕತರ್ೆಯರು, ಆಶಾ ಕಾರ್ಯಕತರ್ೆಯರು ಮತ್ತು ಆಯ್ದ ಮಹಿಳಾ ಸ್ವ ಸಹಾಯ ಸಂಘಗಳ ಸದಸ್ಯರುಗಳು ಭಾಗಿಯಾಗಿದ್ದರು.
ಗ್ರಾ.ಪಂ. ಅಧ್ಯಕ್ಷ ಶಂಕರ ಕಾಂಬಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜನನಿ ಸಂಸ್ಥೆಯ ಕಾರ್ಯದಶರ್ಿ ಆನಂದ ಸುಳ್ಳನವರ ಸ್ವಾಗತಿಸಿ, ತರಬೇತಿಯ ಲಾಭಗಳನ್ನು ಹೇಳಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಭರಮು ಪೂಜೇರಿ ನಿರೂಪಣೆ ಮಾಡಿದರು. ಜನನಿ ಸಂಸ್ಥೆಯ ಸಿಬ್ಬಂದಿ ಪ್ರಭಾಕರ ಮುಗಳಖೋಡ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 